ಸರ್ಕಾರದ ಸೌಲಭ್ಯಗಳನ್ನು ಪ್ರತಿಯೊಬ್ಬರಿಗೂ ತಲುಪಿಸಲು ಸಂಘವು ಶ್ರಮಿಸಬೇಕು : ಯಶವಂತರಾಯಗೌಡ ಪಾಟೀಲ

Hasiru Kranti
ಸರ್ಕಾರದ ಸೌಲಭ್ಯಗಳನ್ನು ಪ್ರತಿಯೊಬ್ಬರಿಗೂ ತಲುಪಿಸಲು ಸಂಘವು ಶ್ರಮಿಸಬೇಕು : ಯಶವಂತರಾಯಗೌಡ ಪಾಟೀಲ
WhatsApp Group Join Now
Telegram Group Join Now

ಇಂಡಿ: ಮಳೆ, ಗಾಳಿ ಬಿಸಿಲು, ಚಳಿ ಎನ್ನದೆ ಕಷ್ಟ ಪಟ್ಟು ಶ್ರಮವಹಿಸಿ ವ್ಯಾಪಾರ ಮಾಡುವವರು ಇದ್ದರೆ ಅದು ಬೀದಿ ಬದಿಯ ವ್ಯಾಪರಸ್ಥರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಬಿದಿ ಬದಿ ವ್ಯಾಪರಸ್ಥರಿಗೆ ತಳ್ಳುವ ಗಾಡಿ ಹಾಗೂ ಬಿಸಿಲು ಬೇಗೆ ತಪ್ಪಿಸಲು ಒಂದು ಛತ್ರಿ ನೀಡುವುದಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಬೀದಿ ಬದಿ ವ್ಯಾಪರಸ್ಥರ ಸಂಘದ ಮನವಿಗೆ ಸ್ಪಂದಿಸಿ ಭರವಸೆ ನೀಡಿದರು.
ಅವರು ನಗರದ ಸ್ಟಾರ ಫಂಕ್ಷನ ಹಾಲನಲ್ಲಿ ನೂತನ ಬೀದಿ ಬದಿ ವ್ಯಾಪಾರಸ್ಥರ ಸಂಘ ಉದ್ಘಾಟಿಸಿ ಮಾತನಾಡಿದರು.
ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪ್ರತಿಯೊಬ್ಬರಿಗೂ ತಲುಪವಲ್ಲಿ ಈ ಸಂಘವು ಶ್ರಮಿಸಬೇಕು. ರಸ್ತೆ ಬದಿಯಲ್ಲಿ ವ್ಯಾಪರ ಮಾಡುವುರಿಂದ ವಾಹನ ಸವಾರರಿಗೆ ವಾಹನಗಳಿಗೆ ಸಾರ್ವಜನಿಕರಿಗೆ ಯಾವುದೆ ರೀತಿ ತೊಂದರೆಯಾಗದಂತೆ ಮುನ್ನಚ್ಚರಿಕೆ ವಹಿಸಿ. ತಾವು ತಮ್ಮ ತಳ್ಳು ಗಾಡಿಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ವ್ಯಾಪಾರ ಮಾಡಿ ಇದರಿಂದ ಇನ್ನೊಬ್ಬರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಎಲ್ಲೆಂದರಲ್ಲಿ ಕಸ ಖಡ್ಡಿ ಬಿಸಾಕದೆ ನಗರ ಸ್ವಚ್ಚತೆಗೆ ತಾವೂ ಕೂಡಾ ಕೈ ಜೊಡಿಸಿ ಕಸ ವಿಲೇವಾರಿ ಮಾಡುವ ವಾಹನದಲ್ಲಿ ಕಸವನ್ನು ಹಾಕಬೇಕು. ಸಂಘದ ಉದ್ದೇಶಗಳು ಬರಿ ಲಾಭಕ್ಕಾಗಿ ಇರದೆ ಜನೊಪಯೋಗಿಯಾಗಿರಬೇಕು. ಒಳ್ಳೆಯ ಕೇಲಸ ಕಾರ್ಯಗಳನ್ನು ಮಾಡಿ ಸಂಘದ ಏಳಿಗೆಗಾಗಿ ಶ್ರಮಿಸಿದಾಗ ಮಾತ್ರ ಸಂಘ ಸಂಸ್ಥೆಗಳು ಬೆಳವಣಿಗೆ ಹೊಂದಲು ಸಾಧ್ಯ ಆ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗಬೇಕು ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪರಸ್ಥರ ಸಂಘದ ಸದಸ್ಯರು ೧೫೦ ತಳ್ಳುವ ಗಾಡಿಗಳು ಹಾಗೂ ೧೫೦ ಛತ್ರಿಗಳನ್ನು ನೀಡಬೇಕು ಎಂದು ಮನವಿ ಸಲ್ಲಿಸಿದರು.

ವೇದಿಕೆ ಮೇಲೆ ಲಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಭಿಮಣ್ಣ ಕವಲಗಿ, ಮೌಲಾನಾ ಶಾಕಿರಹುಸೇನ ಕಾಶ್ಮಿ, ಮೌಲಾನಾ ಜಿಯಾಉಲ್‌ಹಕ್ ಉಮ್ರಿ, ಜಿಲ್ಲಾ ಅಧ್ಯಕ್ಷ ಲಾಸಾಬ ಕೋರಬು ಇದ್ದರು.
ಈ ಸಂದರ್ಭದಲ್ಲಿ ಬೀದಿ ವ್ಯಾಪಾರಿಗಳ ಸಂಘದ ತಾಲೂಕಾ ಅಧ್ಯಕ್ಷ ರಮಜಾನ ಶೇಖ, ಉಪಾಧ್ಯಕ್ಷ ಶಕೀಲ ಕೊರಬು, ಯಾಕುಬ ನಾಟೀಕಾರ, ಗುಡ್ಲ, ನಾಗಮ್ಮ ವಾಲಿಕಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
Share This Article