ಘಟಪ್ರಭಾ. ಪಟ್ಟಣದ ಮಹಾಂತೇಶ ನಗರದ ನಿವಾಸಿಗಳು ಹಾಗೂ ಹಿರಿಯರಾದ ಬಸವಣ್ಣಿ ದಾದಪ್ಪಾ ಮಾನಗಾವಿ (84) ಅವರು ಸೋಮವಾರ ದಿನಾಂಕ 31-08-2026 ರಂದು ನಿಧನರಾದರು. ಮೃತರು ಇಬ್ಬರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಬಸವಣ್ಣಿ ಮಾನಗಾವಿ ಜೆ ಜಿ ಆಸ್ಪತ್ರೆಗೆ ದೇಹದಾನ.
ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಬಸವಣ್ಣಿ ಮಾನಗಾವಿ ಅವರು ತಾವು ನಿಧನರಾದ ನಂತರ ನಮ್ಮ ದೇಹವನ್ನು ಶ್ರೀ ಜೆ ಜಿ ಸಹಕಾರಿ ಆಸ್ಪತ್ರೆಗೆ ದೇಹಧಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಇವರ ಅಂತಿಮ ದರ್ಶನವನ್ನು ದಿ. 31 ರಂದು ರಾತ್ರಿ 10 ಗಂಟೆಗೆಯವರಿಗೆ ಅವರ ಮನೆಯಲ್ಲಿ ಕಲ್ಪಿಸಲಾಗಿತ್ತು.