ಭಾರೀ ಮಳೆಗೆ ಹೈದರಾಬಾದ್‌ನಲ್ಲಿ ಗೋಡೆ ಕುಸಿತ: 7 ಮಂದಿ ಸಾವು

Ravi Talawar
ಭಾರೀ ಮಳೆಗೆ ಹೈದರಾಬಾದ್‌ನಲ್ಲಿ ಗೋಡೆ ಕುಸಿತ: 7 ಮಂದಿ ಸಾವು
WhatsApp Group Join Now
Telegram Group Join Now

ಹೈದರಾಬಾದ್08: ಹೈದರಾಬಾದ್​ನಲ್ಲಿ ಮಂಗಳವಾರ ಸಂಜೆ ಸುರಿದ ಭಾರೀ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಬಾಚುಪಲ್ಲಿ ಎಂಬಲ್ಲಿ ಗೋಡೆ ಕುಸಿದು ಏಳು ಮಂದಿ ಸಾವನ್ನಪ್ಪಿದ್ದಾರೆ. ಮೃತರನ್ನು ಒಡಿಶಾ ಮತ್ತು ಛತ್ತೀಸ್‌ಗಢ ನಿವಾಸಿಗಳೆಂದು ಗುರುತಿಸಲಾಗಿದೆ.

ರೇಣುಕಾ ಎಲ್ಲಮ್ಮ ಕಾಲೊನಿಯಲ್ಲಿ ಗೋಡೆ ಕುಸಿದಿದೆ. ರಕ್ಷಣಾ ಸಿಬ್ಬಂದಿ ಅವಶೇಷಗಳಿಂದ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಗಾಂಧಿ ಆಸ್ಪತ್ರೆಗೆ ರವಾನಿಸಿದ್ದಾರೆ.

ತಿರುಪತಿ ರಾವ್ ಮಜ್ಜಿ (20), ಶಂಕರ್ (22), ರಾಜು (25), ಖುಷಿ, ರಾಮ್ ಯಾದವ್ (34), ಗೀತಾ (32) ಮತ್ತು ಹಿಮಾಂಶು (14) ಮೃತಪಟ್ಟವರು. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

 

WhatsApp Group Join Now
Telegram Group Join Now
Share This Article