Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bagalkot

ಸಂಸದೀಯ ವ್ಯವಸ್ಥೆಯ ಅರಿವು ಹೆಚ್ಚಾಗಬೇಕು - ಶಾಸಕ ಪಾಟೀಲ್

 

 ಬೀಳಗಿ- ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶೈಕ್ಷಣಿಕ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ ಹೇಗೆ ನೆಡೆಯುತ್ತಿದೆ ಎನ್ನುವುದು ಸಂಸದೀಯ ಪದ್ದತಿ ಮತ್ತು ಅಲ್ಲಿನ ನಿರ್ಣಯಗಳ ಮೇಲೆ ತಿಳಿಯಲಿದ್ದು ವಿದ್ಯಾರ್ಥಿಗಳಿಗೆ ಸಂಸದೀಯ ವ್ಯವಸ್ಥೆಯ ಅರಿವು ಹೆಚ್ಚಾದರೆ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಹಾಗೂ ಶಾಸಕರಾದ ಜೆ ಟಿ ಪಾಟೀಲ ತಿಳಿಸಿದರು.

ಇಲ್ಲಿನ ರುದ್ರಗೌಡ ಪಾಟೀಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್,ಸಮಾಜ ಕಲ್ಯಾಣ ಇಲಾಖೆ ಹಾಗೂ ಶಾಲಾ ಶಿಕ್ಷಣ,ಕಾಲೇಜು ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಯುವ ಸಂಸತ್ತು ಸಭೆ ಕಾರ್ಯಕ್ರಮ -2026 ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚುನಾವಣೆ ಮುಖಾಂತರ ಜನರಿಗೆ ಹಲವಾರು ಭರವಸೆಗಳನ್ನು ನೀಡಿ ಆಯ್ಕೆಯಾದ ಶಾಸಕರು ವಿಧಾನ ಸಭೆಯಲ್ಲಿ ಕ್ಷೇತ್ರದ ಸಮಸ್ಯೆಗಳ ಕುರಿತಾಗಿ ಚರ್ಚೆ ಮಾಡಿ ಅಭಿವೃದ್ಧಿಯ ಕಾರ್ಯ ಮಾಡುವುದು,ವಿಧಾನ ಸಭೆ ಮತ್ತು ವಿಧಾನ ಪರಿಷತ್ ಅಧಿವೇಶನಗಳು ಹೇಗೆ ಮಾಡುತ್ತಾರೆ ಎನ್ನುವ ಕಲ್ಪನೆ ಅರಿವು ವಿದ್ಯಾರ್ಥಿಗಳಲ್ಲಿ ಬರಲಿ ಎನ್ನುವ ಉದ್ದೇಶದಿಂದ ಸರ್ಕಾರ ಯುವ ಸಂಸತ್ತು ಕಾರ್ಯಕ್ರಮ ಆಯೋಜಿಸಿದೆ ಎಂದ ಅವರು ವಿದ್ಯಾರ್ಥಿಗಳಲ್ಲಿ ಶಿಸ್ತು ಸಮಯ ಪಾಲನೆ, ನಿರ್ದಿಷ್ಟ ಗುರಿ ಬೆಳೆಯಬೇಕು, ದುಶ್ಚಟಗಳಿಂದ ವಿದ್ಯಾರ್ಥಿಗಳು ದೂರವಿರಬೇಕು ಎಂದರು.

ರಾಜಕಾರಣ ಮೊದಲಿನಂತಿಲ್ಲ - ಇವತ್ತಿನ ದಿನಮಾನಗಳಲ್ಲಿ ಶಾಸಕರು ಮತ್ತು ಸಂಸದರು ಜನರ ಆಶಯದಂತೆ ಸಾಗುತ್ತಿಲ್ಲ ಎನ್ನುವುದು ಬಹಳ ಬೆಸರದ ಸಂಗತಿ, ಅಧಿವೇಶನ ಕರೆಯುವ ಉದ್ದೇಶಗಳೇ ಇಂದು ಈಡೇರುತ್ತಿಲ್ಲ,ಯಾವ ವಿಷಯಕ್ಕೆ ಅಧಿವೇಶನ ಎನ್ನುವುದನ್ನು ಮರೆತು ಬೇರೆ ಯಾವೂದೋ ವಿಷಯ ತಂದು ನಿಜವಾದ ವಿಷಯಗಳ ಚರ್ಚೆ ನೆಡೆಯದೆ ಹಲವಾರು ವಿಷಯಗಳು ಮರೆಮಾಚುತ್ತಿವೆ,ಶಾಸಕರು ಸಂವಿಧಾನದ ಆಶಯದಂತೆ ನೆಡೆಯಬೇಕು,ದೇಶದ ರಾಜ್ಯದ ಸಮಸ್ಯೆಗಳ ಕುರಿತಾಗಿ ಚರ್ಚೆಗಳು ನೆಡೆಯಬೇಕು,ಅಂದಾಗ ಅಧಿವೇಶನದ ಆಶಯ ಈಡೇರಿಕೆಯಾಗಿ ಅಭಿವೃದ್ಧಿ ಸಾಧ್ಯ. ವಿದ್ಯಾರ್ಥಿಗಳು ದೇಶದ ಭವ್ಯ ಪ್ರಜೆಗಳು ನಿಮ್ಮಲ್ಲಿ ಆದರು ರಾಜ್ಯ ದೇಶದ ಪರಂಪರೆ, ಸಂಸ್ಕ್ರತಿಯ ಅರಿವು ಬೆಳೆಯಬೇಕು ಎಐ ಎನ್ನುವ ಶಕ್ತಿ ಮನುಷ್ಯನ ಬುದ್ಧಿ ಮಟ್ಟ ಮೀರಿ ಬೆಳೆಯುವುತ್ತಿದೆ ಇದು ಅಪಾಯಕಾರಿ ಸಂದೇಶ , ವಿದ್ಯಾರ್ಥಿಗಳು ಮೊಬೈಲ್ ಟಿವಿ ವಿಷಯಕ್ಕೆ ಬಾರದ ಸಿನೆಮಾಗಳಿಂದ ದೂರವಿದ್ದು ಗುರಿ ಸಾಧನೆಯತ್ತ ಸಾಗಬೇಕು,ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಬೇಕು, ಶಿಕ್ಷಕರು ಮಕ್ಕಳ ನಿಜವಾದ ಪ್ರತಿಭೆ ಗುರುತಿಸುವ ಕೆಲಸ ಮಾಡಬೇಕು ಎಂದ ಶಾಸಕರು ಅವರು ಬಾಲ್ಯ ಶಿಕ್ಷಣದಿಂದ ರಾಜಕಾರಣದ ಗುರುತುಗಳನ್ನು ತಿಳಿಸಿದರು.

ಸಮಾರಂಭದಲ್ಲಿ 224 ವಿದ್ಯಾರ್ಥಿ ಶಾಸಕರ ಸೇರಿದ್ದ ವಿದ್ಯಾರ್ಥಿಗಳ ಸಂಸತ್ತು ಸಭೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಬರಗಾಲ ನೀರಾವರಿ ಶಿಕ್ಷಣ ಕುರಿತಾಗಿ ಚರ್ಚೆಗಳು ನಡೆದವು.

ಸಭೆಯಲ್ಲಿ ತಹಸೀಲ್ದಾರ್ ವಿನೋದ್ ಹತ್ತಳ್ಳಿ,ತಾಪಂ ಇಓ ಶ್ರೀನಿವಾಸ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಸ್ ಆದಾಪೂರ,ಕಾಲೇಜು ಪ್ರಾಂಶುಪಾಲರಾದ ಶ್ರೀದೇವಿ ಪಾಟೀಲ್,ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿ ಎಸ್ ಗಡ್ಡದೇವರಮಠ,ಕಾಲೇಜು ಸಿಡಿಸಿ ಸದಸ್ಯರಾದ ಜ್ಯೋತಿಬಾ ಅವತಾಡೆ,ರವಿ ಕಾಂಬಳೆ,ಸಿದ್ದು ದಳವಾಯಿ,ಸೇರಿದಂತೆ ತಾಲೂಕಿನ ವಿವಿಧ ಶಾಲಾ ಕಾಲೇಜುಗಳಿಂದ ಆಗಮಿಸಿದ್ದ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಆಯೋಜನೆ: ಸಚಿವ ಸಂತೋಷ ಎಸ್. ಲಾಡ್ಸಮಾಜದ ಮುಖ್ಯ ವಾಹಿನಿಗೆ ವಿಕಲ ಚೇತನರು ಮುಂದೆ ಬರಬೇಕು : ಬಾಲಚಂದ್ರ ಜಾರಕಿಹೊಳಿಶ್ರೀ ಸಾಯಿ ಕಾಲೇಜಿನ ಶಿಬಿರದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಕನ್ನಡ ಕಟ್ಟುವಲ್ಲಿ ಧಾರವಾಡದ ಧುರೀಣರ ಕೊಡುಗೆ ಅಪಾರ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್.ಲಾಡ್ವಿಧಾನ ಪರಿಷತ್ ಸದಸ್ಯ  ಸ್ಥಾನಕ್ಕೆ ಐದನೇ ಬಾರಿ ಆಯ್ಕೆಯಾದ ಶಶೀಲ್. ಜಿ. ನಮೋಶಿ ಅವರಿಗೆ ಹೊಸಪೇಟೆ ಯಲ್ಲಿ ಅದ್ಧೂರಿ ಸ್ವಾಗತ*ಬಿಜೆಪಿ ಮೋರ್ಚಾ ಪದಾಧಿಕಾರಿಗಳ ಮಹತ್ವದ ಸಭೆ*ಮಹಿಳಾ ಸಾಹಿತಿಗಳ ನಿರ್ಲಕ್ಷ್ಯ ಖಂಡನೀಯ-ಡಾ.ಸುಜಾತಾ ಚಲವಾದಿವಿಶ್ವವಿದ್ಯಾಲಯ ಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನವಿಶ್ವವಿದ್ಯಾಲಯ ಬಾಸ್ಕೆಟ್‌ಬಾಲ್ ತಂಡಕ್ಕೆ ತನ್ವೀರ್ ಆಯ್ಕೆಶ್ರೀ ವಿಶ್ವಗುರು ಸೌಹಾರ್ದ ಸೊಸೈಟಿ  ಅಧ್ಯಕ್ಷರಾಗಿ ಅರವಿಂದ ಬಡಕುಂದ್ರಿ, ಉಪಾಧ್ಯಕ್ಷರಾಗಿ ಬರಮಪ್ಪ ನಾಗನೂರ ಆಯ್ಕೆ.ಹತ್ತು ವರ್ಷಗಳಿಂದ ಪರಿಹಾರಕ್ಕಾಗಿ ಹೋರಾಟ: 95 ರೈತರಿಗೆ ₹54 ಕೋಟಿ ರೂ. ವಿತರಣೆ