– ಅಬುಶಾಮಾ ಹವಾಲ್ದಾರ
ಇಂಡಿ 07:- ನಂಜುಡಪ್ಪ ವರದಿ ಪ್ರಕಾರ ಇಂಡಿ ಅತಿ ಹಿಂದುಳಿದ ಪ್ರದೇಶವಾಗಿದ್ದು ಪ್ರಸ್ತೂತ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಪರಿಶ್ರಮದ ಫಲವಾಗಿ ಅಭಿವೃದ್ದಿ ಪತದತ್ತ ಸಾಗುತ್ತಿರುವುದು ಹೆಮ್ಮೆಯ ವಿಷಯ. ಆದರೆ ನಿಂಬೆ ನಾಡು ತನ್ನದೆಯಾದ ಛಾಪು ಮೂಡಿಸಿದ್ದು ನಗರಸಭೆಯಾಗಿ ಮತ್ತೊಂದು ಮುಕುಟ ಪ್ರಾಯಕ್ಕೆ ಕಾರಣವಾಗಿ ಹೆಮ್ಮೆ ಪಡುವಂತಾಗಿದೆ.
ರಾಜ್ಯದ ಗಡಿ ಭಾಗದ ವಿಜಯಪುರ ಜಿಲ್ಲೆಯ ಇಂಡಿಯು ಪುರಸಭೆಯಾಗಿತ್ತು ಆದರೆ ಗುರುವಾರರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಜರುಗಿದ ಸಚಿವ ಸಂಪುಟದಲ್ಲಿ ನಗರಸಭೆಯಾಗಿ ಅನುಮೊದನೆಗೊಂಡಿರುವುದನ್ನು ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಅವರು ಸುದ್ದಿಗೊಷ್ಠಿಯಲ್ಲಿ ತಿಳಿಸಿದ್ದಾರೆ. ಈ ಸುದ್ದಿ ತಿಳಿಯುತ್ತಿದಂತೆ ಪಟ್ಟಣದ ಪುರಸಭೆ ಹಾಗೂ ಬಸವೇಶ್ವರ ವೃತ್ತದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಅಭಿಮಾನಿಗಳು, ಕಾರ್ಯಕರ್ತರು, ಹೀರಿ ಕಿರಿಯ ಮುಖಂಡರು, ಪುರಸಭೆ ಸದಸ್ಯರು ಸೇರಿದಂತೆ ಅನೇಕ ಜನ ಘೊಷಣೆಗಳನ್ನು ಕೂಗಿ ಸಂಭ್ರಮಾಚರಣೆ ಮಾಡಿದರು.
ಪುರಸಭೆಯಾಗಿ ನಗರಸಭೆಯಾಗಿ ಪರಿವರ್ತನೆಯಾಗಬೇಕು ಎಂಬ ಬಹುದಿನಗಳ ಶಾಸಕ ಯಶವಂತರಾಯಗೌಡ ಪಾಟೀಲ ಬೇಡಿಕೆಯಾಗಿತ್ತು. ಇದಕ್ಕೆ ಶಾಸಕರ ಅವಿರತ ಪರಿಶ್ರಮದ ಫಲವಾಗಿ ಇಂದು ನಡೆದ ರಾಜ್ಯ ಸಚಿವ ಸಂಪುಟದಲ್ಲಿ ಪುರಸಭೆಯಾಗಿದ್ದ ಇಂಡಿಯು ನಗರಸಭೆಯಾಗಿ ಅನುಮೊದನೆಗೊಂಡಿದೆ. ಈ ಸುದ್ದಿ ತಿಳಿಯುತ್ತಿದಂತೆ ನಗರದ ಜನ ಸಮಾನ್ಯರು ಕೂಡಾ ಹರುಷ ವ್ಯಕ್ತ ಪಡಿಸಿದ್ದು ನಗರದ ಜನತೆಯ ಸಂತೋಷಕ್ಕೆ ಪಾರವೆ ಇಲ್ಲ. ಸಡಗರ ಸಂಭ್ರಮಾಚರಣೆಯಲ್ಲಿ ಜನ ತೊಡಗಿದ್ದು ಕಂಡು ಬಂದಿತ್ತು.
ಇತ್ತಿಚೇಗೆ ಇಂಡಿ ಪಟ್ಟಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸಿದ ಸಂದರ್ಭದಲ್ಲಿ ಇಂಡಿಯನ್ನು ನಗರಸಭೆ ಎಂದು ಘೊಷಣೆ ಮಾಡಬಹುದು ಎಂಬ ಜನ ಕಾತರದಲ್ಲಿ ಇದ್ದರು. ಅಂದು ನಿರಿಕ್ಷೆಯಲ್ಲಿದ್ದ ಜನರಿ ಇಂದು ಸಿಹಿ ಸುದ್ದಿಯನ್ನು ರಾಜ್ಯ ಸರ್ಕಾರ ನೀಡಿದೆ ಎಂದರೆ ತಪ್ಪಾಗಲಾರದು.
ಇಂಡಿಯನ್ನು ನಗರಸಭೆಯಾಗಿ ಮಾಡುತ್ತೆನೆ ಎಂದು ನಮ್ಮ ನಾಯಕರಾದ ಶಾಸಕ ಯಶವಂತರಾಯಗೌಡ ಪಾಟೀಲ ಅವರು ತಿಳಿಸಿದ್ದರು. ಅದರಂತೆ ಇಂದು ಅವರ ಪರಿಶ್ರಮದ ನಗರಸಭೆಯಾಗಿ ಸಚಿವ ಸಂಪುಟದಲ್ಲಿ ಅನುಮೊದನೆ ಗೊಂಡಿರುವುದು ಸಂತಸ ತಂದಿದೆ.
-ಜಾವಿದ ಮೋಮಿನ. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ಇಂಡಿ.
ಶಾಸಕ ಯಶವಂತರಾಯಗೌಡ ಪಾಟೀಲ ಅವರು ನುಡಿದಂತೆ ನಡೆದುಕೊಳ್ಳುವ ಜನ ನಾಯಕರು. ಅವರು ಹೇಳಿದ ಯಾವುದೆ ಮಾತು ತಪ್ಪಿಲ್ಲ. ಅವರ ಅವಿರತ ಶ್ರಮವೇ ನಗರಸಭೆಯಾಗಲು ಕಾರಣ.
– ಸತೀಶ ಕುಂಬಾರ ಕಾಂಗ್ರೇಸ್ ಮುಖಂಡರು ಇಂಡಿ.
ಸಂಭ್ರಮಾಚರಣೆಯಲ್ಲಿ ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಉಪಾಧ್ಯಕ್ಷ ಜಹಾಂಗಿರ ಸೌದಾಗರ, ಮಾಜಿ ಎಪಿಎಮ್‌ಸಿ ಅಧ್ಯಕ್ಷರಾದ ಭೀಮಣ್ಣ ಕವಲಗಿ, ಜಟ್ಟೆಪ್ಪ ರವಳಿ, ಹಾಗೂ ಜಾವಿದ ಮೋಮಿನ, ಪ್ರಶಾಂತ ಕಾಳೆ, ಭಿಮಾಶಂಕರ ಮೂರಮನ, ಸಂತೋಷ ಪರಶಣ್ಣನವರ, ದೇವೆಂದ್ರ ಕುಂಬಾರ, ಹುಸೇನ ಜಮಾದಾರ, ಅಯೂಬ ಬಾಗವಾನ, ಅಸ್ಲಂ ಕಡಣಿ, ಉಸ್ಮಾನಗಣಿ ಶೇಖ, ಶ್ರೀಕಾಂತ ಕುಡಿಗನೂರ, ಸತೀಶ ಕುಂಬಾರ , ಉಮೇಶ ದೇಗಿನಾಳ, ಖಾಜಿ, ಸದಾಶಿವ ಪ್ಯಾಟಿ,ಆಶಿಪ್ ಕಾರಬಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.