ವಾಣಿಜ್ಯ ಬಳಕೆ LPG ಗ್ಯಾಸ್‌ ಸಿಲಿಂಡರ್‌ ದರದಲ್ಲಿ19 ರೂ.ಇಳಿಕೆ

Ravi Talawar
ವಾಣಿಜ್ಯ ಬಳಕೆ LPG ಗ್ಯಾಸ್‌ ಸಿಲಿಂಡರ್‌ ದರದಲ್ಲಿ19 ರೂ.ಇಳಿಕೆ
WhatsApp Group Join Now
Telegram Group Join Now
ನವದೆಹಲಿ01: ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆ  ಪರಿಷ್ಕರಣೆ ಮಾಡಲಾಗಿದ್ದು, ದರದಲ್ಲಿ 19 ರೂ. ಇಳಿಕೆ ಮಾಡಲಾಗಿದೆ. ಮೆಟ್ರೋ ನಗರಗಳಾದ ನವದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ಸೇರಿದಂತೆ ದೇಶದಾದ್ಯಂತ 19 ಕಿ.ಗ್ರಾಂಗಳಷ್ಟು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ತೈಲ ಮಾರುಕಟ್ಟೆ ಕಂಪನಿಗಳು ಬುಧವಾರ ಕಡಿತಗೊಳಿಸಿವೆ. ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬರಲಿದೆ.
ನವದೆಹಲಿಯಲ್ಲಿ ಇಂದಿನಿಂದ ವಾಣಿಜ್ಯ ಸಿಲಿಂಡರ್ ಬೆಲೆ 1,745.50 ರೂ. ಆಗಿದೆ. ಮುಂಬೈನಲ್ಲಿ 1,74917.50 ರೂ. ನಿಂದ 1,698.50 ಕ್ಕೆ ಇಳಿಕೆಯಾಗಿದೆ. ಚೆನ್ನೈನಲ್ಲೂ 19 ರೂ. ಇಳಿಕೆಯಾಗಿದೆ. ಈಗಿನ ಬೆಲೆ 1,930 ರೂ. ಗಳಾಗಿದ್ದು, 1,911 ರೂಪಾಯಿಗೆ ಇಳಿಕೆಯಾಗಿದೆ. ಈ ನಡುವೆ ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1,860 ರೂ.ನಿಂದ ಕುಸಿತ ಕಂಡಿದೆ.
WhatsApp Group Join Now
Telegram Group Join Now
Share This Article