ಯೋಧ ಚನ್ನಬಸಪ್ಪ ಮುಳ್ಳಗಸಿ ನಿಧನ: ಸರ್ಕಾರಿ, ಮಿಲಿಟರಿ ಗೌರವದೊಂದಿಗೆ ಅಂತಿಮ ಸಂಸ್ಕಾರ

Ravi Talawar
ಯೋಧ ಚನ್ನಬಸಪ್ಪ ಮುಳ್ಳಗಸಿ ನಿಧನ: ಸರ್ಕಾರಿ, ಮಿಲಿಟರಿ ಗೌರವದೊಂದಿಗೆ ಅಂತಿಮ ಸಂಸ್ಕಾರ
WhatsApp Group Join Now
Telegram Group Join Now

ನೇಸರಗಿ:ಸಮೀಪದ ಸೋಮನಟ್ಟಿ ಗ್ರಾಮದ ನಿವಾಸಿ ಹಾಗೂ ದೇಶದ ವೀರ ಯೋಧ ಕಳೆದ 21 ವರ್ಷಗಳಿಂದ ಬಟಾಲಿಯನ್ ಸಿಗ್ನಲ್ ಸೇನೆಯಲ್ಲಿ ದೇಶದ ನಾನಾ ಕಡೆಗಳಲ್ಲಿ ದೇಶದ ಸೇವೆ ಸಲ್ಲಿಸಿ ಮಹಾರಾಷ್ಟ್ರದ ಪುಣೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಅನಾರೋಗ್ಯದಿಂದ ಪುಣೆ ಆಸ್ಪತ್ರೆಯಲ್ಲಿ ಹೃದಯಘಾತದಿಂದ ಚನ್ನಬಸಪ್ಪ ವಿ. ಮುಳ್ಳಗಸಿ (39) ಎಂಬ ವೀರ ಯೋಧ ಶನಿವಾರದಂದು ನಿಧನರಾಗಿದ್ದರು.

 

 

 

 

 

 

 

 

ಇವರ ಮೃತದೇಹ ನೇಸರಗಿ ಮುಖಾಂತರ ಸೋಮನಟ್ಟಿ ಗ್ರಾಮಕ್ಕೆ ರವಿವಾರ ಬೆಳ್ಳಿಗೆ ಬಂದಾಗ ಮೃತರ ಸಂಬಂದಿಕರ ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ಯೋಧನ ತಂದೆ, ತಾಯಿ, ಪತ್ನಿ, ಇಬ್ಬರು ಹೆಣ್ಣು ಮಕ್ಕಳ, ಸಹೋದರರ, ಗ್ರಾಮದ ತಾಯಂದಿರ ಆಕ್ರಂದನ ಮುಗಿಲು ಮುಟ್ಟಿತು ಪ್ರತಿಯೊಬ್ಬರ ಕಣ್ಣುಗಳು ನಿರಾಗಿದ್ದವು.

ನೇಸರಗಿ, ಸೋಮನಟ್ಟಿ, ಮೇಕಲಮರಡಿ ಗ್ರಾಮಗಳ ನಿವೃತ್ತ ಸೈನಿಕರು, ಸೇವಾ ನಿರತ ಸೈನಿಕರು, ಸೋಮನಟ್ಟಿ ಗ್ರಾಮಸ್ಥರು, ನೇಸರಗಿ ಗ್ರಾಮದ ಮಾಜಿ ಸೈನಿಕರ ಸಂಘದ ಪಧಾಧಿಕಾರಿಗಳು, ಸದಸ್ಯರು ತಮ್ಮ ಸಮವಸ್ತ್ರದೊಂದಿಗೆ ಅಗಲಿದ ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಿ, ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

ಸಕಲ ಸರ್ಕಾರಿ, ಮಿಲಿಟರಿ ವತಿಯಿಂದ ಅಗಲಿದ ವೀರನಿಗೆ ಗೌರವದೊಂದಿಗೆ ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ರಾಜಕೀಯ ಮುಖಂಡರು, ಯುವಕರು, ಗ್ರಾಮಸ್ಥರು ಅಗಲಿದ ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.

WhatsApp Group Join Now
Telegram Group Join Now
Share This Article