ನೇಸರಗಿ. ಇಲ್ಲಿನ ಪ್ರತಿಷ್ಠಿತ ಶ್ರೀ ದುರ್ಗಾದೇವಿ ತಾಯಿಯ 8 ನೇ ಜಾತ್ರಾ ಮಹೋತ್ಸವವು ಸೋಮವಾರ ದಿ. 19-05-2025 ರಿಂದ ಶುಕ್ರವಾರ ದಿ. 23-05-2025 ರವರೆಗೆ ಅದ್ದೂರಿಯಾಗಿ ಜರುಗಲಿದೆ.
ಮೇ 19 ರಂದು ಮುಂಜಾನೆ 10 ಘಂಟೆಗೆ ವಾದ್ಯ ಮೇಳದೊಂದಿಗೆ ಕುಂಭಮೇಳದೊಂದಿಗೆ ಗ್ರಾಮದ ದೇವಸ್ಥಾನಗಳಲ್ಲಿ ಉಡಿ ತುಂಬುವದು, ಮಹಾಪ್ರಸಾದ ನಂತರ ರಾತ್ರಿ 9 ಘಂಟೆಗೆ ಸಿದ್ದಾಪುರದ ಶ್ರೀ ಗುರು ಪ್ರಸಾದ ಜಾನಪದ ಕಲಾ ತಂಡದಿಂದ ಚೌಡಕಿ ಪದ ಹಾಡುವ ಕಾರ್ಯಕ್ರಮ ಜರುಗಲಿದೆ.
ಮೇ 20 ರಂದು ಮುಂಜಾನೆ 9 ಘಂಟೆಗೆ ಬಸ್ ನಿಲ್ದಾಣದ ಬನ್ನಿಗಿಡದ ಸನ್ನಿದಿಯಲ್ಲಿ ಪೂಜೆ ಸಲ್ಲಿಸಿ ದೇವಿಯ ಹೊನ್ನಾಟ ಪ್ರಾರಂಭ ಸಂಜೆಯವರೆಗೆ ಹೊನ್ನಾಟ ನೆರವೇರಲಿದೆ. ರಾತ್ರಿ 9 ಘಂಟೆಗೆ ಅನೇಕ ಗ್ರಾಮಗಳ ಭಜನಾ ಕಾರ್ಯಕ್ರಮ ನಡೆಯಲಿದೆ.
ಮೇ 21 ರಂದು ಮದ್ಯಾಹ್ನ 12-15 ಘಂಟೆಗೆ ಸಾಮೂಹಿಕ ವಿವಾಹ, ಮಹಾಪ್ರಸಾದ ಜರುಗಲಿದೆ. ರಾತ್ರಿ 9-30 ಕ್ಕೆ ದುರ್ಗಾದೇವಿ ದೇವಸ್ಥಾನದಲ್ಲಿ ಸಿಂಗಳಾಪುರ ಕಲಾವಿದರಿಂದ ಜಾನಪದ ಕಾರ್ಯಕ್ರಮ ಜರುಗಲಿದೆ.
ಮೇ 22 ರಂದು ರಾತ್ರಿ 8-00 ಘಂಟೆಗೆ ಶಿವು ಮೆಲೋಡಿಯಸ್ ತಂಡದಿಂದ ವಿದ್ಯಾ ಮಂದಿರ ಹೈಸ್ಕೂಲ್ ಮೈದಾನದಲ್ಲಿ ರಸಮಂಜರಿ, ನಗೆಹಬ್ಬ, ನೃತ್ಯ ಕಾರ್ಯಕ್ರಮ ನಡೆಯುತ್ತವೆ. ಮೇ. 23 ರಂದು ಶ್ರೀ ದುರ್ಗಾದೇವಿ ಉಡಿ ಒಡೆಯುವದು,ರಾತ್ರಿ ಮಕ್ಕಳಿಂದ ಮನೋರಂಜನ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ದುರ್ಗಾದೇವಿ ಜಾತ್ರಾ ಕಮಿಟಿಯ ಸದಸ್ಯರು ತಿಳಿಸಿದ್ದಾರೆ.