LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bellary

ಬಳ್ಳಾರಿ: ಪೋಷಕರ ಪತ್ತೆಗಾಗಿ ಮೂಕ ಬಾಲಕನ ಪರವಾಗಿ ಮನವಿ


ಬಳ್ಳಾರಿ,ಆ.20 ನಗರದಲ್ಲಿ ಅಲೆದಾಡುತ್ತಿದ್ದ ಅಂದಾಜು 12 ವರ್ಷದ ಮೂಕ ಬಾಲಕನೊಬ್ಬ ರಕ್ಷಣೆಯಾಗಿದ್ದು, ಆತನ ಪೋಷಕರ ಪತ್ತೆಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಜೂನ್ 6ರಂದು ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಸಿಬ್ಬಂದಿ ಈ ಬಾಲಕನನ್ನು ರಕ್ಷಿಸಿ, ತಾತ್ಕಾಲಿಕ ಆಶ್ರಯ ಹಾಗೂ ರಕ್ಷಣೆಗಾಗಿ ಇಲ್ಲಿನ ಸರ್ಕಾರಿ ಬಾಲಕರ ಬಾಲಮಂದಿರಕ್ಕೆ ದಾಖಲಿಸಿದ್ದರು.
ಬಾಲಕನು ಮೂಕನಾಗಿದ್ದು ಮಾತನಾಡಲು ಬರುವುದಿಲ್ಲ. ಜೊತೆಗೆ ಯಾವುದೇ ಭಾಷೆಯಲ್ಲಿ ಓದಲು, ಬರೆಯಲು ಬಾರದಿರುವುದರಿಂದ ಆತನ ಹೆಸರು, ಊರು ಹಾಗೂ ಪೋಷಕರ ವಿವರ ಲಭ್ಯವಾಗಿಲ್ಲ. ಈ ಹಿಂದೆ ಆತನ ಹೆಸರಿನಲ್ಲಿ ಯಾವುದೇ ಆಧಾರ್ ನೋಂದಣಿಯೂ ಆಗಿಲ್ಲದಿರುವುದು ಪರಿಶೀಲನೆ ವೇಳೆ ತಿಳಿದುಬಂದಿದೆ.
*ಚಹರೆ ಗುರುತು:*
ಎತ್ತರ 4.2 ಅಡಿ, 40 ಕೆ.ಜಿ ತೂಕ, ಸಾಧಾರಣ ಮೈಕಟ್ಟು, ಉದ್ದ ಮುಖ, ಕಪ್ಪು ಮೈ ಬಣ್ಣ, ಕಪ್ಪು ತಲೆ ಕೂದಲು ಹೊಂದಿರುತ್ತಾನೆ. ಕಿವುಡ ಮತ್ತು ಮೂಗ, ಸಾಮಾನ್ಯ ಗುಣ ಸ್ವಭಾವದನಾಗಿರುತ್ತಾನೆ. ಬಾಲಕ ಸಿಕ್ಕಾಗ ಕಪ್ಪು ಬಣ್ಣದ ಪ್ಯಾಂಟ್ ಮತ್ತು ಹಳದಿ ಚೆಕ್ ಅಂಗಿ ಧರಿಸಿರುತ್ತಾನೆ.
ಈ ಬಾಲಕನ ಬಗ್ಗೆ ಯಾರಿಗಾದರೂ ಮಾಹಿತಿ ತಿಳಿದಿದ್ದಲ್ಲಿ ಅಥವಾ ಆತನ ಪೋಷಕರ ಸುಳಿವು ದೊರೆತಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಾಂತಿಧಾಮ ಆವರಣ ಹತ್ತಿರ, ಎನ್.ಸಿ.ಸಿ. ಕಾಂಪೌAಡ್, ಕಂಟೋನ್ಮೆAಟ್, ಬಳ್ಳಾರಿ ಅಥವಾ ದೂ.08392-241373, 08392-242065, ಅಧೀಕ್ಷಕರ ಮೊ.9886555312, 8618825644 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಮಾಜ ನಮಗೇನು ಕೊಟ್ಟಿದೆ ಎನ್ನುವದಕ್ಕಿಂತ ನಾವು ಸಮಾಜಕ್ಕೆ ಏನು ಮಾಡಿದ್ದೇವೆ ಎನ್ನುವದನ್ನು ಅರಿಯಿರಿ  :ಡಾ. ಅಲ್ಲಮಪ್ರಭು ಶ್ರೀಗಳು ಎನ್‌ಕೌಂಟರ್ ಪ್ರತಿಕಾರಕ್ಕೆ 10 ಎಕರೆ ಅರಣ್ಯವೇ ಬಲಿ!ಬಿ. ನಾಗೇಂದ್ರಗೆ ಹೈಕೋರ್ಟ್ ಆಘಾತ: ರಾಜ್ಯ ಬಿಟ್ಟು ತೆರಳದಂತೆ ಆದೇಶತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಡಿಎಚ್‌ಒ ಡಾ.ಅಲಕಾನಂದ ಮಳಗಿ ದಿಢೀರ್ ಭೇಟಿ: ವೈದ್ಯರು, ಸಿಬ್ಬಂದಿಗೆ ಖಡಕ್ ಸೂಚನೆ"ತೆರಿಗೆದಾರರಿಗೆ ಗೌರವ ನೀಡಿ, ಸಮಾಲೋಚಿಸಿ" ಬಳ್ಳಾರಿ: ಪೋಷಕರ ಪತ್ತೆಗಾಗಿ ಮೂಕ ಬಾಲಕನ ಪರವಾಗಿ ಮನವಿಧರ್ಮಗಳ ನಡುವೆ ಸೌಹಾರ್ದತೆ ಕಾಪಾಡಿ, ಸಂಭ್ರಮದಿಂದ ಹಬ್ಬ ಆಚರಿಸಿ: ಕಿರಣ ಸತ್ತಿಗೇರಿದಿ. 27 ರಂದು "ಹೋರಾಟದ ನಡೆ ಶಾಸಕರ ಮನೆ ಕಡೆ"ಕೂಲಿ ಕೆಲಸದೊಂದಿಗೆ ವಿಮೆ ನೋಂದಣಿ ಮಾಡಿಕೊಳ್ಳಿ: ಸೌಮ್ಯರಾಜೀಯಾಗಬಲ್ಲ ಪ್ರಕರಣಗಳ ಸುಲಭ ಇತ್ಯರ್ಥಕ್ಕೆ ಅವಕಾಶ: ನ್ಯಾ. ಮಹಾಂತೇಶ ದರಗದ