ನೇಸರಗಿ. ಸಮಾಜದಲ್ಲಿ ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಸಭಲರಾಗಿ ಬೆಳೆದ ಜನರು ತಮ್ಮ ಹುಟ್ಟುಹಬ್ಬವನ್ನು ಆಡಂಬರ ಆಚರಿಸದೆ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ನೋಟ್ಸ್ ಬುಕ್, ಪೆನ್ನು, ಬ್ಯಾಗ, ಸಸಿ ವಿತರಣೆ ಮಾಡಿ ತಮ್ಮ ಜನ್ಮದಿನವನ್ನು ಸರಳವಾಗಿ ಆಚರಿಸಿದ ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹಾಗೂ ಅವರ ಬೆಂಬಲಿಗರ ಕಾರ್ಯ ಶ್ಲಾಘನೀಯ ಎಂದು ಮಾಜಿ ಜಿ ಪಂ ಸದಸ್ಯ, ನೇಸರಗಿ ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಡಾ. ಬಿ ಬಿ. ದೇಸಾಯಿ ಹೇಳಿದರು.
ಅವರು ಬುಧರದಂದು ಗ್ರಾಮದ ತಮ್ಮಆಸ್ಪತ್ರೆಯಲ್ಲಿ ಪತ್ರಿಕಾ ಪ್ರತಿನಿದಿಯೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ಜಿ ಟಿ. ಪಾಟೀಲ, ಎಸ್ ಆರ್. ಪಾಟೀಲ, ನಿವೃತ್ತ ಅರ್ಮಿ ಕ್ಯಾಪ್ಟನ್ ಕೆ ಡಿ. ಬಡಿಗೇರ ಉಪಸ್ಥಿತರಿದ್ದರು.