ಮೂಡಲಗಿ : ತಾಲ್ಲೂಕಿನ ಅರಭಾವಿ ಮಠದ ಜಗದ್ಗುರು ದುರುದುಂಡೀಶ್ವರ ಸಿದ್ಧಸಂಸ್ಥಾನ ಮಠದ ಲಿಂಗೈಕ್ಯ ಸಿದ್ಧಲಿಂಗ ಸ್ವಾಮೀಗಳ ೩ನೇ ಪುಣ್ಯಸ್ಮರಣೋತ್ಸವ ಹಾಗೂ ಶಿವಾನುಭವ ಕಾರ್ಯಕ್ರಮವು ಅ.೧೦ರಂದು ಸಂಜೆ ೬.೩೦ಕ್ಕೆ ಏರ್ಪಡಿಸಿರುವರು. ಸಮಾರಂಭದ ಸಾನ್ನಿಧ್ಯವನ್ನು ಡಂಬಳ ಗದಗದ ಜಗದ್ಗುರು ಡಾ. ತೊಂಟದ ಸಿದ್ದರಾಮ ಸ್ವಾಮೀಜಿಗಳು ವಹಿಸುವರು. ನೇತೃತ್ವವನ್ನು ಅರಭಾವಿಯ ದುರದುಂಡೀಶ್ವರ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮೀಜಿ ವಹಿಸುವರು. ಸಮ್ಮುಖವನ್ನು ಕಡಕೋಳದ ವೀರಕ್ತಮಠದ ಸಚ್ಚಿದಾನಂದ ಸ್ವಾಮೀಜಿ, ಹಂದಿಗುಂದ ಅಡಿಯ ಶಿವಾನಂದ ಸ್ವಾಮೀಜಿಗಳು, ಬೆಲ್ಲದ ಬಾಗೇವಾಡಿಯ ಶಿವಾನಂದ ಸ್ವಾಮೀಜಿಗಳುವಹಿಸುವರು.
ಮುಖ್ಯ ಅತಿಥಿಗಳಾಗಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಭಾಗವಹಿಸುವರು. ಗೋಕಾಕದ ಆರ್‌ಟಿಒ ಕಚೇರಿಯ ಇನ್ಸಸ್ಪೆಕ್ಟರ್ ಶಂಕರ ಕರಿಲಿಂಗನವರ, ಬೆಳಗಾವಿಯ ಎಸ್‌ಪಿ ಕಚೇರಿಯ ಸಚಿನ ಪೂಜೇರಿ ಅವರಿಗೆ ಸನ್ಮಾನ ಇರುವುದು. ಅ.೧೧ರಂದು ಬೆಳಿಗ್ಗೆ ೮ಕ್ಕೆ ಸಿದ್ದಲಿಂಗ ಸ್ವಾಮೀಜಿಗಳ ಗದ್ದುಗೆಗೆ ಅಭಿ?ಕ ಹಾಗೂ ಪೂಜೆ ಜರುಗುವುದು. ಬೆಳಿಗ್ಗೆ ೧೧ರಿಂದ ಮಹಾಪ್ರಸಾದ ಇರುವುದು. ಪ್ರಸಾದ ವ್ಯವಸ್ಥೆಯನ್ನು ಜೈನರಕೋಡಿ, ಹಟ್ಟಿಗುಡ್ಡ, ಮಾನೆಪ್ಪಗೋಳ ತೋಟ, ಆಲೋಶಿ ತೋಟದ ಭಕ್ತಾಧಿಕಗಳು ಮಾಡುವರು.