ನರೇಗಾ ಕೂಲಿ ಹೆಚ್ಚಳ: ಏಪ್ರಿಲ್ 1ರಿಂದ ಜಾರಿಗೆ ಕೇಂದ್ರ ಆದೇಶ

Ravi Talawar
ನರೇಗಾ ಕೂಲಿ ಹೆಚ್ಚಳ: ಏಪ್ರಿಲ್ 1ರಿಂದ ಜಾರಿಗೆ ಕೇಂದ್ರ ಆದೇಶ
WhatsApp Group Join Now
Telegram Group Join Now

ನವದೆಹಲಿ,ಮಾ.29:  ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಡಿಯಲ್ಲಿ ಕೌಶಲ್ಯರಹಿತ ಕಾರ್ಮಿಕರಿಗೆ ಪ್ರಸಕ್ತ ಹಣಕಾಸು ವರ್ಷದ ಕೂಲಿಯನ್ನು ಹೆಚ್ಚು ಮಾಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಗ್ರಾಮೀಣಾಭಿವೃದ್ಧಿ ಸಚಿವಾಲಯವು ಸೂಚಿಸಿರುವ ಹೊಸ ಕೂಲಿಯು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.

ಕರ್ನಾಟಕದಲ್ಲಿ ಕೂಲಿ ಶೇ. 10.44ರಷ್ಟು ಪ್ರಮಾಣದಲ್ಲಿರುತ್ತದೆ, ಈಗಿರುವ ದೈನಂದಿನ 316 ರೂ. ಕೂಲಿಯು ಏಪ್ರಿಲ್ 1 ರಿಂದ ಇದು 349ರೂ. ಗೆ ಏರಿಕೆಯಾಗಲಿದೆ. ಅಧಿಸೂಚನೆಯ ಪ್ರಕಾರ, ಹರಿಯಾಣಕ್ಕೆ ಗರಿಷ್ಠ ಕೂಲಿ (ದಿನಕ್ಕೆ 374 ರೂ.) ನಿಗದಿಪಡಿಸಲಾಗಿದೆ, ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್‌ಗೆ ಕನಿಷ್ಠ ಕೂಲಿ (ದಿನಕ್ಕೆ 234 ರೂ.) ಗೊತ್ತುಪಡಿಸಲಾಗಿದೆ.

ಶೇ. 10. 56% ಏರಿಕೆ ಮೂಲಕ ಶೇಕಡವಾರು ಕೂಲಿ ಅಧಿಕದಲ್ಲಿ ಗೋವಾ ನಂ.1 ಸ್ಥಾನದಲ್ಲಿದೆ. ಆದರೆ, ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ಶೇ. 3.04ರಷ್ಟು ಮಾತ್ರ ಶೇಕಡವಾರು ಹೆಚ್ಚಾಗಿದೆ.

ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ದಿನಕ್ಕೆ 300 ರೂ.ಗೆ ನಿಗದಿಪಡಿಸಲಾಗಿದೆ. ಇದು ಪ್ರಸಕ್ತ ಹಣಕಾಸು ವರ್ಷಕ್ಕೆ 272 ರೂ.ಗೆ ಶೇ.10.29 ಇರುತ್ತದೆ. ಮಧ್ಯಪ್ರದೇಶ ಮತ್ತು ಛತ್ತೀಸಗದಲ್ಲಿ ಶೇ. 10ರಷ್ಟು ಏರಿಕೆಯಾಗಿದೆ. ಉತ್ತರಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ 230 ರೂ. ಇದ್ದದ್ದು ೨೩೭ ರೂ. ಆಗಲಿದೆ. ಹರಿಯಾಣ, ಅಸ್ಸಾಂ, ಮಣಿಪುರ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ರಾಜಸ್ಥಾನ, ಕೇರಳ ಮತ್ತು ಲಕ್ಷದ್ವೀಪಗಳಲ್ಲಿ ಶೇ.5ಕ್ಕಿಂತ ಕಡಿಮೆಯಿದೆ. ಎಲ್ಲ ರಾಜ್ಯಗಳನ್ನು ಪರಿಗಣಿಸಿ ಲೆಕ್ಕ ಹಾಕಿದರೆ ಸರಾಸರಿ ಕೂಲಿ ಶೇ. 7ರಷ್ಟಾಗಿದೆ.

 

WhatsApp Group Join Now
Telegram Group Join Now
Share This Article