ರಾಜಸ್ಥಾನದ ಫಲೋಡಿಯಲ್ಲಿ 50.8 ಡಿಗ್ರಿ ಸೆಲ್ಸಿಯಸ್ ತಾಪಮಾನ

Ravi Talawar
ರಾಜಸ್ಥಾನದ ಫಲೋಡಿಯಲ್ಲಿ 50.8 ಡಿಗ್ರಿ ಸೆಲ್ಸಿಯಸ್ ತಾಪಮಾನ
WhatsApp Group Join Now
Telegram Group Join Now

ಜೈಪುರ,29: ಮರುಭೂಮಿಗಳ ರಾಜ್ಯವೆಂದೇ ಕರೆಯಲಾಗುವ ರಾಜಸ್ಥಾನದ ಫಲೋಡಿಯಲ್ಲಿ 50.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಹರಿಯಾಣದ ಸಿರ್ಸಾದಲ್ಲಿ 50.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ರಾಜಸ್ಥಾನದಲ್ಲಿ ನಿರಂತರ ಶಾಖದ ಅಲೆಯು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ.

ಸಾಂಪ್ರದಾಯಿಕವಾಗಿ ವರ್ಷದ ಒಂಬತ್ತು ದಿನಗಳನ್ನು ಅತ್ಯಂತ ಶಾಖದ ದಿನಗಳು ಎಂದು ಪರಿಗಣಿಸಲ್ಪಟ್ಟಿರುವ ನೌತಪವು ಬೇಸಿಗೆಯ ಆರಂಭದೊಂದಿಗೆ ಜ್ಯೇಷ್ಠ ಮಾಸದಲ್ಲಿ ಪ್ರಾರಂಭವಾಗುತ್ತದೆ. ಹಿಂದೂ ನಂಬಿಕೆಗಳ ಪ್ರಕಾರ, ಸೂರ್ಯನು ಚಂದ್ರನ ನಕ್ಷತ್ರ ಅಂದರೆ ರೋಹಿಣಿ ನಕ್ಷತ್ರವನ್ನು ಪ್ರವೇಶಿಸಿದಾಗ ನೌತಪ ಪ್ರಾರಂಭವಾಗುತ್ತದೆ. ನೌತಪ ಅಥವಾ ನವತಾಪದ ಐದನೇ ದಿನದಂದು, ರಾಜಸ್ತಾನದಲ್ಲಿ ಒಂದೂವರೆ ವರ್ಷದ ಬಾಲಕಿ ಮತ್ತು ಸರಪಂಚ ಸೇರಿದಂತೆ ಇನ್ನೂ ನಾಲ್ಕು ಜನರು ತೀವ್ರ ಶಾಖಕ್ಕೆ ಬಲಿಯಾಗಿದ್ದಾರೆ.

ಅಧಿಕ ತಾಪಮಾನ ಸಂಬಂಧಿತ ಘಟನೆಗಳಿಂದ ಸತ್ತವರ ಸಂಖ್ಯೆಯನ್ನು ಏಳು ದಿನಗಳಲ್ಲಿ 55 ಕ್ಕೆ ಏರಿದೆ. ಇಡೀ ಬೇಸಿಗೆ ಅವಧಿಯಲ್ಲಿ ಸುಮಾರು 122 ಮಂದಾ ಸಾವನ್ನಪ್ಪಿದ್ದಾರೆ. ಮೇ-ಜೂನ್‌ನಲ್ಲಿ ಸೂರ್ಯನು ರೋಹಿಣಿ ನಕ್ಷತ್ರಕ್ಕೆ ಪ್ರವೇಶಿಸುವ ಒಂಬತ್ತು ಬಿಸಿ ದಿನಗಳಾಗಿರುತ್ತವೆಎಂದು ಹೇಳಲಾಗುತ್ತದೆ.

 

WhatsApp Group Join Now
Telegram Group Join Now
Share This Article