Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bagalkot

ಕುಂಟೋಜಿ ಭಾಗದ ಅಭಿವೃದ್ಧಿಗೆ ₹8.5 ಕೋಟಿ ಅನುದಾನ: ಶಾಸಕ ಸಿ.ಎಸ್. ನಾಡಗೌಡ

ರಸ್ತೆ, ಧಾರ್ಮಿಕ ಕೇಂದ್ರ ಹಾಗೂ ಮೂಲಸೌಕರ್ಯ ಕಾಮಗಾರಿಗಳಿಗೆ ಆದ್ಯತೆ; ಕಾಲುವೆ ನೀರು ಪೂರೈಕೆಗೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ

ಮುದ್ದೇಬಿಹಾಳ:  ತಾಲೂಕಿನ ಕುಂಟೋಜಿ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನಲ್ಲಿ ₹8.5 ಕೋಟಿಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್. ನಾಡಗೌಡ (ಅಪ್ಪಾಜಿ) ಹೇಳಿದರು.
ಕುಂಟೋಜಿ ಗ್ರಾಮದಲ್ಲಿ ಹನುಮಂತ ದೇವಸ್ಥಾನಕ್ಕೆ ಗುದ್ದಲಿ ಪೂಜೆ ನೆರವೇರಿಸಿ, ಬಳಿಕ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ವಿಶೇಷ ನಗರಾಭಿವೃದ್ಧಿ ಯೋಜನೆ ಅಡಿಯಲ್ಲಿ ಕುಂಟೋಜಿ–ಬಿದರಕುಂದಿ ರಸ್ತೆ ಅಭಿವೃದ್ಧಿಗೆ ₹70 ಲಕ್ಷ ಹಾಗೂ ಕುಂಟೋಜಿ–ಕೋಡಿಮಟ್ಟಿ ರಸ್ತೆ ನಿರ್ಮಾಣಕ್ಕೆ ₹2 ಕೋಟಿ ಅನುದಾನ ಮಂಜೂರಾಗಿದ್ದು, ಎರಡೂ ಕಾಮಗಾರಿಗಳು ಟೆಂಡರ್ ಪ್ರಕ್ರಿಯೆಯಲ್ಲಿವೆ ಎಂದರು.
ಕುಂಟೋಜಿ–ಗುಡ್ಯಾಳ ರಸ್ತೆ ನಿರ್ಮಾಣಕ್ಕೆ ನೀರಾವರಿ ಇಲಾಖೆಯಿಂದ ₹4.5 ಕೋಟಿ ಮೊತ್ತದ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದ್ದು, ಹನುಮಂತ ದೇವರ ಗುಡಿಗೆ ₹30 ಲಕ್ಷ ಹಾಗೂ ದುರ್ಗಮ್ಮ ದೇವಿ ದೇವಸ್ಥಾನಕ್ಕೆ ₹50 ಲಕ್ಷ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.
ಹಿಂದಿನ ಗುದ್ದಲಿ ಪೂಜೆಗೆ ಮರುಪೂಜೆ ಬೇಡ: ಈ ಕಾಮಗಾರಿಗೆ ಈ ಹಿಂದೆ ಈಗಾಗಲೇ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಅದನ್ನು ಯಾರೇ ನೆರವೇರಿಸಿರಲಿ, ನಡೆದಿರುವ ಕಾಮಗಾರಿಗೆ ಮತ್ತೊಮ್ಮೆ ಗುದ್ದಲಿ ಪೂಜೆ ಮಾಡುವುದು ಸರಿಯಲ್ಲ ಎಂಬುದು ತಮ್ಮ ನಿಲುವಾಗಿದೆ ಎಂದು ಶಾಸಕ ನಾಡಗೌಡ ಸ್ಪಷ್ಟಪಡಿಸಿದರು.
ಕಾರ್ಯಕರ್ತರು ಒತ್ತಾಯಿಸಿ ಪೂಜೆ ನೆರವೇರಿಸಲೇಬೇಕು ಎಂದು ಮನವಿ ಮಾಡಿದ್ದರು. ಆದರೆ, ಕಾಮಗಾರಿ ಪೂರ್ಣಗೊಂಡ ಬಳಿಕ ವಿಶೇಷ ಪೂಜೆ ನೆರವೇರಿಸಿ, ಜಾತ್ರೆಯ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸೋಣ ಎಂದು ಅವರು ಹೇಳಿದ್ದು ಗಮನ ಸೆಳೆಯಿತು.
ಕಾಲುವೆ ನೀರಿಗೆ ಮಳೆಯ ಕೊರತೆಯ ಸವಾಲು: ಪ್ರಸಕ್ತ ವರ್ಷ ಮಳೆಯ ಕೊರತೆಯಿಂದ ನದಿ ಹಾಗೂ ಜಲಾಶಯಗಳಲ್ಲಿ ನೀರಿನ ಸಂಗ್ರಹ ಗಣನೀಯವಾಗಿ ಕಡಿಮೆಯಾಗಿದೆ. ಆಲಮಟ್ಟಿ ಜಲಾಶಯದಲ್ಲಿ ಪ್ರಸ್ತುತ ಸುಮಾರು 9 ಟಿಎಂಸಿ ನೀರು ಮಾತ್ರವಿದ್ದು, ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕಾದ ಪರಿಸ್ಥಿತಿ ಇದೆ ಎಂದರು.
ಕೆರೆಗಳನ್ನು ತುಂಬಿಸುವ ಉದ್ದೇಶದಿಂದ ಕಾಲುವೆಗಳಿಗೆ ನೀರು ಹರಿಸಿದರೂ, ಮಾರ್ಗಮಧ್ಯೆ ನೂರಾರು ಅನಧಿಕೃತ ಪಂಪ್‌ಸೆಟ್‌ಗಳ ಮೂಲಕ ನೀರು ಎತ್ತಿಕೊಳ್ಳುತ್ತಿರುವುದರಿಂದ ಕೊನೆಯ ಭಾಗದ (ಟೇಲ್ ಎಂಡ್) ಗ್ರಾಮಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ನೀರಿನ ನಿರ್ವಹಣೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನಿಯಂತ್ರಣದಲ್ಲಿದ್ದು, ಪರಿಸ್ಥಿತಿ ಸುಧಾರಿಸಿದ ಕೂಡಲೇ ಕಾಲುವೆ ನೀರು ಒದಗಿಸಲು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದರು.
ಭೂಸ್ವಾಧೀನ ರೈತರಿಗೆ ಪರಿಹಾರ: ಕಾಲುವೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ‘ಕನ್ಸೆಂಟ್ ಅವಾರ್ಡ್’ ಅಡಿಯಲ್ಲಿ ಒಪ್ಪಿಗೆ ನೀಡುವ ರೈತರಿಗೆ ಎಕರೆಗೆ ₹25 ಲಕ್ಷ ಹಾಗೂ ನೀರಾವರಿ ಜಮೀನಿಗೆ ₹30 ಲಕ್ಷದವರೆಗೆ ಪರಿಹಾರ ನೀಡಲಾಗುತ್ತಿದೆ. ಈ ಮೊತ್ತವನ್ನು ಎರಡು ತಿಂಗಳೊಳಗೆ ನೇರವಾಗಿ ರೈತರ ಖಾತೆಗೆ ಪಾವತಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ನಾಡಗೌಡ ತಿಳಿಸಿದರು.
₹65 ಲಕ್ಷ ವೆಚ್ಚದಲ್ಲಿ ಪಶು ಆಸ್ಪತ್ರೆ ನಿರ್ಮಾಣ: ಮುದ್ದೇಬಿಹಾಳ ಪಟ್ಟಣದ ಬಜಾರ್ ಪ್ರದೇಶದಲ್ಲಿದ್ದ ಸರ್ಕಾರಿ ಪಶು ಆಸ್ಪತ್ರೆಯನ್ನು ಸಾರ್ವಜನಿಕರು ಹಾಗೂ ಜಾನುವಾರುಗಳ ಅನುಕೂಲಕ್ಕಾಗಿ ಪಟ್ಟಣದ ಹೊರವಲಯಕ್ಕೆ ಸ್ಥಳಾಂತರಿಸಲಾಗುತ್ತಿದೆ. ₹65 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುತ್ತಿದ್ದು, ಇದರಿಂದ ರೈತರಿಗೆ ಮತ್ತು ಪಶುಪಾಲಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಶಾಸಕರಿಗೆ ಸನ್ಮಾನ: ಇದೇ ವೇಳೆ ಗ್ರಾಮದ ಅಭಿವೃದ್ಧಿಗೆ ಅನುದಾನ ನೀಡಿದ ಶಾಸಕರಿಗೆ ಕುಂಟೋಜಿ ಗ್ರಾಮಸ್ಥರು ಹಾಗೂ ಚನ್ನವೀರ ಶಿವಾಚಾರ್ಯರು ಸನ್ಮಾನಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಆಯೋಜನೆ: ಸಚಿವ ಸಂತೋಷ ಎಸ್. ಲಾಡ್ಸಮಾಜದ ಮುಖ್ಯ ವಾಹಿನಿಗೆ ವಿಕಲ ಚೇತನರು ಮುಂದೆ ಬರಬೇಕು : ಬಾಲಚಂದ್ರ ಜಾರಕಿಹೊಳಿಶ್ರೀ ಸಾಯಿ ಕಾಲೇಜಿನ ಶಿಬಿರದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಕನ್ನಡ ಕಟ್ಟುವಲ್ಲಿ ಧಾರವಾಡದ ಧುರೀಣರ ಕೊಡುಗೆ ಅಪಾರ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್.ಲಾಡ್ವಿಧಾನ ಪರಿಷತ್ ಸದಸ್ಯ  ಸ್ಥಾನಕ್ಕೆ ಐದನೇ ಬಾರಿ ಆಯ್ಕೆಯಾದ ಶಶೀಲ್. ಜಿ. ನಮೋಶಿ ಅವರಿಗೆ ಹೊಸಪೇಟೆ ಯಲ್ಲಿ ಅದ್ಧೂರಿ ಸ್ವಾಗತ*ಬಿಜೆಪಿ ಮೋರ್ಚಾ ಪದಾಧಿಕಾರಿಗಳ ಮಹತ್ವದ ಸಭೆ*ಮಹಿಳಾ ಸಾಹಿತಿಗಳ ನಿರ್ಲಕ್ಷ್ಯ ಖಂಡನೀಯ-ಡಾ.ಸುಜಾತಾ ಚಲವಾದಿವಿಶ್ವವಿದ್ಯಾಲಯ ಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನವಿಶ್ವವಿದ್ಯಾಲಯ ಬಾಸ್ಕೆಟ್‌ಬಾಲ್ ತಂಡಕ್ಕೆ ತನ್ವೀರ್ ಆಯ್ಕೆಶ್ರೀ ವಿಶ್ವಗುರು ಸೌಹಾರ್ದ ಸೊಸೈಟಿ  ಅಧ್ಯಕ್ಷರಾಗಿ ಅರವಿಂದ ಬಡಕುಂದ್ರಿ, ಉಪಾಧ್ಯಕ್ಷರಾಗಿ ಬರಮಪ್ಪ ನಾಗನೂರ ಆಯ್ಕೆ.ಹತ್ತು ವರ್ಷಗಳಿಂದ ಪರಿಹಾರಕ್ಕಾಗಿ ಹೋರಾಟ: 95 ರೈತರಿಗೆ ₹54 ಕೋಟಿ ರೂ. ವಿತರಣೆ