LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bellary

ನೇರ ಮಾರಾಟ ರೈತರ ಹೋರಾಟ ; ಕೃಷಿಯೇ ನಮ್ಮ ಉಸಿರು  :  ಚುಕ್ಕಿ ನಂಜುಂಡಸ್ವಾಮಿ 

ಬಳ್ಳಾರಿ. ಆ. 28: ಎಲ್ಲಾ ಸರ್ಕಾರಗಳು ಬಹು ರಾಷ್ಟ್ರೀಯ ಕಂಪನಿಗಳ, ಬಂಡವಾಳಶಾಹಿದಾರರ ಕೈ ಗೊಂಬೆಗಳಾಗಿ ರೈತರ ಜಮೀನುಗಳನ್ನು ತಾವೇ ಕೈಯಾರ ಮಾರಾಟ ಮಾಡುವಂತ ಸಂದರ್ಭವನ್ನು ಸೃಷ್ಟಿಸುತ್ತಿದ್ದಾರೆ ಬಹಳಷ್ಟು ಜನ ರೈತರು ಇಂತಹ ಕಪಿಮುಷ್ಟಿಗೆ ಸಿಲುಕಿ ಕೃಷಿ ಭೂಮಿಯನ್ನು ಕಳೆದುಕೊಂಡಿದ್ದಾರೆ ಕೃಷಿಯೇ ನಮ್ಮ ಉಸಿರು ಎಂದುಕೊಂಡು ಜೀವನ ಮಾಡುತ್ತಿರುವ ರೈತ ಕುಟುಂಬಗಳನ್ನು ಈ ರೀತಿಯಾಗಿ ಬೀದಿಗೆ ತಳ್ಳಲಾಗುತ್ತಿದೆ ಅಥವಾ ಆತ್ಮಹತ್ಯೆ ಎಡೆಗೆ ನೂಕುತ್ತಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಚುಕ್ಕಿ ನಂಜುಂಡಸ್ವಾಮಿ ಸರ್ಕಾರಗಳ ವಿರುದ್ಧ  ಬೇಸರವನ್ನು  ವ್ಯಕ್ತಪಡಿಸಿದರು.
 ಅವರು ಬುಧವಾರದಂದು ನಗರದ ಗಾಂಧಿ ಭವನದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನಮ್ದು ಸಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ರಾಸಾಯನಿಕ ಮತ್ತು ಕ್ರಿಮಿನಾಶಕಗಳಿಂದ ಬೆಳೆಯುವ ಬೆಳೆಯನ್ನು ಉಂಡು ಪ್ರತಿ ಐದು ಜನರಲ್ಲಿ ಒಬ್ಬರಿಗೆ ಕ್ಯಾನ್ಸರ್, ಕಿಡ್ನಿ, ಲಿವರ್ ಸೇರಿದಂತೆ ಹಲವು ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ  ರೈತರು ಬೆಳೆಯುವ ಬೆಳೆಯಿಂದಲೇ ಅಥವಾ ಆಹಾರ ಪದಾರ್ಥಗಳಿಂದಲೇ ಈ ರೀತಿಯ ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ, ಬಹುರಾಷ್ಟ್ರೀಯ ಕಂಪನಿಗಳು ರೈತರ ಹೊಲಗಳಿಗೆ ವಿಷಉಣ್ಣಿಸುವಂತೆ ಪ್ರೇರೇಪಿಸುತ್ತಿದ್ದಾರೆ, ಅದೇ ಹೊಲದಲ್ಲಿ ಬೆಳೆದ ರಸಾಯನಿಕ ಅಂಶಗಳನ್ನು ಒಳಗೊಂಡ ಆಹಾರಗಳನ್ನು ತಿನ್ನುತ್ತಿದ್ದಾರೆ ಇಂತಹ ಗಂಭೀರ ಕಾಯಿಲೆಗಳಿಗೆ   ವಿಷಯುಕ್ತ ಆಹಾರವೇ ಮೂಲ ಕಾರಣ ಎಂದು ಕೇದವನ್ನು ವ್ಯಕ್ತಪಡಿಸಿದರು.
 ಇದರಿಂದಾಗಿ ರೈತ ಸಂಘಟನೆ ಸಾವಯವ ಕೃಷಿ ಕಡೆಗೆ ಮಗ್ಗುಲು ಬದಲಾಯಿಸಿ ವಿಷಮುಕ್ತ ಆಹಾರಗಳನ್ನು ಬೆಳೆಯುವ ಪದ್ಧತಿಯನ್ನು  ಅಳವಡಿಸಿಕೊಳ್ಳುತ್ತಿದ್ದಾರೆ, ಇಂತಹ ರೈತರನ್ನು ಸಹ ಇಳುವರಿ ಮತ್ತು ಬೆಲೆಯ ವಿಷಯವನ್ನು ಮುಂದಿಟ್ಟು ಅವರನ್ನು ಸಹ ದಾರಿ ತಪ್ಪಿಸಲು ಪ್ರಯತ್ನಿಸಲಾಗುತ್ತಿದೆ, ಯಾವುದೇ ಕಾರಣಕ್ಕೂ ಸಾವಯವ ಕೃಷಿಯಿಂದ ನಷ್ಟವಾಗುವುದಿಲ್ಲ ಕಡಿಮೆ ಬೆಲೆ ಬಂದರೂ ಸಹ ಉತ್ತಮ ಬೆಲೆ ಪಡೆಯಬಹುದಾಗಿದೆ ಎಂದ ಅವರು, ಇಂಥ ರೈತರು ಬೆಳೆದ ಬೆಳೆಯನ್ನು ತಾವೇ ಬಳಕೆದಾರರಿಗೆ  ಮಾರಾಟ ಮಾಡಿ ಅಧಿಕ ಲಾಭವನ್ನು ಗಳಿಸಬಹುದು, ಆದ್ದರಿಂದಲೇ ರೈತ ಸಂಘದಿಂದ ನಮ್ದು ಸಂತೆ ಕಲ್ಪನೆ ಅಡಿಯಲ್ಲಿ ಆರಂಭಿಸಲಾಗಿದೆ, ಇಲ್ಲಿ ದಲ್ಲಾಳಿಗಳಿಲ್ಲ ಆರ್ಗನಿಕ್ ಎಂಬ ಪದವಿಲ್ಲ  ರೈತರೇ ತಮ್ಮ ಹೊಲಗಳಲ್ಲಿ ಬೆಳೆದ ವಿಷ ಮುಕ್ತ ಆಹಾರ ಪದಾರ್ಥಗಳನ್ನು ನೇರವಾಗಿ ಬಳಕೆದಾರರಿಗೆ ಮಾರಾಟ ಮಾಡುತ್ತಿದ್ದಾರೆ, ನೇರ ಮಾರಾಟವೇ ರೈತರ  ಹೋರಾಟವಾಗಿದೆ ಎಂದು ಚುಕ್ಕಿ ನಂಜುಂಡಸ್ವಾಮಿ ಅಭಿಪ್ರಾಯಪಟ್ಟರು.
 ಈ ಸಂದರ್ಭದಲ್ಲಿ ಸಾಲ ಮುಕ್ತ ಕೃಷಿ ಮಹಿಳೆ ಎಂಬ ಸಂಘವನ್ನು ಸಹ ಉದ್ಘಾಟಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಝಳಕಿ : ಅಣ್ಣ ನನ್ನ ಮಾನ, ಪ್ರಾಣ ರಕ್ಷಣೆ ಕೊಡುವ ಸಂಕೇತ ರಕ್ಷಾ ಬಂಧನ ರಾಘವೇಂದ್ರ ಕಾಪಸೆ.·  ಇಂಡಿ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹ: ತಹಶೀಲ್ದಾರ್‌ಗೆ ರೈತ ಸಂಘ ಮನವಿಕೊಪ್ಪಳ ಸಿಟಿ ಹೊರವಲಯದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಸ್ಥಳ ಖುದ್ದು ಪರಿಶೀಲಿಸಿದ ಜಿಲ್ಲಾಧಿಕಾರಿಗಳುಗ್ರಾಮದ ದೇವಸ್ಥಾನ, ಸರಕಾರಿ ಶಾಲೆ ಬಳಿ ಮದ್ಯದಂಗಡಿ ತೆರೆಯಲು ವಿರೋಧ/ ಸಿದ್ದೇವಾಡಿ ಗ್ರಾಮಸ್ಥರಿಂದ ಪ್ರತಿಭಟನೆ, ಮನವಿತಾಲ್ಲೂಕು ಆಡಳಿತದಿಂದ ಬ್ರಹ್ಮಶ್ರೀ ನಾರಾಯಣಗುರು, ಶರಣ ನುಲಿಯ ಚಂದಯ್ಯನವರ ಜಯಂತಿ ಆಚರಣೆಯರಗಟ್ಟಿ: ನೂಲು ಹುಣ್ಣಿಮೆ ಪ್ರಯುಕ್ತ ಶ್ರೀ ವೀರಭದ್ರೇಶ್ವರ ಸ್ವಾಮಿ ಜತ್ರೆ ವೈಭವಸಂಕೇಶ್ವರದಲ್ಲಿ ರಕ್ಷಾಬಂಧನ: ಸಮಾಜದ ರಕ್ಷಕರಿಗೆ ರಾಖಿ ಕಟ್ಟಿ ಗೌರವಿಸಿದ ಎ.ಬಿ. ಪಾಟೀಲ ಶಾಲೆಯ ವಿದ್ಯಾರ್ಥಿನಿಯರುಬಸವನ ಕುಡಚಿಯಲ್ಲಿ ಶ್ರಾವಣ ಮಾಸದ ಪ್ರಯುಕ್ತ ಮಹಾಪ್ರಸಾದ5 ವರ್ಷಗಳ ನಂತರ ಧಾರವಾಡಕ್ಕೆ ಮರಳಿದ ಶಾಸಕ ವಿನಯ ಕುಲಕರ್ಣಿ.ಕಾರ್ಯಕರ್ತರಲ್ಲಿ ಸಂತಸ.ಘಟಪ್ರಭಾದಲ್ಲಿ ನೂಲ ಚಂದಯ್ಯ ಅವರ ಜಯಂತಿ