ನಿತ್ಯ ಯೋಗದಿಂದ ಸ್ವಾಸ್ಥ್ಯ ಸಂಕಲ್ಪ ಸಾಧ್ಯ: ಯೋಗ ಗುರು ರಾಘವೇಂದ್ರ

Sandeep Malannavar
ನಿತ್ಯ ಯೋಗದಿಂದ ಸ್ವಾಸ್ಥ್ಯ ಸಂಕಲ್ಪ ಸಾಧ್ಯ: ಯೋಗ ಗುರು ರಾಘವೇಂದ್ರ
WhatsApp Group Join Now
Telegram Group Join Now

ಮುಧೋಳ:ಜ.೦೯., ತಾಲೂಕಿನ ಇಂಗಳಿಗಿ ವಲಯದ ವಜ್ರಮಟ್ಟಿ ಕಾರ್ಯಕ್ಷೇತ್ರದ.ಬರಗಿ ಗ್ರಾಮದ ಬಿ ಬಿ ವಿ ವಿ ಸಂಘದ ಬಸವೇಶ್ವರ ಪ್ರೌಢ ಶಾಲೆಯಲ್ಲಿ. ಗುರುವಾರ ದಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಮುಧೋಳ ವತಿಯಿಂದ.ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಜರಗಿತು.

ಯೋಗ ಗುರು ರಾಘವೇಂದ್ರ ನೀಲನ್ನವರ ರನ್ನ ಬೆಳಗಲಿ ಮಾತನಾಡಿ ನಿತ್ಯ ಯೋಗ ಮಾಡುವುದ ರಿಂದ ಸ್ವಾಸ್ಥ್ಯ ಸಂಕಲ್ಪ ಸಾಧ್ಯವಾಗುತ್ತದೆ.ಆರೋಗ್ಯ ಜೀವನಕ್ಕೆ ಯೋಗವನ್ನು ಮೈಗೂಡಿಸಿಕೊಳ್ಳಿ ಎಂದು ಹೇಳುವುದರ ಜೊತೆಗೆ ಮಾದಕ ವಸ್ತುವಿನ ಸೇವನೆ ಯೆಂದರೆ ಅದೊಂದು ನಿಧಾನ ಆತ್ಮಹತ್ಯೆ. ಮಾದಕ ವಸ್ತುಗಳ(ಡ್ರಗ್ಸ್)ಚಟ ಇಂದು ಹೆಚ್ಚಾಗಿ ಚರ್ಚೆಗೆ ಗ್ರಾಸವಾಗುತ್ತಿದೆ.ಮೊಬೈಲ್ ಕೂಡ ವಿದ್ಯಾರ್ಥಿ ಜೀವನಕ್ಕೆ ಮಾದಕ ವಸ್ತುವಾಗಿ ಪರಿಣಮಿಸುತ್ತಿದೆ.ಯಾವುದೇ ಮಾದಕ ವಸ್ತುವನ್ನು ನಾನು ಸೇವಿಸುವುದಿಲ್ಲ.ಇತರರಿಗೂ ತಂದು ಕೊಡುವುದಿಲ್ಲ ಎನ್ನುವ ನಿರ್ಧಾರದಲ್ಲಿ ಬಲಿ?ರಾಗಿರಬೇಕು.ತಂದೆ-ತಾಯಿ ಗುರುವಿನ ಶ್ರಮವನ್ನು ಸ್ಮರಣೆ ಮಾಡುತ್ತಾ, ಶೈಕ್ಷಣಿಕ ಸಾಧನೆಯಲ್ಲಿ ತೊಡಗಬೇಕು ಎಂದು ತಿಳಿಸಿದರು,

ಮುಖ್ಯಶಿಕ್ಷಕ ಎಮ್ ಡಿ ಮಠಪತಿ ಅಧ್ಯಕ್ಷತೆವಹಿಸಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಕಾರ್ಯಕ್ರಮಗಳು ಅತ್ಯಂತ ಮಹತ್ವಪೂರ್ಣವಾಗಿವೆ. ಪ್ರತಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಮಹತ್ವವನ್ನು ತಿಳಿದುಕೊಂಡು.ತಮ್ಮ ಜೀವನದಲ್ಲಿ ಬದ್ಧತೆಯನ್ನು ತಂದುಕೊಳ್ಳಬೇಕೆಂದು ತಿಳಿಸಿದರು.

ವಲಯ ಮೇಲ್ವಿಚಾರಕಿ ಫಕಿರವ್ವ ಶೇಖ್ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಪರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಚಿತ್ರಕಲಾ ಶಿಕ್ಷಕ ಎಸ್ ಎಸ್ ಶಿಂಧೆ,ದೈಹಿಕ ಶಿಕ್ಷಕ ಬಿ ಎ ಪೂಜಾರ ಸೇವಾ ಪ್ರತಿನಿಧಿ ವಿಜಯಲಕ್ಷ್ಮೀ ಮರನೂರ ಮತ್ತು ಶಿಕ್ಷಕರವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article