ಉತ್ತರ ಪ್ರದೇಶದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಯೋಗಿ ಆದಿತ್ಯನಾಥ್ ಪಾತ್ರರಾಗಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಲಾಯಂ ಸಿಂಗ್ ಯಾದವ್, ಅವರ ಪುತ್ರ ಅಖಿಲೇಶ್ ಯಾದವ್ ಮತ್ತು ಮಾಯಾವತಿಯಂತಹವರನ್ನು ಹಿಂದಿಕ್ಕಿ ಉತ್ತರ ಭಾರತದ ರಾಜ್ಯದ ಇತಿಹಾಸದಲ್ಲಿ ಸುದೀರ್ಘ ಅವಧಿಯ ಸಿಎಂ ಆಗುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದ್ದಾರೆ.
ಆದಿತ್ಯನಾಥ್ ಅವರು ಒಟ್ಟು ಏಳು ವರ್ಷ 148 ದಿನಗಳ ಕಾಲ ಸಿಎಂ ಆಗಿ ಸೇವೆ ಸಲ್ಲಿಸಿದ್ದು, ಇದು ರಾಜ್ಯದಲ್ಲಿಯೇ ಸುದೀರ್ಘ ಅವಧಿಯಾಗಿದೆ. ಈ ಹಿಂದೆ, ಕಾಂಗ್ರೆಸ್ ನಾಯಕ ಸಂಪೂರ್ಣಾನಂದ ಅವರು ಒಟ್ಟು ಐದು ವರ್ಷ ಮತ್ತು 344 ದಿನಗಳೊಂದಿಗೆ ಯುಪಿ ಸಿಎಂ ಆಗಿ ಸುದೀರ್ಘ ಅವಧಿಯ ಅಧಿಕಾರವನ್ನು ಹೊಂದಿದ್ದರು.
ಆದಿತ್ಯನಾಥ್ ಅವರು 2023 ರಲ್ಲಿ ದಾಖಲೆಯನ್ನು ಮೀರಿದ್ದರು, ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮಾಯಾವತಿ ನಾಲ್ಕು ಬಾರಿ ಸಿಎಂ ಸ್ಥಾನಕ್ಕೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಮತ್ತು ಮುಲಾಯಂ ಸಿಂಗ್ ಯಾದವ್ ಮೂರು ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.