ನೇಸರಗಿ- ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಯುವ ಮುಖಂಡ ವೀರಭದ್ರ ಚೋಬಾರಿ ಅವಿರೋಧವಾಗಿ ಬುಧುವಾರ ಆಯ್ಕೆಯಾದರು.
ಹಿಂದಿನ ಅದ್ಯಕ್ಷರು ನಿಧನರಾದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದರು.
ನೂತನ ಅಧ್ಯಕ್ಷ ವೀರಭದ್ರ ಚೋಬಾರಿ ಮಾತನಾಡಿ, ಗ್ರಾಮದ ಸರ್ವಾಂಗೀಣ ಸರ್ವತೊಮುಖ ಪ್ರಗತಿಗೆ ಗ್ರಾಮದ ಮುಖಂಡರು, ನಾಗರಿಕರ ಸಹಕಾರದಿಂದ ಶ್ರಮಿಸುತ್ತೇನೆಂದು ಹೇಳಿದರು.
ಚುನಾವಣಾಧಿಕಾರಿಯಾಗಿ ಅರಣ್ಯ ಇಲಾಖೆ ಅಧಿಕಾರಿ ಸುರೇಶ ದೊಡ್ಡಬಸನ್ನವರ, ಪಿಡಿಓ ಅವಿನಾಶ ಕಾರ್ಯ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಊರಿನ ಮುಖಂಡರು, ಸರ್ವ ಗ್ರಾಮಪಂಚಾಯತಿ ಸದಸ್ಯರು, ನಾಗರಿಕರು ಪಾಲ್ಗೊಂಡು
ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷರನ್ನು ಹೃತ್ಪೂರ್ವಕ ಅಭಿನಂದಿಸಿದರು.