LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ರಾಯಬಾಗದಲ್ಲಿ ’ಸೈಕ್ಲೋಥಾನ್-೨೦೨೬’: ಅಭಾಜಿ ಫೌಂಡೇಶನ್‌ನಿಂದ ’ಸೈಕಲ್ ಸವಾರಿ ಆರೋಗ್ಯದ ರೂವಾರಿ’ ಅಭಿಯಾನಕ್ಕೆ ಚಾಲನೆ

 

ರಾಯಬಾಗ: ಇಂದಿನ ಒತ್ತಡದ ಯುಗದಲ್ಲಿ ಪ್ರತಿಯೊಬ್ಬರೂ ತಮ್ಮ ಕೆಲಸ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಿ ಶರೀರದ ಕಡೆಗೆ ಹೆಚ್ಚು ಕಾಳಜಿ ವಹಿಸುತ್ತಿಲ್ಲವಾದ್ದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಅಭಾಜಿ ಫೌಂಡೇಶನ್ ಅಧ್ಯಕ್ಷ ಹಾಗೂ ಜಿ.ಪಂ.ಮಾಜಿ ಸದಸ್ಯ ಪ್ರಣಯ ಪಾಟೀಲ ಹೇಳಿದರು. 

 ಸೋಮವಾರ  ತಾಲೂಕಿನ ಚಿಂಚಲಿ ಮಹಾಕಾಳಿ ಗಜಾನನ ಮಿತ್ರ ಮಂಡಳಿಯ ಸಹಭಾಗಿತ್ವದೊಂದಿಗೆ “ಸೈಕಲ್ ಸವಾರಿ ಆರೋಗ್ಯದ ರೂವಾರಿ” ಅಭಿಯಾನ ಸೈಕ್ಲೋಥಾನ್-೨೦೨೬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾವು ನಮ್ಮ ಜೀವನದಲ್ಲಿ ನಿರೋಗಿಗಳಾಗಿ ಬಾಳಬೇಕಾದರೆ ನಮ್ಮ ದೇಹವನ್ನು ದಂಡಿಸಬೇಕು. ಪ್ರತಿದಿನ ಸೈಕಲ್ ಮೇಲೆ ಕನಿಷ್ಟ ೧೦-೨೦ ಕಿಮಿ ದೂರ ಕ್ರಮಿಸಿ ಶರೀರವನ್ನು ಸದೃಢಗೊಳಿಸಬೇಕೆಂದರು. 

   ಸೈಕಲ್ ಅಭಿಯಾನವು ಚಿಂಚಲಿ ಪಟ್ಟಣದಿಂದ ಪ್ರಾರಂಭವಾಗಿ ಪಟ್ಟಣದ ಅಭಾಜಿ ವೃತ್ತಕ್ಕೆ ಆಗಮಿಸಿ, ರಾಯಬಾಗ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪುನಃ ಚಿಂಚಲಿ ಪಟ್ಟಣಕ್ಕೆ ಹಿಂದಿರುಗಿತು. ಅಭಿಯಾನದಲ್ಲಿ ಸೈಕಲ್ ಬಳಕೆ ಹಾಗೂ ಆರೋಗ್ಯ ಕುರಿತು ಘೋಷಣೆಗಳನ್ನು ಕೂಗುತ್ತ ಜನರಲ್ಲಿ ಜಾಗೃತಿ ಮೂಡಿಸಲಾಯಿತು. 

 ರಾಜು ಅಳಾಜ, ಸಂಜೀವ ಟೇಳೆ, ಹನಮಂತ ಠಕ್ಕನ್ನವರ ಸೈಕಲ್ ಜಾಗೃತಿ ಅಭಿಯಾನ ಕುರಿತು ಮಾಹಿತಿ ನೀಡಿದರು.

    ಏಸು ಪಾಟೀಲ, ರಾಜು ಬನಗೆ, ಜಾಕೀರ ತರಡೆ ಸೇರಿ ಅನೇಕರು ಇದ್ದರು. 

 ಸೈಕ್ಲೋಥಾನ್-೨೦೨೬ ರ ಸೈಕಲ್ ಅಭಿಯಾನದಲ್ಲಿ ಚಿಂಚಲಿ, ಉಗಾರ, ರಾಯಬಾಗ, ಹಾರೂಗೇರಿ ಸೇರಿದಂತೆ ೫೦ ಕ್ಕೂ ಹೆಚ್ಚು ಸೈಕಲ್ ಪಟುಗಳು ಭಾಗವಹಿಸಿದ್ದರು. 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಯಬಾಗದಲ್ಲಿ ’ಸೈಕ್ಲೋಥಾನ್-೨೦೨೬’: ಅಭಾಜಿ ಫೌಂಡೇಶನ್‌ನಿಂದ ’ಸೈಕಲ್ ಸವಾರಿ ಆರೋಗ್ಯದ ರೂವಾರಿ’ ಅಭಿಯಾನಕ್ಕೆ ಚಾಲನೆ*ಕಂಗ್ರಾಳಿ ಕೆ.ಎಚ್‌ನಲ್ಲಿ ₹20 ಲಕ್ಷ ವೆಚ್ಚದಲ್ಲಿ ಶ್ರೀ ವಿಠ್ಠಲ–ರುಕ್ಮಾಯಿ ಮಂದಿರದ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ*      ಚೆನ್ನೈನಲ್ಲಿ ನಡೆಯುವ  ರಾಷ್ಟ್ರಮಟ್ಟದ " ವುಶು" ಚಾಂಪಿಯನ್ಶಿಪ್ ಗೆ _ಜಿಲ್ಲೆಯ 5 ಪಟುಗಳು ಅಯ್ಕೆ .ಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ ‘ಪ್ರಜಾಸೇವೆ': ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಿ: ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ.ಬಳ್ಳಾರಿಯಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆ ಸುಸೂತ್ರ: ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಖುದ್ದು ಭೇಟಿ, ಪರಿಶೀಲನೆಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿಯಾಗಿ ಚಾಂದಿನಿ ನೇಮಕಸಹಕಾರಿಗಳ ಸಹಕಾರವೇ ಸಹಕಾರ ಚಳವಳಿಯ ಯಶಸ್ವಿ : ಶ್ರೀಮತಿ ಪಲ್ಲೇದ ಮೈತ್ರಿ ಕೊಣ್ಣೂರ ಗ್ರಾಮ ಅಭಿವೃದ್ದಿ ಕುರಿತು ಡಿಸಿ, ಸಿಇಓ ಜಂಟಿ ಸಭೆ