ಯೋಗವು ಬೌದ್ಧಿಕ ಮತ್ತು ಭೌತಿಕ ಸಾಧನೆಗೆ ಮೊದಲ ಸೋಪಾನ

Ravi Talawar
ಯೋಗವು ಬೌದ್ಧಿಕ ಮತ್ತು ಭೌತಿಕ ಸಾಧನೆಗೆ ಮೊದಲ ಸೋಪಾನ
WhatsApp Group Join Now
Telegram Group Join Now

ಗದಗ,25 :ಯೋಗದಿಂದ  ಪಂಚೇಂದ್ರಿಯಗಳನ್ನು ಹಿಡಿತದಲ್ಲಿಟ್ಟಕೊಂಡು ಮನಸ್ಸು ಮತ್ತು ದೇಹದ ನಡುವೆ ಸಾಮರಸ್ಯ ಸಾಧಿಸಲು ಸಹಕಾರಿಯಾಗಿದೆ ಎಂದು ಪ್ರಾಂಶುಪಾಲ ಡಾ. ಶಿವಪ್ಪ ಕುರಿ ಹೇಳಿದರು.

ಹುಲಕೋಟಿಯ  ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತಿಚಿಗೆ  ಎನ್.ಎಸ್.ಎಸ್. ಘಟಕ ಮತ್ತು ಕ್ರೀಡಾ ವಿಭಾಗ ಜಂಟಿಯಾಗಿ ಐಕ್ಯುಎಸಿ ಅಡಿಯಲ್ಲಿ ಆಯೋಜಿಸಿದ್ದ ‘ಅಂತರರಾಷ್ಟ್ರೀಯ ಯೋಗ ದಿನಾಚರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು

ಪ್ರಾಚೀನ ಆಚಾರ್ಯರು, ಮುನಿಗಳು, ದಾರ್ಶನಿಕರು ಯೋಗದಿಂದಲೇ ಸಕಲ ಜ್ಞಾನಗಳಲ್ಲಿ ಪಾಂಡಿತ್ಯ ಸಂಪಾದಿಸಿ ವಿಶ್ವವಂದಿತ ಯೋಗಿಗಳಾಗಿದ್ದಾರೆ  ವಿದ್ಯಾರ್ಥಿಗಳು ಬೌದ್ಧಿಕ ಮತ್ತು ಭೌತಿಕವಾಗಿ ಸದೃಢವಾಗಲು ಹಾಗೂ ಅಧ್ಯಯನದಲ್ಲಿ ಏಕಾಗ್ರತೆ ಸಾಧಿಸಲು ಯೋಗವು ಮೊದಲ ಸೋಪಾನವಾಗಿದ್ದು, ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸೂಚಿಸಿದರು.

ಎನ್.ಎಸ್.ಎಸ್. ಘಟಕದ ಸಂಯೋಜಕ ಮತ್ತು ಇತಿಹಾಸ ಪ್ರಾಧ್ಯಾಪಕ ಡಾ. ಅಪ್ಪಣ್ಣ ಹಂಜೆ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಭಾರತದಲ್ಲಿ ಯೋಗದ ಪ್ರಾಚೀನತೆ, ಇತಿಹಾಸ, ಬೆಳವಣಿಗೆ, ಪುರಾಣ-ಕೃತಿ-ಕಾವ್ಯಗಳಲ್ಲಿ ಯೋಗದ ಪ್ರಸ್ತಾಪಗಳು, ಯೋಗದ ಪ್ರಸ್ತುತತೆ ಕುರಿತು ವಿವರಿಸಿ, ಭೋಗದಲ್ಲಿ ಮೈಮರೆತು ಅನಾಚಾರದಲ್ಲಿ ತೊಡಗಿರುವ ಮನಸ್ಸು ಮತ್ತು ದೇಹಕ್ಕೆ ಯೋಗವು ತುಂಬಾ ಅವಶ್ಯವಾಗಿದೆ ಎಂದು ಹೇಳಿದರು.

ಕ್ರೀಡಾ ವಿಭಾಗದ ನಿರ್ದೇಶಕ ಡಾ. ಬಸವರಾಜ ಅಂಬಿಗೇರ ಅವರು ಯೋಗದ ವಿವಿಧ ಪ್ರಕಾರಗಳು, ಯೋಗದಿಂದಾಗುವ ಪರಿಣಾಮಗಳು, ಭಾರತದ ಯೋಗ ಪದ್ಧತಿ ವಿಶ್ವದಾದ್ಯಂತ ಪ್ರಸಾರದ ಕುರಿತು ಮಾತನಾಡುತ್ತ ವಿದ್ಯಾರ್ಥಿಗಳಿಗೆ ಹಲವು ಯೋಗಾಸನಗಳ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕರು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

 

WhatsApp Group Join Now
Telegram Group Join Now
Share This Article