ಬಳ್ಳಾರಿ ಮೇ.10. : ತೊಡಕಿನ ಗರ್ಭಿಣಿಯರಿಗೆ ಸ್ತ್ರೀಯರಿಗೆ ವಿಶೇಷ ಅರೋಗ್ಯ ತಪಾಸಣೆ ಹಾಗು ಪೌಷ್ಟಿಕ ಆಹಾರ, ಕಿಲ್ಕಾರಿ ಕರೆ ಬಗ್ಗೆ ಅಂತರ ವಿಧಾನನ್ನು ಕಾಯ್ದುಕೊಳ್ಳಿ ಎಂದು ಆಡಳಿತ ವೈದ್ಯಾಧಿಕಾರಿಗಳಾ ಡಾ ಭಾರತಿ ಹೇಳಿದರು.
ಅವರು ಇಂದು ತಾಲೂಕಿನ ಮೋಕ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಪ್ರಧಾನಮಂತ್ರಿ ಸುರಕ್ಷಾ ಮಾತೃತ್ವ ಅಭಿಯಾನ ಕಾರ್ಯಕ್ರಮಾದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ, ಹಾಗು ಸಮುದಾಯ ಅರೋಗ್ಯ ಕೇಂದ್ರ ಮೋಕ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಧಾನಮಂತ್ರಿ ಸುರಕ್ಷಾ ಮಾತೃತ್ವ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ತೊಡಕಿನ ಗರ್ಭಿಣಿಯರಿಗೆ ವಿಶೇಷ ಅರೋಗ್ಯ ತಪಾಸಣೆ ಹಾಗು ಪೌಷ್ಟಿಕ ಆಹಾರ, ಕಿಲ್ಕಾರಿ ಕರೆ ಬಗ್ಗೆ ಅಂತರ ವಿಧಾನಗಳ ಬಗ್ಗೆ ಜಾಗೃತಿ ಗರ್ಭಿಣಿ ಮಹಿಳೆಯರು ಆರೋಗ್ಯ ಬಗ್ಗೆ ಜಾಗೃಕರಾಗಿ ಇರಬೇಕು . ತಾಯಿ ಕಾರ್ಡ್ ನಲ್ಲಿ ಇರುವ ಬಗ್ಗೆ ಮಾಹಿತಿ ತಿಳಿಸುತ್ತ, * ಗರ್ಭಿಣಿ ದಾಖಲಾತಿ, ಗರ್ಭಿಣಿ ಲಸಿಕೆ, ಆರೋಗ್ಯ ತಪಾಸಣೆ, ಪೌಷ್ಟಿಕ ಆಹಾರ, ಅಂತರ ವಿಧಾನಗಳ ಬಗ್ಗೆ, ಹಾಗು ಕಿಲ್ಕಾರಿ ಕರೆ ಮೊಬೈಲ್ ಅರೋಗ್ಯ ಸೇವೆ ಬಗ್ಗೆ ಗೆಷ್ಟೋಸಿಸ್ ಸ್ಕೋರ್ ಬಗ್ಗೆ ಹಾಗು ಹೆರಿಗೆ ವೇಳೆಯಲ್ಲಿ ತಯಾರಿ ಮಾಡಿಕೊಳ್ಳಲು ಬೇಕಾದ ಸಂಪೂರ್ಣ ಮಾಹಿತಿಯನ್ನು ಕಾರ್ಯಕ್ರಮದಲ್ಲಿ ತಿಳಿಸಿದರು.
ಸಮುದಾಯ ಅರೋಗ್ಯ ಕೇಂದ್ರದ ಶಿಕ್ಷಣ ಅಧಿಕಾರಿಗಳಾದ ಖುರ್ಶಿದ್ ಬೇಗಮ್ ಇವರು ಮಾತನಾಡಿ, PMSMA ಕಾರ್ಯಕ್ರಮದ ಉದ್ದೇಶ, ನಿಯಮಿತ ಅರೋಗ್ಯ ತಪಾಸಣೆ, ಪೌಷ್ಟಿಕ ಆಹಾರದ ವನ್ನು ಬಳಕೆ ಮಾಡಲು ಸ್ವಚ್ಛತೆ ಕಾಪಾಡಿಕೊಳ್ಳಲು ಹೇಳಿದರು,
ಈ ಸಂದರ್ಭದಲ್ಲಿ ವರದಿಗಾರರಾದ ತಿಪ್ಪೇಸ್ವಾಮಿ,ಹಿರಿಯ ಪ್ರಾಥಮಿಕ ಸುರಕ್ಷಾ ಅಧಿಕಾರಿ ಎರಮ್ಮ, ಚಂದ್ರಮ್ಮ, ವಿವಿಧ ವೃಂದದ ಸಿಬ್ಬಂದಿ ಅಧಿಕಾರಿ ಆಶಾ ಕಾರ್ಯಕರ್ತೆಯರು, ತಾಯಂದಿರು ಉಪಸ್ಥಿತರಿದ್ದರು