ನವದೆಹಲಿ: ದೆಹಲಿಯ ಹಳೆಯ ರೈಲ್ವೆ ಸೇತುವೆಯಲ್ಲಿ ಯಮುನಾ ನದಿಯ ನೀರಿನ ಮಟ್ಟ ಇಂದು ಬೆಳಗ್ಗೆ 7 ಗಂಟೆಗೆ 207.48 ಮೀಟರ್‌ನಷ್ಟಿತ್ತು, ಉಕ್ಕಿ ಹರಿಯುವ ನದಿಯಿಂದ ಬರುವ ಪ್ರವಾಹದ ನೀರು ಹತ್ತಿರದ ಪ್ರದೇಶಗಳನ್ನು ಮುಳುಗಿಸಿವೆ.
ಅಧಿಕೃತ ಮಾಹಿತಿಯ ಪ್ರಕಾರ, ಬೆಳಗ್ಗೆ 6 ರಿಂದ 7 ರವರೆಗೆ 207.48 ಮೀಟರ್‌ನಲ್ಲಿ ನೀರಿನ ಮಟ್ಟ ಸ್ಥಿರವಾಗಿತ್ತು. ಬೆಳಗ್ಗೆ 5 ಗಂಟೆಗೆ 207.47 ಮೀಟರ್‌ನಷ್ಟಿದ್ದರೂ, 6 ಗಂಟೆಗೆ 207.48 ಮೀಟರ್‌ನಷ್ಟಿತ್ತು. ಅಧಿಕಾರಿಗಳ ಪ್ರಕಾರ, ನಸುಕಿನ ಜಾವ 2 ಗಂಟೆಯಿಂದ 5 ರವರೆಗೆ ನೀರಿನ ಮಟ್ಟ 207.47 ಮೀಟರ್‌ನಲ್ಲಿ ಸ್ಥಿರವಾಗಿತ್ತು.
ದೆಹಲಿ ಮುಖ್ಯಮಂತ್ರಿ, ಸಂಪುಟ ಸಚಿವರು ಮತ್ತು ಪ್ರಮುಖ ಅಧಿಕಾರಿಗಳ ಕಚೇರಿಗಳನ್ನು ಹೊಂದಿರುವ ದೆಹಲಿ ಸಚಿವಾಲಯದ ಬಳಿ ಪ್ರವಾಹ ನೀರು ತಲುಪಿದೆ. ವಾಸುದೇವ್ ಘಾಟ್ ಸುತ್ತಮುತ್ತಲಿನ ಪ್ರದೇಶಗಳು ಸಹ ಜಲಾವೃತಗೊಂಡವು.