ನವದೆಹಲಿ: ವ್ಯಕ್ತಿಯೊಬ್ಬ ದಾಳಿ ನಡೆಸಿದ ಬಳಿಕ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ನೀಡಲಾಗಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆಯ ಝೆಡ್ ಶ್ರೇಣಿ ಭದ್ರತೆಯನ್ನು ಹಿಂಪಡೆಯಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಇದೀಗ ಸಿಆರ್‌ಪಿಎಫ್ ಬದಲಾಗಿ ಮತ್ತೆ ದೆಹಲಿ ಪೊಲೀಸರೇ ಸಿಎಂಗೆ ಭದ್ರತೆ ನೀಡುತ್ತಿದ್ದಾ
ಆಗಸ್ಟ್ 20ರಂದು ಸಿಎಂ ರೇಖಾ ಗುಪ್ತಾ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆ ನಡೆಸುತ್ತಿದ್ದಾಗ 35 ವರ್ಷದ ವ್ಯಕ್ತಿ ದಾಖಲೆಗಳೊಂದಿಗೆ ಬಂದು ಮಾತನಾಡುತ್ತಾ, ಇದ್ದಕ್ಕಿದ್ದಂತೆ ಕಪಾಳಕ್ಕೆ ಹೊಡೆದಿದ್ದ. ಈ ದಾಳಿಯನ್ನು ಸಿಎಂ ಕೊಲೆಗೆ ರೂಪಿಸಿದ ಯೋಚಿತ ಪಿತೂರಿ ಎಂದು ಅಧಿಕಾರಿಗಳು ತಿಳಿಸಿದ್ದರು.
ದಾಳಿಯ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯ ರೇಖಾ ಗುಪ್ತಾರಿಗೆ ಝೆಡ್ ಶ್ರೇಣಿಯ ಭದ್ರತೆ ಒದಗಿಸಿತ್ತು. ಸಿಆರ್‌ಪಿಎಫ್ ಸಿಬ್ಬಂದಿ ದೆಹಲಿ ಪೊಲೀಸರಿಂದ ಭದ್ರತೆಯ ಜವಾಬ್ದಾರಿ ವಹಿಸಿಕೊಂಡಿದ್ದರು. ಆದರೆ, ಇದೀಗ ವಾರದೊಳಗೆ ಮತ್ತೆ ದೆಹಲಿ ಪೊಲೀಸರು ಅವರ ಭದ್ರತೆಗೆ ಮುಂದಾಗಿದ್ದಾರೆ. ಸಿಆರ್‌ಪಿಎಫ್ ಭದ್ರತೆಯನ್ನು ಹಿಂತೆಗೆದುಕೊಳ್ಳಲಾಗಿದ್ದು, ದೆಹಲಿ ಪೊಲೀಸರೇ ದೆಹಲಿ ಸಿಎಂಗೆ ಭದ್ರತೆ ಒದಗಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.