ಪಿಎಂಶ್ರೀ ಸೋರಗಾಂವ ಶಾಲೆಯಲ್ಲಿ ಶಿಕ್ಷಕರ-ಪಾಲಕರ ೨ನೇ ಮಹಾಸಭೆ ಮತ್ತು ಪುನಃಚೇತನ ಕಾರ್ಯಕ್ರಮ
ರನ್ನ ಬೆಳಗಲಿ:ಜ.೦೩., ಮುಧೋಳ ತಾಲೂಕಿನ ಸೋರಗಾಂವ ಗ್ರಾಮದಲ್ಲಿ ಪಿಎಂ ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆಶ್ರಯದಲ್ಲಿ. ಶನಿವಾರ ದಂದು ಶಿಕ್ಷಕರ-ಪಾಲಕರ ೨ನೇ ಮಹಾಸಭೆ ಮತ್ತು ಒಂದು ದಿನದ ಪುನಃಚೇತನ ಕಾರ್ಯಕ್ರಮ ಜರುಗಿತು.
ಗೈಬುಸಾಬ ನದಾಫ ಎಸ್.ಡಿ. ಎಮ್.ಸಿ ಅಧ್ಯಕ್ಷರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯೋಪಾದ್ಯರಾದ ಬಿ ಆರ್ ಶಿರೂರ ಮಾತನಾಡಿ ಸರ್ಕಾರದ ಮಹತ್ವಕಾಂಕ್ಷೆಯ ಸಭೆಯೇ ಈ ಶಿಕ್ಷಕರ-ಪಾಲಕರ ಸಭೆಯಾಗಿದೆ. ಒಂದು ಮಗುವಿನ ಸವಾಂಗಿನ ಪ್ರಗತಿಗೆ ಯಾವ ಯಾವ ಕೌಶಲ್ಯಗಳ ಬೇಕು, ಆ ಎಲ್ಲಾ ಕೌಶಲ್ಯಗಳನ್ನು ಪಿಎಂ ಶ್ರೀ ಯೋಜನೆ ಅಡಿಯಲ್ಲಿ ನಮ್ಮ ಶಾಲೆಗೆ ಸರ್ಕಾರ ಒದಗಿಸುತ್ತಿದೆ. ಮನೆಯಲ್ಲಿ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಯ ವಾತಾವರಣವನ್ನು ಪಾಲಕರು ರೂಪಿಸಬೇಕಾಗಿದೆ ಎಂದು ತಿಳಿಸಿದರು.
ಯೋಗ ಶಿಕ್ಷಕರಾದ ರಾಘವೇಂದ್ರ ನೀಲಣ್ಣವರ ಸಭೆ ಉದ್ದೇಶಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಯೋಗವೇ ವರದಾನವಾಗಿದೆ. ಮುಂಜಾವಿನಲ್ಲಿ ಮಕ್ಕಳು ನಿತ್ಯ ಪ್ರಾಣಾಯಾಮ ಮತ್ತು ಸರಳ ಯೋಗಭ್ಯಾಸವನ್ನು ಮಾಡಲಿ,ಮಕ್ಕಳಿಗೆ ಉತ್ತಮ ಆಹಾರವನ್ನು ನೀಡಿ.ಅವರ ಮುಂದೆ ಒಳ್ಳೆತನವನ್ನೇ ಬಿಂಬಿಸಿ, ಶಿಕ್ಷಕರು ನೀಡುವ ಸಲಹೆ ಸೂಚನೆಗಳನ್ನು ಚಾಚು ತಪ್ಪದೇ ಪಾಲಿಸಿದರೆ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಪೂರಕವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಎಂ ಕೆ ಅಮ್ಮಣಗಿ,ವಿಜಯ ಮಲಕನ್ನವರ, ಎಸ್ ಎಸ್ ಜೀರಗಾಳ,ವಿ ಎಚ್ ಗೌಡರ,ಆರ್ ಎಮ್ ಡೊಂಬರ್,ಡಿ ಎಸ್ ಪೂಜಾರಿ,ಪರಮಾನಂದ ಮುಗಳಕೋಡ ಶಿಕ್ಷಕರು ತರಗತಿವಾರು ವಿದ್ಯಾರ್ಥಿಗಳ ವಯಕ್ತಿಕ ಮಾಹಿತಿ ಜೊತೆಗೆ, ಮಕ್ಕಳ ಪ್ರಗತಿಯ ಮಟ್ಟವನ್ನು ಪಾಲಕರ ಮುಂದೆ ತಿಳಿಸಿ.ಪಾಲಕರಿಂದ ಸಲಹೆ ಸೂಚನೆ ಸ್ವೀಕರಿಸಿ,೧೦ನೇ ತರಗತಿಯ ಮಹತ್ವ ಮತ್ತು ಮುಂದೆ ದೊರೆಯಬಹುದಾದಂತ ವಿವಿಧ ಕ್ಷೇತ್ರಗಳ ಪ್ರವೇಶ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದರು.
ರುಕ್ಮವ್ವ ಕುಟ್ರಟ್ಟಿ,ಪು? ಹೊಸವಾಲಿಕಾರ,ಶಾಂತವ್ವ ಪರೀಟ,ವಿಠ್ಠಲ ದಡ್ಡಿಮನಿ,
ಲಕ್ಷ್ಮೀಬಾಯಿ ಮ್ಯಾಗೇರಿ,ಭೀಮಶಿ ಹಗಳಗಾರ,ಬಲಭೀಮ ಪೂಜಾರಿ,ಬಸಪ್ಪ ಲೋಕಾಪೂರ,ವೆಂಕಪ್ಪ ಮಳಲಿ,ರಮೇಶ ಪೂಜಾರಿ ಹಾಗೂ ಪಾಲಕ ಪೋ?ಕರು, ಎಸ್.ಡಿ.ಎಮ್.ಸಿ ಸರ್ವ ಸದಸ್ಯರು ಮತ್ತು ಊರಿನ ಪ್ರಮುಖರು ಉಪಸ್ಥಿತರಿದ್ದರು.


