ನೇಸರಗಿ: ದಿನಾಲು ಯೋಗ ಮಾಡುವದರಿಂದ ಮನುಷ್ಯನ ಶರೀರ ಹಾಗೂ ಮನಸ್ಸಿಗೆ ಒಳ್ಳೆಯದು ಎಂದು ಮಾಜಿ ಶಾಸಕರು, ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಹೇಳಿದರು.
ಅವರು ಶುಕ್ರವಾರದಂದು ವಿಶ್ವ ಯೋಗ ದಿನಾಚರಣೆಯ ನಿಮಿತ್ಯವಾಗಿ ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಯೋಗ ಶಿಭೀರದಲ್ಲಿ ಪಾಲ್ಗೊಂಡು ಮಾತನಾಡಿ ಪ್ರಧಾನಿ ನರೇಂದ್ರ ಮೋದಿಜಿ ಅವರ ಯೋಗದ ಕುರಿತು ಕೈಗೊಂಡಿರುವ ಕಾರ್ಯಕ್ರಮಗಳು ಜಗತ್ತಿನಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದ್ದು ಜನರು ಇದರ ಸದುಪಯೋಗ ಮಾಡಕೊಂಡು ದಿನಾಲೂ ಸ್ವಲ್ಪ ಸಮಯದಲ್ಲಿ ಯೋಗದಲ್ಲಿ ಪಾಲ್ಗೊಳ್ಳಬೇಕೆಂದರು. ಈ ಸಂದರ್ಭದಲ್ಲಿ ಬಿಜೆಪಿಗೆ ನಾಯಕರು, ಯೋಗ ಶಿಕ್ಷಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.