ಹಾಸನ, ಅಕ್ಟೋಬರ್ 14: ಶಿವಸೇನಾ ಶಿಂಧೆ ಬಣ ಸೇರ್ಪಡೆ ಆಫರ್ ಬಗ್ಗೆ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿದ್ದು, ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗುವ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಿಂದೂ ಮತಗಳು ವಿಭಜನೆಯಾಗಬಾರದು ಎಂಬುದು ತಮ್ಮ ಮುಖ್ಯ ಗುರಿಯಾಗಿದ್ದು, ಹಿಂದೂಗಳ ಮತ ವಿಭಜಿಸುವಂತಹ ಕೆಟ್ಟ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.