LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bellary

ಬಳ್ಳಾರಿ ಜಿಲ್ಲೆ ಮತದಾರರ ಅಂತಿಮ ಪಟ್ಟಿ ಪ್ರಕಟ: ಒಟ್ಟು 10,20,443 ಮತದಾರರು


ಬಳ್ಳಾರಿ,ಅ.28: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 01.10.2026 ಅನ್ನು ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ ಸಿದ್ಧಪಡಿಸಲಾದ ವಿಶೇಷ ಸಮಗ್ರ ಪರಿಷ್ಕರಣೆ-2026 ರ ಬಳಿಕ ಮತದಾರರ ಅಂತಿಮ ಪಟ್ಟಿಯನ್ನು ಬಳ್ಳಾರಿ ಜಿಲ್ಲೆಯಲ್ಲಿ ಮಂಗಳವಾರ ಅಧಿಕೃತವಾಗಿ ಪ್ರಕಟಿಸಲಾಗಿದೆ.
ಜಿಲ್ಲೆಯ ಒಟ್ಟು 5 ವಿಧಾನಸಭಾ ಕ್ಷೇತ್ರಗಳಲ್ಲಿ 1,260 ಮತಗಟ್ಟೆಗಳಿದ್ದು, ಒಟ್ಟು 10,20,443 ಮತದಾರರಿದ್ದಾರೆ. ಇವರಲ್ಲಿ 5,01,132 ಪುರುಷರು, 5,19,110 ಮಹಿಳೆಯರು ಹಾಗೂ 201 ಇತರೆ (ತೃತೀಯ ಲಿಂಗಿ) ಮತದಾರರು ಸೇರಿದ್ದಾರೆ.
*ವಿಧಾನಸಭಾ ಕ್ಷೇತ್ರವಾರು ಮತದಾರರ ವಿವರ:*
ಕಂಪ್ಲಿ (91): ಒಟ್ಟು 253 ಮತಗಟ್ಟೆಗಳಿದ್ದು, 1,01,807 ಪುರುಷ, 1,05,343 ಮಹಿಳೆ ಹಾಗೂ 40 ಇತರೆ ಸೇರಿ ಒಟ್ಟು 2,07,190 ಮತದಾರರಿದ್ದಾರೆ.
ಸಿರುಗುಪ್ಪ (92): 244 ಮತಗಟ್ಟೆಗಳಿದ್ದು, 98,085 ಪುರುಷ, 1,00,320 ಮಹಿಳೆ ಹಾಗೂ 58 ಇತರೆ ಸೇರಿ ಒಟ್ಟು 1,98,463 ಮತದಾರರಿದ್ದಾರೆ.
ಬಳ್ಳಾರಿ ಗ್ರಾಮೀಣ (93): 238 ಮತಗಟ್ಟೆಗಳಿದ್ದು, 99,597 ಪುರುಷ, 1,03,252 ಮಹಿಳೆ ಹಾಗೂ 45 ಇತರೆ ಸೇರಿ ಒಟ್ಟು 2,02,894 ಮತದಾರರಿದ್ದಾರೆ.
ಬಳ್ಳಾರಿ ನಗರ (94): 261 ಮತಗಟ್ಟೆಗಳಿದ್ದು, 98,910 ಪುರುಷ, 1,07,021 ಮಹಿಳೆ ಹಾಗೂ 37 ಇತರೆ ಸೇರಿ ಒಟ್ಟು 2,05,968 ಮತದಾರರಿದ್ದಾರೆ.
ಸಂಡೂರು (95): 264 ಮತಗಟ್ಟೆಗಳಿದ್ದು, 1,02,733 ಪುರುಷ, 1,03,174 ಮಹಿಳೆ ಹಾಗೂ 21 ಇತರೆ ಸೇರಿ ಒಟ್ಟು 2,05,928 ಮತದಾರರಿದ್ದಾರೆ.
ಈ ಅಂತಿಮ ಮತದಾರರ ಪಟ್ಟಿಯನ್ನು ಎಲ್ಲಾ ನಿಗದಿತ ಮತಗಟ್ಟೆ ಕೇಂದ್ರಗಳಲ್ಲಿ ಹಾಗೂ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳ ಅಧಿಕೃತ ವೆಬ್‌ಸೈಟ್ (https://ceo.karnataka.gov.in/en) ಮತ್ತು ಜಿಲ್ಲಾ ಅಧಿಕೃತ ವೆಬ್‌ಸೈಟ್‌ನಲ್ಲಿ (https://ballari.nic.in/) ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ.
ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಿಕೊಂಡು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆಗಿರುವ ನಾಗೇಂದ್ರ ಪ್ರಸಾದ್.ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಾಹಿತಿ ಪ್ರೊ.ಗದ್ದಿಗೌಡರ  ಅವರ ಸಾಹಿತ್ಯ ಸೇವೆ ಅಪಾರ:ಅಶೋಕ ಚಂದರಗಿ   ಸಾಮಾಜಿಕ ಜಾಲತಾಣಗಳು ಹಾಗೂ ಬ್ಲಾಕ್‌ಮೇಲ್ ವಿರುದ್ಧ ಎಚ್ಚರ ವಹಿಸಲು ಜಿಲ್ಲಾ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಕರೆಬಳ್ಳಾರಿ ಜಿಲ್ಲೆ ಮತದಾರರ ಅಂತಿಮ ಪಟ್ಟಿ ಪ್ರಕಟ: ಒಟ್ಟು 10,20,443 ಮತದಾರರುಬಳ್ಳಾರಿ ಕನ್ನಡ ರಾಜ್ಯೋತ್ಸವ: ಧ್ವಜಾರೋಹಣ ನೆರವೇರಿಸಲಿರುವ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ನ.01 ರಂದು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಖರ್ಗೆ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ: ಕ್ಷಮೆಯಾಚನೆಗೆ ಆಗ್ರಹರೂಪನಗುಡಿ ರಸ್ತೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಬಳ್ಳಾರಿಯಲ್ಲಿ ಬೇಸ್‌ಮೆಂಟ್ ಪಾರ್ಕಿಂಗ್ ದುರ್ಬಳಕೆ ತಡೆಗೆ ಸಿದ್ದೇಶ ಊಳೂರು ಆಗ್ರಹಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 59ನೇ ವರ್ಷಾಚರಣೆಯಲ್ಲಿ  ಜಾತಿ  ತಾರತಮ್ಯ  ಸಿಪಿಐ(ಎಂ)ಖಂಡನೆಜಿಲ್ಲೆಯಲ್ಲಿ 10.8 ಲಕ್ಷ ಮತದಾರರು; 14,210 ಹೊಸ ಮತದಾರರ ಸೇರ್ಪಡೆ : ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ