ಮಕ್ಕಳ ತಿನಿಸುಗಳಲ್ಲಿ ರಾಸಾಯನಿಕ ಬಳಕೆ; ಟೆಸ್ಟ್‌ಗೆ ಸರ್ಕಾರ ಕ್ರಮ

Ravi Talawar
ಮಕ್ಕಳ ತಿನಿಸುಗಳಲ್ಲಿ ರಾಸಾಯನಿಕ ಬಳಕೆ; ಟೆಸ್ಟ್‌ಗೆ ಸರ್ಕಾರ ಕ್ರಮ
WhatsApp Group Join Now
Telegram Group Join Now

ಬೆಂಗಳೂರು, ಮೇ 06: ಚಾಕೊಲೇಟ, ಪೆಪ್ಪರಮೆಂಟ್​​, ಜೇಮ್ಸ್ ಮತ್ತು ಜೆಲ್ಲಿಸ್​​ ಮಕ್ಕಳಿಗೆ ಬಲು ಇಷ್ಟ. ಒಂದು ಪಕ್ಷ ಮಕ್ಕಳು ಊಟ ಬೇಕಾದರೂ ಬಿಡುತ್ತಾರೆ, ಇವುಗಳನ್ನು ತಿನ್ನುವುದು ಮಾತ್ರ ಬಿಡುವುದಿಲ್ಲ. ಆದರೆ ಇವುಗಳನ್ನು ಮಕ್ಕಳಿಗೆ ನೀಡುವುದಕ್ಕೂ ಮುಂಚೆ ಆಹಾರ ಇಲಾಖೆ  ಪೋಷಕರಿಗೆ ಎಚ್ಚರಿಕೆ ನೀಡಿದೆ. ಚಾಕೊಲೇಟ್, ಪೆಪ್ಪರಮೆಂಟ್​​, ಜೇಮ್ಸ್ ಮತ್ತು ಜೆಲ್ಲಿಸ್​​ಗಳಲ್ಲಿ ಕೃತಕ ಕಲರ್ ಹಾಗೂ ಹಾನಿಕಾರಕ ರಾಸಾಯನಿಕ ಬಳಕೆ ಆರೋಪ ಕೇಳಿಬಂದಿದ್ದು, ಟೆಸ್ಟ್ ಮಾಡಲು ಮುಂದಾಗಿದೆ.

ಮಕ್ಕಳ ಅಚ್ಚುಮೆಚ್ಚಿನ ಚಾಕೊಲೇಟ್, ಪೆಪ್ಪರಮೆಂಟ್​​, ಜೇಮ್ಸ್ ಮತ್ತು ಜೆಲ್ಲಿಸ್​ಗಳಲ್ಲಿ ಹಾನಿಕಾರಕ ರಾಸಾಯನಿಕ ಬಳಕೆ ಆರೋಪ ಕೇಳಿಬಂದಿದೆ. ಇವುಗಳ ಸೇವನೆಯಿಂದ ಕ್ಯಾನ್ಸರ್ ಸಹಿತ ಅಪಾಯಕಾರಿ ಕಾಯಿಲೆಗಳಿಗೆ ದಾರಿ ಮಾಡಿಕೊಡುವುದಲ್ಲದೇ, ಮಕ್ಕಳ ಆರೋಗ್ಯಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಈ ಬಗ್ಗೆ ಕೇಂದ್ರ ಎಫ್​​ಎಸ್​ಎಸ್​​ಎಐ ಸೂಚನೆ ಬೆನ್ನಲೆ ರಾಜ್ಯದಲ್ಲಿ ಆಹಾರ ಇಲಾಖೆ ಅಲರ್ಟ್ ಆಗಿದ್ದು, ಸ್ಯಾಂಪಲ್ಸ್ ಪಡೆದು ಆಹಾರ ಇಲಾಖೆಯ ಲ್ಯಾಬ್​ಗಳಲ್ಲಿ ಟೆಸ್ಟ್​​ಗೆ ಒಳಪಡಿಸಲು ಮುಂದಾಗಿದೆ.

ಪೆಪ್ಪರಮೆಂಟ್​​, ಜೇಮ್ಸ್ ಮತ್ತು ಜೆಲ್ಲಿಸ್​​ಗಳಲ್ಲಿ ಕೃತಕ ಕಲರ್ ಬಳಕೆ ಮಾಡುತ್ತಿದ್ದು, ತಯಾರಿಕಾ ಘಟಕಗಳಲ್ಲಿ ಸ್ವಚ್ಛತೆ ಇರಲ್ಲ ಎನ್ನಲಾಗುತ್ತಿದೆ. ಚಾಕೊಲೇಟ್​ಗಳ ತಯಾರಿಕೆಯಲ್ಲಿ ಕೆಲವು ರಾಸಾಯನಿಕಗಳ ಬಳಕೆ ಬಗ್ಗೆ ಕೂಡ ದೂರುಗಳು ಬಂದಿವೆ. ಹೀಗಾಗಿ ಆಹಾರ ಇಲಾಖೆ ರಾಜ್ಯದಲ್ಲಿ ಸ್ಯಾಂಪಲ್ಸ್​ ಪಡೆಯಲು ಮುಂದಾಗಿದೆ.​ ಅಷ್ಟೇ ಅಲ್ಲದೆ ವಿದೇಶದಿಂದ ಆಮದು ಆಗುವ ಪದಾರ್ಥಗಳನ್ನು ಟೆಸ್ಟ್ ಮಾಡಲು ಮುಂದಾಗಿದ್ದು, ಅಸುರಕ್ಷಿತ ಪದಾರ್ಥಗಳ ಮೇಲೂ ಕ್ರಮಕ್ಕೆ ಆಹಾರ ಇಲಾಖೆ ಪ್ಲಾನ್ ಮಾಡಿದೆ.

WhatsApp Group Join Now
Telegram Group Join Now
Share This Article