ಚನ್ನರಾಜ ಹಟ್ಟಿಹೊಳಿಗೆ ಯುಥ್ ಐಕಾನ್ ಅವಾರ್ಡ್

Hasiru Kranti
ಚನ್ನರಾಜ ಹಟ್ಟಿಹೊಳಿಗೆ ಯುಥ್ ಐಕಾನ್ ಅವಾರ್ಡ್
WhatsApp Group Join Now
Telegram Group Join Now
ಕೊಲ್ಲಾಪುರ :  ಹರ್ಷ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರಿಗೆ ಭಾರತೀಯ ಶುಗರ್ ಇಂಡಸ್ಟ್ರೀಸ್ ಗ್ರುಪ್ ನೀಡುವ ಯುಥ್ ಐಕಾನ್ ಆಫ್ ಶುಗರ್ ಇಂಡಸ್ಟ್ರೀ ಅವಾರ್ಡ್ ಲಭಿಸಿದೆ.
ಕೊಲ್ಲಾಪುರದ ಮಹಾ ಸೈನಿಕ ದರ್ಬಾರ್ ಹಾಲ್ ಹಾಗೂ ಲಾನ್ಸ್ ನಲ್ಲಿ ಶುಕ್ರವಾರ ಸಂಜೆ ನಡೆದ ಭವ್ಯ ಸಮಾರಂಭದಲ್ಲಿ 2024ರ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಚನ್ನರಾಜ ಹಟ್ಟಿಹೊಳಿ ಕಾರ್ಖಾನೆಯ ಸಿಬ್ಬಂದಿ ಜೊತೆಗೆ ಪ್ರಶಸ್ತಿ ಸ್ವೀಕರಿಸಿದರು. ಇದೇ ವೇಳೆ ಭಾರತೀಯ ಶುಗರ್ ಗ್ರುಫ್ ನ 49ನೇ ವಾರ್ಷಿಕ ಸಭೆ, ವಿಚಾರ ಸಂಕಿರಣ ಸಹ ನಡೆಯಿತು.
ಸಕ್ಕರೆ, ಉಪ-ಉತ್ಪನ್ನಗಳು ಹಾಗೂ ತಂತ್ರಜ್ಞಾನ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿನ ನವೀನತೆಯ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ನೀಡಲಾಗಿದ್ದು, ಈ ಸಾಧನೆಗೆ ಕಾರಣೀಕರ್ತರಾದ ರೈತರು, ಕಾರ್ಖಾನೆಯ ಆಡಳಿತ ಮಂಡಳಿ ಮತ್ತು ಎಲ್ಲ ಸಿಬ್ಬಂದಿಗೆ ಚನ್ನರಾಜ ಹಟ್ಟಿಹೊಳಿ ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ.
WhatsApp Group Join Now
Telegram Group Join Now
Share This Article