ಯುವ ರಾಜ್‌ಕುಮಾರ್ ನಾಯಕನಾಗಿ ನಟಿಸುತ್ತಿರುವ ಸಿನಿಮಾ ‘ಎಕ್ಕ’. ಟೈಟಲ್ ಟ್ರ್ಯಾಕ್ ಹಾಗೂ ಟೀಸರ್ ಮೂಲಕ ಕುತೂಹಲ ಹೆಚ್ಚಿಸಿರುವ ಚಿತ್ರತಂಡ ‘ಬ್ಯಾಂಗಲ್ ಬಂಗಾರಿ’ ಎಂಬ ಹೊಸ ಹಾಡನ್ನು ಅನಾವರಣ ಮಾಡಿದೆ.
ಆನಂದ್ ಆಡಿಯೋ ಯೂಟ್ಯೂಬ್‌ನಲ್ಲಿ ‘ಬ್ಯಾಂಗಲ್ ಬಂಗಾರಿ’ ಲಿರಿಕಲ್ ವಿಡಿಯೋ ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ನಾಯಕ ಯುವರಾಜ್ ಕುಮಾರ್ ಹಾಗೂ ನಾಯಕಿ ಸಂಜನಾ ಆನಂದ್ ಈ ಗೀತೆಗೆ ಹೆಜ್ಜೆ ಹಾಕಿದ್ದಾರೆ.
ತನ್ನ ಇಷ್ಟದ ಹುಡುಗಿಯನ್ನು ಬ್ಯಾಂಗಲ್ ಬಂಗಾರಿ ಅಂತಾ ಕರೆಯುತ್ತಾ ನಾಯಕ ಕುಣಿದು ಕುಪ್ಪಳಿಸಿರುವ ಮೆಲೋಡಿ ಹಾಡು ಇದಾಗಿದೆ. ಹಾಡಿಗೆ ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದಾರೆ. ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ, ಚರಣ್ ರಾಜ್ ಸಂಗೀತ ನೀಡಿದ್ದು, ಅಂತೋನಿ ದಾಸನ್ ಹಾಡಿದ್ದಾರೆ.
‘ಎಕ್ಕ’ ಸಿನಿಮಾವನ್ನು ಪಿಆರ್‌ಕೆ, ಜಯಣ್ಣ ಹಾಗೂ ಕೆಆರ್‌ಜಿ ಸ್ಟುಡಿಯೋ ನಿರ್ಮಾಣ ಮಾಡುತ್ತಿದೆ. ಚಿತ್ರದಲ್ಲಿ ಯುವ ರಾಜ್‌ಕುಮಾರ್ ಸಖತ್ ರಫ್ ಆ್ಯಂಡ್ ಟಫ್ ರೋಲ್ ಮಾಡಿದ್ದಾರೆ. ಆ ರೀತಿಯ ಪೋಸ್ಟರ್‌ಗಳು ಈಗಾಗಲೇ ರಿಲೀಸ್ ಆಗಿವೆ. ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯಾ ಸೇರಿದಂತೆ ದೊಡ್ಡ ತಾರಗಣ ಚಿತ್ರದಲ್ಲಿದೆ.