ತಾಳಿಕೋಟೆ, ೨೦೨೬-೨೭ನೇ ಸಾಲಿನ ಪ್ರಾಥಮಿಕ ಶಾಲೆಗಳ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಗಳಲ್ಲಿ ಪಟ್ಟಣದ ಸರ್ವಜ್ಞ ವಿದ್ಯಾಪೀಠ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ರೀಡಾ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿ ವಿಜೇತರಾಗಿದ್ದಾರೆ.
ಬಾಲಕರ ಗುಂಪು ಆಟಗಳ ವಿಭಾಗದಲ್ಲಿ ಶಶಾಂಕ ಹಿರೇಮಠ ಹಾಗೂ ತಂಡದವರು ವಾಲಿಬಾಲ್‌ನಲ್ಲಿ ಪ್ರಥಮ ಸ್ಥಾನ, ಋಷಿಕಾಂತಗೌಡ ಪಾಟೀಲ ಹಾಗೂ ತಂಡದವರು ಥ್ರೋಬಾಲ್‌ನಲ್ಲಿ ಪ್ರಥಮ ಸ್ಥಾನ ಮತ್ತು ಕಾರ್ತಿಕ್ ಪೂಜಾರಿ ಹಾಗೂ ತಂಡದವರು ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ವಿರಾಟ್ ಚಟ್ನಳ್ಳಿ ಹಾಗೂ ತಂಡದವರು ವಾಲಿಬಾಲ್‌ನಲ್ಲಿ ದ್ವಿತೀಯ ಸ್ಥಾನ, ಸಂದೇಶ ಸೇವಳಕರ ಹಾಗೂ ತಂಡದವರು ಖೋ-ಖೋದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಬಾಲಕರ ಮೇಲಾಟಗಳ ವಿಭಾಗದಲ್ಲಿ ಪರಶುರಾಮ ಹರಿಜನ ಹಾಗೂ ತಂಡದವರು ೪೧೦೦ ಮೀಟರ್ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಮೊಹಮ್ಮದ್ ಹನೀಫ್ ಪೊಲೀಸ್ ಗುಂಡು ಮತ್ತು ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಹಾಗೂ ಸ್ವಸ್ತಿಕ್ ಕಟಗೇರಿ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಬಾಲಕಿಯರ ಗುಂಪು ಆಟಗಳ ವಿಭಾಗದಲ್ಲಿ ಸನ್ನಿಧಿ ಕುಲಕರ್ಣಿ ಹಾಗೂ ತಂಡದವರು ಖೋ-ಖೋದಲ್ಲಿ ದ್ವಿತೀಯ ಸ್ಥಾನ ಮತ್ತು ಲಕ್ಷ್ಮಿ ಠಾಕೂರ ಹಾಗೂ ತಂಡದವರು ವಾಲಿಬಾಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರ, ಮುಖ್ಯಗುರುಗಳಾದ ಸಂತೋಷ ಪವಾರ, ರಾಜು ಜವಳಗೇರಿ, ದೈಹಿಕ ಶಿಕ್ಷಕರಾದ ಬಸವರಾಜ ಚಳಗಿ, ಶಾಂತಗೌಡ ಬಿರಾದಾರ ಹಾಗೂ ಶಾಲೆಯ ಸರ್ವ ಸಿಬ್ಬಂದಿ ಅಭಿನಂದಿಸಿ, ಮುಂದಿನ ಹಂತದ ಕ್ರೀಡಾಕೂಟಗಳಿಗೆ ಶುಭ ಹಾರೈಸಿದ್ದಾರೆ.