ಮಹಾಲಿಂಗಪುರ: ಸ್ಥಳೀಯ ಕೆಎಲ್ಇ ಸಂಸ್ಥೆಯ ಬಿಸಿಎ ಮತ್ತು ಬಿಬಿಎ ವಿಭಾಗದಿಂದ ಪಿಯು ವಿದ್ಯಾರ್ಥಿಗಳಿಗಾಗಿ ನ.೪ರಂದು ಎಐ ಔರಾ-೨ಕೆ೨೬ ಎಂಬ ಪ್ರತಿಭಾ ಬೇಟೆ ಸ್ಪರ್ಧಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಸಪ್ರಶ್ನೆ, ಸೋಲೋಡಾನ್ಸ್, ಪೆನ್ಸಿಲ್ ಸ್ಕೆಚ್, ಗೇಮಿಂಗ್, ನೋ ಯುವರ್ ನೇಮ್, ಪ್ರಬಂಧ, ರಂಗೋಲಿ, ರೀಲ್ ಮೇಕಿಂಗ್, ಫೋಟೋಗ್ರಾಫಿ, ಸಿಂಗಿಂಗ್, ಸ್ಪೀಚ್, ಮೆಹಂದಿ, ಎಐ ಕ್ವಿಜ್, ಎಐ ಪೋಸ್ಟರ್ ಮೇಕಿಂಗ್, ಎಐ ಗ್ರೀಟಿಂಗ್ ಕಾರ್ಡ್, ಪೋಯೆಟ್ರಿ, ಮೋನೋ ಆಕ್ಟಿಂಗ್, ಯೂನಿಕ್ ಐಡಿಯಾ ಸೇರಿದಂತೆ ೧೮ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಯಾವುದೇ ನೋಂದಣಿ ಶುಲ್ಕವಿಲ್ಲ. ವಿದ್ಯಾರ್ಥಿಗಳೇ ಸಿದ್ದಪಡಿಸಿರುವ ವೆಬ್ಸೈಟ್ನಲ್ಲಿ ನೋಂದಿಣಿ ಮಾಡಿಸಿ ಭಾಗವಹಿಸಬಹುದು. ಮಾಹಿತಿಗೆ ೮೯೦೪೬೦೧೦೦೪, ೯೩೫೩೯೬೬೯೯೬ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ. ಸೋಮವಾರ ಕಾಲೇಜಿನ ಆವರಣದಲ್ಲಿ ಪ್ರಚಾರ ಸಾಮಗ್ರಿ ಬಿಡುಗಡೆ ಮಾಡಿದರು. ಬಿಸಿಎ ಸಂಯೋಜಕ ಎಸ್.ಐ.ಪಾಟೀಲ, ಬಿಬಿಎ ಸಂಯೋಜಕ ಶಿರೀಶ್ ಹಳೆಮನಿ, ಆನಂದ ಉರಬಿ, ವಿನಾಯಕ ಬಡಿಗೇರ, ಅಕ್ಷತಾ ಎಚ್, ಸುಮಾ ಕೆ, ಅಂಕಿತಾ ಕೆ, ರಶ್ಮಿ ಬಂಡಿಗಣಿ ಹಾಗೂ ಸಿಬ್ಬಂದಿ ಇದ್ದರು.