ಘಟಪ್ರಭಾ : ಹಿಂದೂ ದೇವಸ್ಥಾನ, ಮಠಮಾನ್ಯಗಳ ಮೇಲೆ ಮತ್ತು ಹಿಂದೂ ಹಬ್ಬಗಳ ಬಗ್ಗೆ ನಿರಂತರ ಅಪಚಾರ ಹಾಗೂ ಅಪಪ್ರಚಾರ ನಡೆಯುತ್ತಲೆ ಇದೆ ಎಂದು ಶಾಸಕರಾದ ಬಸವರಾಜ ಪಾಟೀಲ ಯತ್ನಾಳ ಅವರು ಬೇಸರ ವ್ಯಕ್ತ ಪಡಿಸಿದರು.
ಅವರು ಘಟಪ್ರಭಾ ವೀರ ಸಾವರ್ಕರ ಯುವಕ ಸಂಘ ಹಾಗೂ ಶ್ರೀರಾಮ ಸೇನೆ ಘಟಪ್ರಭಾ ಇವರ ಸಂಯುಕ್ತ ಆಶ್ರಯಲ್ಲಿ ಘಟಪ್ರಭಾ ಪಟ್ಟಣದ ಕಾಯಿಪಲ್ಲೆ ಮಾರ್ಕೆಟ ಆವರಣದಲ್ಲಿ ಸೋಮವಾರ ಸಂಜೆ ಆಯೋಜಿಸಲಾದ ಬೃಹತ್ ಧರ್ಮ ಜಾಗೃತಿ ಸಭೆಯಲ್ಲಿ ಮಾತನಾಡಿದರು.
ಮುಂದುವರೆದು, ನನ್ನನ್ನು ದಿಲ್ಲಿಯವರೆ ಬಂದು ಪಕ್ಷಕ್ಕೆ ಕರೆದುಕೊಂಡು ಹೊಗುತ್ತಾರಲ್ಲದೆ, ೨೦೨೮ರ ಚುನಾವಣೆಯಲ್ಲಿ ಪಕ್ಷ ಭರ್ಜರಿ ಗೆಲುವು ಸಾಧಿಸುವ ಮೂಲಕ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಬಸವರಾಜ ಪಾಟೀಲ ಯತ್ನಾಳ ಆತ್ಮ ವಿಶ್ವಾಸದಿಂದ ಹೇಳಿದರು. ಈ ದೇಶಕ್ಕೆ ನರೇಂದ್ರ ಮೋದಿಯಂತಹ ಒಳ್ಳೆ ಪ್ರಧಾನಿ ಮಂತ್ರಿ ಸಿಕ್ಕಿರುವುದರಿಂದಲೇ ನಾವೂ ನೀವೆಲ್ಲಾ ಚನ್ನಾಗಿದ್ದೆವೆ ಎಂದು ಪ್ರಧಾನಿಯನ್ನು ಮುಕ್ತ ಕಂಠದಿಂದ ಹೊಗಳಿದರು.
ಕರ್ನಾಟಕದಲ್ಲಿ ಹಿಂದುಗಳಿಗೆ ಒಂದು ಕಾನೂನು ಮತ್ತು ಮುಸ್ಲಿಮರಿಗೆ ಒಂದು ಕಾನೂನು ಯಾಕೆ ಎಂದರಲ್ಲದೇ, ಗಣೇಶ ನಮ್ಮ ಆರಾದ್ಯ ದೇವರು. ಈ ಹಬ್ಬ ಆಚರಿಸಲಿಕ್ಕೆ ೨೦ ಕಟ್ಟಳೆಗಳನ್ನು ಸರ್ಕಾರ ಹಾಕುತ್ತದೆ. ಇದೆಲ್ಲ ಇನ್ನಂದೆ ನಡೆಯುವದಿಲ್ಲಾ ಎಂದರು. ಧರ್ಮಸ್ಥಳದ ಹೆಸರು ಕೆಡಿಸುವ ಸಲುವಾಗಿ ಯಾರೋ ಮೂರ್ಖನ ಮಾತು ಕೇಳಿ ೧೮ ಪೂಟಗಳಷ್ಟು ಆಳ ಜೆಸಿಬಿಯಿಂದ ನೆಲ ಹಗೆಯಲಾಯಿತು, ಯಾರಾದ್ರು ಹೆಣವನ್ನು ಅಷ್ಟು ಆಳದಲ್ಲಿ ಹುಗಿಯುತ್ತಾರೆಯೆ ಎಂದು ಪ್ರಶ್ನಿಸಿದರು. ಇನ್ನು ಯಾವುದೇ ವಿಷಯದ ಬಗ್ಗೆ ಗೃಹ ಸಚಿವರನ್ನು ಕೇಳಿದರೆ ಆ ವಿಚಾರ ಗೊತ್ತಿಲ್ಲಾ ಆಮೇಲೆ ಮಾತನಾಡುತ್ತೆನೆ ಎಂದು ಹಾರಿಕೆಯ ಉತ್ತರ ನೀಡುತ್ತಾರೆ ಎಂದರಲ್ಲದೆ ಜನರಿಗೆ ಗ್ಯಾರಂಟಿ ಕೊಡುವ ನೆಪದಲ್ಲಿ ಬೆಲೆಗಳನ್ನು, ಟ್ಯಾಕ್ಸಗಳನ್ನು ಹೆಚ್ಚು ಮಾಡಿ ಜನರನ್ನು ಈ ಸರ್ಕಾರ ಲೂಟಿ ಮಾಡುತ್ತಿದೆ ಎಂದು ಪಾಟೀಲ ಆಕ್ರೋಶ ವ್ಯಕ್ತ ಪಡಿಸಿದರು.
ನಮಗೆ ಸ್ವಾತ್ಯಂತ್ರ ಮಹಾತ್ಮಾ ಗಾಂಧಿ, ಜವಾಹರಲಾಲ ನೆಹರು ಸಿಕ್ಕಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ನಮಗೆ ಸ್ವಾತ್ಯಂತ್ರ ಸಿಕ್ಕಿದ್ದು ನೇತಾಜಿ ಸುಭಾಶ ಚಂದ್ರ ಬೋಸ, ವೀರ ಸಾವರ್ಕರ, ಮದನಲಾಲ ಡಿಂಗ್ರಾ, ಲಾಲಾ ಲಜಪತರಾಯ, ಭಗತಸಿಂಗರಂತಹ ಮಹನಿಯರ ಪ್ರಾಣ ತ್ಯಾಗದಿಂದ ಎಂದರು. ವೀರ ಸಾವರ್ಕರ ಎರಡು ಬಾರಿ ಕಾಲಾ ಪಾನಿ ಶಿಕ್ಷೆಗೆ ಗುರಿಯಾಗಿರುವುದನ್ನು ಸ್ಮರಿಸುತ್ತಾ ಇನ್ನಾದರೂ ಹಿಂದು ಧರ್ಮ ಉಳಿವಿಗಾಗಿ ಹಿಂದೂಗಳೆಲ್ಲ ಒಕ್ಕಟ್ಟಾಗಿ ಧರ್ಮದ ಪರ ಹೋರಾಟ ಮಾಡುವವರಿಗೆ ಆರಿಸಿ ತನ್ನಿ ಎಂದರು.
ಸಮಾರಂಭಕ್ಕೂ ಪೂರ್ವದಲ್ಲಿ ಪಟ್ಟಣದ ಬೆಲ್ಲದ ಪೇಟೆಯಲ್ಲಿ ವೀರ ಸಾವರ್ಕರ ಯುವಕ ಸಂಘ ಹಾಗೂ ಶ್ರೀರಾಮ ಸೇನೆ ಕಾರ್ಯಕರ್ತರು ಪ್ರತಿಷ್ಟಾಪಿಸಿದ ಗಣೇಶನಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನೆರದಿದ್ದ ಜನರೆಲ್ಲಿ ಹಿಂದೂ ಹುಲಿ ಬಸವರಾಜ ಪಾಟೀಲ್ ಯತ್ನಾಳ ಅವರಿಗೆ ಜಯವಾಗಲೆಂದು ಘೋಷಣೆ ಕೂಗಿದರು.
ಸಮಾರಂಭದ ವೇದಿಕೆಯ ಮೇಲೆ ಸ್ಥಳೀಯ ಕೆಂಪಯ್ಯಸ್ವಾಮಿ ಮಠದ ಪೀಠಾಧಿಕಾರಿಗಳಾದ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಹೊಸಮಠದ ವಿರುಪಾಕ್ಷ ಮಹಾಸ್ವಾಮಿಗಳು, ದರ್ಶನ ವಾಳಕೆ, ಶಿವರಾಜ ಅಂಬಾರಿ, ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಲಕ್ಷ್ಮಣ ಯಡ್ರಾವಿ ನಿರೂಪಿಸಿದರು.