ಚುನಾವಣೆ ಮುಗಿದ 15 ದಿನಗಳಲ್ಲಿ ಡಿಕೆಶಿ ಸಿಎಂ ಆಗುವ ಪ್ಲಾನ್: ಯತ್ನಾಳ್ ಹೊಸ ಬಾಂಬ್

Ravi Talawar
ಚುನಾವಣೆ ಮುಗಿದ 15 ದಿನಗಳಲ್ಲಿ ಡಿಕೆಶಿ ಸಿಎಂ ಆಗುವ ಪ್ಲಾನ್: ಯತ್ನಾಳ್ ಹೊಸ ಬಾಂಬ್
WhatsApp Group Join Now
Telegram Group Join Now

ವಿಜಯಪುರ, ಏ.17: ಲೋಕಸಭಾ ಚುನಾವಣೆ ಮುಗಿದ 15 ದಿನಗಳಲ್ಲಿ ಡಿಕೆ ಶಿವಕುಮಾರ್ ​ ಅವರು ಸಿಎಂ ಆಗುವ ಪ್ಲಾನ್ ಹಾಕಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್  ಹೊಸ ಬಾಂಬ್ ಸಿಡಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆಯಲ್ಲಿ ತನ್ನ ಪರವಾಗಿರುವರನ್ನ ಆಯ್ಕೆ ಮಾಡಿಕೊಂಡು ಡಿಕೆಶಿ ಸಿಎಂ ಆಗಲು ಮುಂದಾಗಿದ್ದಾರೆ. ಅದಕ್ಕಾಗಿ ಲಿಂಗಾಯತರು, ಒಕ್ಕಲಿಗರು ಒಂದೇ ಎನ್ನುವ ಸಂದೇಶ ಕೊಡಲು ವಚನಾನಂದ ಸ್ವಾಮೀಜಿ ಪ್ರಯತ್ನ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಅದಕ್ಕಾಗಿಯೇ ಬಾಗಲಕೋಟೆಯಿಂದ ಶಿವಾನಂದ್ ಪಾಟೀಲ್​ರ ಮಗಳನ್ನು ಆರಿಸಿ ಕಳಿಸಿ, ಶಿವಾನಂದ್ ಪಾಟೀಲ್ ನನ್ನ ಜೊತೆ ಇದ್ದಾರೆ, ಡಿಕೆಶಿ ಹಾಗೂ ಪಾಟೀಲ್ ಸೇರಿ ಸಿದ್ದರಾಮಯ್ಯರನ್ನ ಕೆಳಗೇಳಿಸುವ ಕಾರ್ಯತಂತ್ರ ಮಾಡಿರುವ ಸಂದೇಶ ಕೊಟ್ಟಿದ್ದಾರೆ.

ಮುಂದೆ ಕಾಂಗ್ರೆಸ್ ಒಡೆದು ಹೋಗುತ್ತೆ, ಹೊಸ ಸರ್ಕಾರ ರಚನೆಯಾಗುತ್ತದೆ. ಸಿದ್ದರಾಮಯ್ಯರನ್ನ ಇಳಿಸೋಕೆ ಹೋದರೆ ಕಾಂಗ್ರೆಸ್ ಇರದು, ಸರ್ಕಾರ ಪತನ ಎಂದು ಯತ್ನಾಳ್​ ಬಾಂಬ್ ಹಾಕಿದರು. ಹಾಗಾಗಿ ಸಿದ್ದರಾಮಯ್ಯ, ಡಿಕೆಶಿ ಪರವಾಗಿರುವ ಲೋಕಸಭಾ ಅಭ್ಯರ್ಥಿಗಳನ್ನು ಸೋಲಿಸಿ ತಮ್ಮ ಕುರ್ಚಿ ಭದ್ರ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

WhatsApp Group Join Now
Telegram Group Join Now
Share This Article