ನೀವು ಉಚ್ಚಾಟಿತ ವ್ಯಕ್ತಿ: ರಘುಪತಿ ಭಟ್​ಗೆ ಟಾಂಗ್ ಕೊಟ್ಟ ಅಲಿಯಾ

Ravi Talawar
ನೀವು ಉಚ್ಚಾಟಿತ ವ್ಯಕ್ತಿ: ರಘುಪತಿ ಭಟ್​ಗೆ ಟಾಂಗ್ ಕೊಟ್ಟ ಅಲಿಯಾ
WhatsApp Group Join Now
Telegram Group Join Now

ಉಡುಪಿ, (ಮೇ 28): ಈ ಹಿಂದೆ ಬಿಜೆಪಿ  ಸರ್ಕಾರದ ಅವಧಿಯಲ್ಲಿ ಉಡಪಿ ಸರ್ಕಾರಿ ಕಾಲೇಜಿನ ಹಿಜಾಬ್ ವಿವಾದ ಭಾರೀ ಸುದ್ದಿಯಾಗಿತ್ತು. ಈ ಹಿಜಾಬ್​ ವಿವಾದದ ಸಂಬಂಧ ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ ಅವರನ್ನು ಕಾಲೇಜಿನಿಂದ ಅಮಾನತು ಮಾಡಲಾಗಿತ್ತು. ಅಂದು ರಘುಪತಿ ಭಟ್ ಅವರು ಶಾಸಕರಾಗಿದ್ದು, ಕಾಲೇಜಿನ ಅಧ್ಯಕ್ಷರಾಗಿದ್ದರು ಸಹ.  ಅಂದು ಹಿಬಾಜ್‌ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಕಾಲೇಜಿನಿಂದ ಉಚ್ಚಾಟನೆಯಾಗಿದ್ದ ವಿದ್ಯಾರ್ಥಿನಿ ಅಲಿಯಾ ಅಸ್ಸಾದಿ, ಸದ್ಯ ಮಾಜಿ ಶಾಸಕ ರಘುಪತಿ ಭಟ್‌ ಪಕ್ಷದಿಂದ ಉಚ್ಚಾಟನೆಯಾಗಿರುವ ಬಗ್ಗೆ ಟ್ವೀಟ್‌ ಮಾಡಿ ಅಂದು ನಾನು ಉಚ್ಚಾಟಿತ ವಿದ್ಯಾರ್ಥಿನಿ, ಇಂದು ನೀವು ಉಚ್ಚಾಟಿತ ವ್ಯಕ್ತಿ ಎಂದು ಪರೋಕ್ಷವಾಗಿ ಎಲ್ಲರ ಕಾಲೆಳೆಯತ್ತೆ ಕಾಲ ಎಂದು ಟಾಂಗ್‌ ಕೊಟ್ಟಿದ್ದಾರೆ.

ಟ್ಟರ್​ ಎಕ್ಸ್​ನಲ್ಲಿ ಪ್ರತಿಕ್ರಿಯಿಸಿರುವ ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ, ಅಂದು ಹಿಜಾಬ್‌ ಕಾರಣಕ್ಕಾಗಿ ನನ್ನನ್ನು ಕಾಲೇಜಿನಿಂದ ಹೊರದಬ್ಬಿದ್ರಿ. ಆ ಕಾರಣಕ್ಕಾಗಿ ನೀವು ಪಕ್ಷಕ್ಕೆ ದೊಡ್ಡ ಸಾಧನೆಮಾಡಿ ತೋರಿಸಿದ್ದೀರಿ. ಇಂದು ಅದೇ ಪಕ್ಷ ನಿಮ್ಮನ್ನು ಹೊರದಬ್ಬುವುದನ್ನು ನೋಡುತ್ತಿದ್ದೇನೆ. ಅಂದು ನಾನು ಉಚ್ಚಾಟಿತ ವಿದ್ಯಾರ್ಥಿನಿ, ಇಂದು ನೀವು ಉಚ್ಚಾಟಿತ ವ್ಯಕ್ತಿ ಎಂದು ಮಾಜಿ ಶಾಸಕ ರಘುಪತಿ ಭಟ್ ಅವರ ಕಾಲೆಳೆಯುವ ಮೂಲಕ ಟಾಂಗ್ ಕೊಟ್ಟಿದ್ದಾರೆ.

ದೇವನು ತಾನಿಚ್ಚಿಸಿದ್ದನ್ನು ಮಾಡಿಯೇ ತೀರುವನು. ವಾರ್ಷಿಕ ಪರೀಕ್ಷೆಗೆ ಇನ್ನೇನು 60 ದಿನಗಳಿರುವಾಗ ಹಿಜಾಬ್ ಧರಿಸಿದ ಏಕಮಾತ್ರ ಕಾರಣಕ್ಕೆ ನನ್ನನ್ನು ಕಾಲೇಜಿನಿಂದ ಹೊರದಬ್ಬಿ ನಿಮ್ಮ ಪಕ್ಷಕ್ಕೆ ದೊಡ್ಡ ಸಾಧನೆ ಮಾಡಿ ತೋರಿಸಿದರಲ್ಲವೇ, ಆದರೆ ಇಂದು ಅದೇ ಪಕ್ಷ ನಿಮ್ಮನ್ನು ಹೊರದಬ್ಬುವ ಆ ಕ್ಷಣವನ್ನು ನಾನು ನನ್ನ ಉಡುಪಿಯಲ್ಲೇ ನೋಡುವಂತಾಯಿತು. ಅಂದು ನಾನು ಉಚ್ಚಾಟಿತ ವಿದ್ಯಾರ್ಥಿ, ನಿಮಗೆ ಪಕ್ಷದಲ್ಲಿ ಪದವಿ. ಆದರೆ, ಇಂದು ನಾನು ವಕೀಲೆ ಪದವಿ ವಿದ್ಯಾರ್ಥಿ, ನೀವು ಉಚ್ಚಾಟಿತ ವ್ಯಕ್ತಿ ಎಂದು ವ್ಯಂಗ್ಯವಾಡಿದ್ದಾರೆ.

WhatsApp Group Join Now
Telegram Group Join Now
Share This Article