ಬಳ್ಳಾರಿ. 02: ನಗರದ ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ರಾವ್ ಬಹದ್ದೂರ್ ವ್ಯ. ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜು (R.Y.M.E.C.) ಪ್ರಸಕ್ತ ಶೈಕ್ಷಣಿಕ ಸಾಲಿನ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯಲ್ಲಿ ಅಭೂತಪೂರ್ವ ಸಾಧನೆ ಮಾಡಿದ. ಕಳೆದ ಮೂರು ದಿನಗಳಿಂದ ಕಾಲೇಜಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರತಿಷ್ಠಿತ ಕಂಪನಿಗಳಿಂದ ಒಟ್ಟು ೧೫೧ ವಿದ್ಯಾರ್ಥಿಗಳು ಉದ್ಯೋಗಕ್ಕೆ ಆಯ್ಕೆಯಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಜಾನಕುಂಟೆ ಬಸವರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವರ್ಷದ ಕ್ಯಾಂಪಸ್ ನೇಮಕಾತಿಯ ಪ್ರಮುಖ ವಿಶೇಷವೆಂದರೆ, ಕಾಲೇಜಿನ ಪ್ರಮುಖ ಕೋರ್ ಇಂಜಿನಿಯರಿಂಗ್ ವಿಭಾಗಗಳಾದ ಎಲೆಕ್ನಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ (EEE), ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ (ECE) ಹಾಗೂ ಮಕ್ಯಾನಿಕಲ್ ఇంజినియరింగా ಉದ್ಯೋಗಾವಕಾಶಗಳನ್ನು ವಿದ್ಯಾರ್ಥಿಗಳು ಪಡೆದುಕೊಂಡಿರುವುದು.
L.S. Automotive, TVS Brakes Indin e Accord Software & Systems ಪ್ರತಿಷ್ಠಿತ ಕಂಪನಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಯಶಸ್ಸು ಸಾಧಿಸಿದ್ದಾರೆ. ಈ ಸಾಧನೆಯು ಕಾಲೇಜಿನ ಶೈಕ್ಷಣಿಕ ಗುಣಮಟ್ಟ ವಿದ್ಯಾರ್ಥಿಗಳ ವರಿಶ್ರಮ, ಅಧ್ಯಾವಕರ ಮಾರ್ಗದರ್ಶನ ಹಾಗೂ ತರಬೇತಿ ಮತ್ತು ಉದ್ಯೋಗ ಘಟಕದ ನಿರಂತರ ಪ್ರಯತ್ನಕ ಸಾಕ್ಷಿಯಾಗಿದೆ.
ಇದಲ್ಲದೆ, ಇನ್ನೂ ೧೬ ಪ್ರತಿಷ್ಠಿತ ಕಂಪನಿಗಳು ಕ್ಯಾಂಪಸ್ ನೇಮಕಾತಿಗಾಗಿ ಕಾಲೇಜಿಗೆ ಭೇಟಿ ನೀಡಲು ಒಪ್ಪಿಗೆ ಸೂಚಿಸಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು
ಉದ್ಯೋಗಾವಕಾಶಗಳನ್ನು ಪಡೆಯುವ ನಿರೀಕ್ಷೆಯಿದೆ. ಇದರಿಂದ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಕಾಲೇಜಿನ ಕ್ಯಾಂಪಸ್ ನೇಮಕಾತಿ ಸಾಧನೆ ಮತ್ತಷ್ಟು ಹೆಚ್ಚಾಗುವ ವಿಶ್ವಾಸವಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಈ ಸಾಧನೆಯು ನಮ್ಮ ಸಂಸ್ಥೆಗೆ ಹೆಮ್ಮೆಯ ಕ್ಷಣವಾಗಿದೆ. ವಿದ್ಯಾರ್ಥಿಗಳು ಕೇವಲ ಉದ್ಯೋಗ ಪಡೆಯುವುದಕ್ಕೆ ಸೀಮಿತವಾಗದೆ, ತಮ್ಮ ಜ್ಞಾನ, ಕೌಶಲ್ಯ, ಪರಿಶ್ರಮ ಮತ್ತು ಪ್ರಾಮಾಣಿಕತೆಯ ಮೂಲಕ ಉತ್ತಮ ವೃತ್ತಿಪರರಾಗಿ ಬೆಳೆದು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆಯುವಂತಾಗಲಿ ಎಂಬುದು ಕಾಲೇಜಿನ ಆಶಯವಾಗಿದೆ ಎಂದು ಜಾನಿಕುಂಟೆ ಬಸವರಾಜ್ ಹರ್ಷವನ್ನು ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕಣೇಕಲ್ ಮಹಾಂತೇಶ, ಸಂಘದ ಉಪಾಧ್ಯಕ್ಷರು ಹಾಗೂ ಆರ್.ವೈ.ಎಂ.ಇ.ಸಿ. ಅಧ್ಯಕ್ಷರಾದ ಜಾನಕುಂಟೆ ಬಸವರಾಜ್, ಕಾರ್ಯದರ್ಶಿಗಳಾದ ಡಾ. ಅರವಿಂದ್ ಪಟೇಲ್, ಸಹಾಯಕ ಕಾರ್ಯದರ್ಶಿಗಳಾದ ಯಾಲಿ ಮೇಟಿ ವಂಪನಗೌಡ, ಕೋಶಾಧಿಕಾರಿಗಳಾದ ಬೈಲುವದ್ದಿಗೇರಿ ಎರಿಸ್ವಾಮಿ, ಆಡಳಿತ ಮಂಡಳಿ ಸದಸ್ಯರಾದ ಶ್ರೀ ಪ್ರಭುಸ್ವಾಮಿ ಎಸ್.ಎಂ. ಹಾಗೂ ಬಾಡದ ಪ್ರಕಾಶ್ ಅವರು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.