ಧಾರವಾಡ : ಹೊಸ ತಂತ್ರಜ್ಞಾನದ ಕುರಿತು ಪ್ರಾಧ್ಯಾಪಕರು ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯ ಪ್ರಭಾರ ಕುಲಪತಿ ಪ್ರೊ.ಜಯಶ್ರೀ. ಎಸ್.ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿಶ್ವವಿದ್ಯಾಲಯ ಗಣಿತಶಾಸ್ತ್ರ ವಿಭಾಗ ಪಾವಟೆ ಇನ್ಸ್ಟಿಟ್ಯೂಟ್ ಆಫ್ ಮೆಥ್ಯಾಮೇಟಿಕ್ಸ್ ಮತ್ತು ಬೆಂಗಳೂರಿನ ಕೋರೇಲ್ ಟೆಕ್ನಾಲಜೀಸ್ ಇವುಗಳ ಸಹಯೋಗದಲ್ಲಿ ನಾಲ್ಕು ದಿನಗಳ ಗಣಿತ ಪ್ರಾಧ್ಯಾಪಕರ ಪುನಶ್ಚೇತನ ಶಿಬಿರ ಮತ್ತು ಅರಿವೇ ಗುರು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಹಲವಾರು ಸುಧಾರಿತ ತಂತ್ರಜ್ಞಾನವನ್ನು ಇಂದಿನ ವಿದ್ಯಾರ್ಥಿಗಳು ಅರಿಯುವುದು ಸೂಕ್ತ ಎಂದ ಅವರು ಈ ನಾಲ್ಕು ದಿನಗಳ ಗಣಿತಶಾಸ್ತ್ರಜ್ಞರ ಮಧ್ಯ ಗಣಿತ ವಿಜ್ಞಾನಿ ಪ್ರೊ.ಎಂ.ಎನ್.ಬುಜುರ್ಕೆ ಅವರಿಗೆ ಅರಿವೇ ಗುರು ಪ್ರಶಸ್ತಿ ನೀಡುತ್ತಿರುವದು ಪ್ರಶಸ್ತಿಗೆ ಹೆಚ್ಚು ಮೆರುಗು ತಂದಿದೆ ಎಂದರು.
ಅರಿವು ಗುರು ಪ್ರಶಸ್ತಿ ಸ್ವೀಕರಿಸಿದ ಕರ್ನಾಟಕ ವಿಶ್ವವಿದ್ಯಾಲಯದ ಗಣಿತ ವಿಜ್ಞಾನಿ ಪ್ರೊ.ಎಂ.ಎನ್.ಬುಜುರ್ಕೆ ಮಾತನಾಡಿ…ನನ್ನ ಸೇವೆ ಪರಿಗಣಿಸಿ ಈ ಅರಿವೇ ಗುರು ಪ್ರಶಸ್ತಿ ನೀಡಿರುವುದು ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದ ಅವರು ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಕಂಪ್ಯೂಟರ್ ಕೋರ್ಸುಗಳನ್ನು ಪರಿಚಯಿಸುವಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಪ್ರಾಮಾಣಿಕವಾಗಿ ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಯಶಸ್ಸು ತಾನಾಗಿ ಒಲಿದು ಬರುತ್ತದೆ ಎಂದರು.
ಕರ್ನಾಟಕ ವಿಶ್ವವಿದ್ಯಾಲಯ ವಿಜ್ಞಾನ ತಂತ್ರಜ್ಞಾನ ನಿಖಾಯದ ಡೀನ್ ಪ್ರೊ.ಎ.ಎ.ಮೂಲಿಮನಿಮಾತನಾಡಿ ಪ್ರೊ.ಎಂ.ಎನ್.ಬುಜರ್ಕೆ ಅವರು ಸರಳ ಸಜ್ಜನಿಯಕೆ ಗಣಿತ ವಿಜ್ಞಾನಿ ಆಗಿದ್ದು ಅವರು ಗಣಿತ ವಿಜ್ಞಾನಕ್ಕೆ ನೀಡಿದ ಕೊಡುಗೆ ಅಪಾರ ಎಂದರು. ಪ್ರೊ.ಎಂ.ಎನ್.ಬುಜರ್ಕೆ ಅವರು ಶಿಕ್ಷಕರಾದರರೂ ಇಂದಿಗೂ ವಿದ್ಯಾರ್ಥಿಗಳ ಹಾಗೆ ಅಧ್ಯಯನ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವದು ಅವರ ವಿಶೇಷವಾಗಿದೆ ಎಂದರು.
ಅರಿವೇ ಗುರು ಪ್ರಶಸ್ತಿ ಪ್ರದಾನ: ಇದೇ ಸಂದರ್ಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ನೀಡುವ ಅರಿವೇ ಗುರು ಪ್ರಶಸ್ತಿಯನ್ನು ಕರ್ನಾಟಕ ವಿಶ್ವವಿದ್ಯಾಲಯದ ಗಣಿತ ವಿಜ್ಞಾನಿ ಪ್ರೊ.ಎಂ.ಎನ್.ಬುಜುರ್ಕೆ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಪ್ರಭಾರ ಕುಲಪತಿ ಪ್ರೊ.ಜಯಶ್ರೀ ಎಸ್.ಕರ್ನಾಟಕ ವಿಶ್ವವಿದ್ಯಾಲಯ ಕುಲಸಚಿವ ಡಾ.ಎ.ಚೆನ್ನಪ್ಪ, ಹಾವೇರಿ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಜಂಗಮಶಟ್ಟಿ ಪ್ರಸಾರಾಂಗ ನಿರ್ದೇಶಕ ಎ.ಎಂ.ಕಡಕೋಳ ಮತ್ತು ವಿಜ್ಞಾನ ತಂತ್ರಜ್ಞಾನ ನಿಖಾಯದ ಡೀನ ಪ್ರೊ.ಎ.ಎ.ಮೂಲಿಮನಿ ಅವರು ಅರಿವೇ ಗುರು ಪ್ರಶಸ್ತಿಯನ್ನು ಪ್ರೊ.ಎಂ.ಎನ್.ಬುಜುರ್ಕೆ ಅವರಿಗೆ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ.ಎಸ್.ಸಿ.ಶಿರಾಳಶೆಟ್ಟಿ ಮಾತನಾಡಿ… ಸುಧಾರಿತ ತಂತ್ರಜ್ಞಾನವನ್ನು ಅರಿಯವುದರಿಂದ ಇಂದು ಹೆಚ್ಚು ಉದ್ಯೋಗ ಅವಕಾಶಗಳನ್ನು ಪಡೆಯಲು ಸಾಧ್ಯ ಎಂದ ಅವರು ಈ ನಾಲ್ಕು ದಿನಗಳ ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಕರಿಗೆ ಅನುಕೂಲವಾಗುವಂತೆ ವಿನ್ಯಾಸ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಎಸ್.ಸಿ.ಶಿರಾಳಶೆಟ್ಟಿ, ಪ್ರಾಧ್ಯಾಪಕರಾದ ಪ್ರೊ.ಪಿ.ಜಿ.ಪಾಟೀಲ,ಪ್ರೊ.ಎಚ್.ಎಸ್.ರಾಮನೆ, ಕವಿವಿ ಪ್ರಸಾರಾಂಗ ನಿರ್ದೇಶಕ ಡಾ.ಎ.ಎಂ.ಕಡಕೋಳ, ಸೇರಿದಂತೆ ರಾಜ್ಯದ ಅನೇಕ ಗಣಿತ ಶಾಸ್ತ್ರದ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಹಾಜರಿದ್ದರು.