ಬೆಳಗಾವಿ, ಏಪ್ರಿಲ್ 7: ಒಂದೆಡೆ, ಪ್ರಧಾನಿ ನರೇಂದ್ರ ಮೋದಿ ಕುಟುಂಬ ರಾಜಕಾರಣದ ವಿರುದ್ಧ ಮಾತನಾಡುತ್ತಾರೆ. ಮತ್ತೊಂದೆಡೆ, ಕರ್ನಾಟಕದಲ್ಲಿ ಬಿಎಸ್ ಯಡಿಯೂರಪ್ಪ ಕುಟುಂಬದ ರಾಜಕಾರಣ ನಡೆಯುತ್ತಿದೆ ಎಂದು ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಮತ್ತೆ ಬಿಜೆಪಿಗೆ ಯಾಕೆ ಬರಬೇಕು? ವಿಜಯೇಂದ್ರನ ಗೆಲ್ಲಿಸಲು ಬರಬೇಕಾ? ಕುಟುಂಬ ರಾಜಕಾರಣ ತೊಲಗುವ ವರೆಗೂ ಬಿಜೆಪಿಗೆ ಬರಲ್ಲ ಎಂದರು.