ರಾಜ ಮನೆತನದವರಿಗೆ ಜನರ ಮಧ್ಯೆ ಇದ್ದು ಗೊತ್ತಿಲ್ಲ: ಯದುವೀರ್ ವಿರುದ್ಧ ಯತೀಂದ್ರ ವ್ಯಂಗ್ಯ

Ravi Talawar
ರಾಜ ಮನೆತನದವರಿಗೆ ಜನರ ಮಧ್ಯೆ ಇದ್ದು ಗೊತ್ತಿಲ್ಲ: ಯದುವೀರ್ ವಿರುದ್ಧ ಯತೀಂದ್ರ ವ್ಯಂಗ್ಯ
WhatsApp Group Join Now
Telegram Group Join Now

ಮೈಸೂರು,ಏ.06: ಬಿಜೆಪಿ ಅಭ್ಯರ್ಥಿ ರಾಜ ಮನೆತನದವರು. ದಂತದ ಗೋಪುರದಲ್ಲಿ ಇದ್ದಂತವರು. ಅವರಿಗೆ ಯಾವತ್ತೂ ಜನರ ಮಧ್ಯೆ ಇದ್ದು ಗೊತ್ತಿಲ್ಲ. ಅವರಿಗೆ ಜನರ ಸಮಸ್ಯೆಗಳು ಏನೂ ಅಂತ ಗೊತ್ತಿಲ್ಲ ಕೊಡಗು-ಮೈಸೂರು ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ವಿರುದ್ಧ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ವ್ಯಂಗ್ಯವಾಡಿದ್ದಾರೆ.

ಮೈಸೂರಿನಲ್ಲಿ ಪ್ರಚಾರ ಭಾಷಣದಲ್ಲಿ ಮಾತನಾಡಿದ ಯತೀಂದ್ರ, ನೀವ್ಯಾರು ಅರಮನೆ ಮುಂದೆ ಹೋಗಿ ನಿಂತುಕೊಳ್ಳಲು ಆಗಲ್ಲ. ಕಾರ್ಯಕರ್ತರೇ ಹೋಗಿ ಭೇಟಿ ಮಾಡೊಕೆ ಆಗಲ್ಲ. ಇನ್ನು ಜನಸಾಮಾನ್ಯರು ಭೇಟಿ ಮಾಡಲು ಸಾಧ್ಯವಾ ಎಂದು ಪ್ರಶ್ನಿಸಿದ್ದಾರೆ.

ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳಲ್ಲಿ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಈಗಾಗಲೇ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಅಂತೆಯೇ ಮೈಸೂರು ಪ್ರಚಾರ ಕಣದಲ್ಲಿ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

WhatsApp Group Join Now
Telegram Group Join Now
Share This Article