ಹುಕ್ಕೇರಿ: ನಿಸ್ವಾರ್ಥ ಸೇವಾ ಮನೋಭಾವನೆಯಿಂದ ರೈತರಿಗಾಗಿ ಹುಟ್ಟುಹಾಕಿದ ಸಂಸ್ಥೆಗೆ ಶ್ರಮಿಸಿದ ಮಹನೀಯರ ಸ್ಮರಿಸುವದು ನಮ್ಮಲರ ಕರ್ತವ್ಯ, ಹಾಗೂ ಜವಾಬ್ದಾರಿ,ಪರಂಪರೆಯ ಆಗಿದೆ ಬಿ.ಡಿ.ಸಿ.ಸಿ ಬ್ಯಾಂಕ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
ಹುಕ್ಕೇರಿ ತಾಲೂಕಿನ ಯಾದಗೂಡ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಶತಮಾನೋತ್ಸವ,ಹಾಗೂ ಆತ್ಮನಿರ್ಭರ ಭಾರತ ಯೋಜನೆಯಡಿ ೯೦ ಲಕ್ಷ ರೂ ವೆಚ್ಚದಲ್ಲಿ ಉಗ್ರಾಣ ಹಾಗೂ ರೈತ ಸೇವಾ ಕೇಂದ್ರ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಪ್ರಜಾತಂತ್ರ ವ್ಯವಸ್ಥೆಯ ನಡುವೆ ಸಹಕಾರಿ ಸಂಘಗಳಲ್ಲಿ ರಾಜಕೀಯ ರಹಿತ ಆರೋಗ್ಯಯುತ, ಸೇವೆಯಿಂದ ಸಂಸ್ಥೆಗಳು ಬೆಳೆಯಲು ಸಾಧ್ಯವೆಂದು ಹೇಳಿದರು.ಯಾದಗೂಡ ಹಾಗೂ ಶೇಲಾಪೂರ ಗ್ರಾಮದ ರೈತ ೧೫೦೬ ಸದಸ್ಯರು ವಿವಿಧ ಯೋಜನೆಯಡಿ ೧೩ ಕೋಟಿ ರೂ ಲಾಭ ಪಡೆದುಕೊಂಡಿದ್ದಾರೆ.೧೯೬೭ ರಲ್ಲಿ ಕೇಂದ್ರ ಸರಕಾರದ ಅನುದಾನದಲ್ಲಿ ಕಟ್ಟಡದ ಲಾಭ ಪಡೆದುಕೊಂಡ ಏಕೈಕ ಸಂಸ್ಥೆ ಮಾದರಿಯಾಗಿದೆ ಎಂದರು.
ಶಾಸಕ ನಿಖಿಲ್ ಕತ್ತಿ ಮಾತನಾಡಿ ಸರಕಾರದ ಯೋಜನೆಗಳು ಅಭಿವೃದ್ಧಿಕಡೆ ಬಳಕೆಯಾಗಲಿ ಎಂದರು.ನಿಡಸೋಸಿ ಸಿದ್ದಸಂಸ್ಥಾನ ಮಠದ ಪಂಚಮಶಿವಲಿಂಗೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.ಅಧ್ಯಕ್ಷ ಅಲಗೌಡ ಪಾಟೀಲ ಪ್ರಾಸ್ತಾವಿಕವಿಕವಾಗಿ ಏರಿಳಿತದ ನಡುವೆ ಶತಮಾನೋತ್ಸವದಲ್ಲಿ ಸಾಧನೆಯ ಸಹಕರಿಸಿದ ಜನರಿಗೆ ಮಾತನಾಡಿದರು.
ಸಮಾರಂಭದಲ್ಲಿ ಗ್ರಾ.ಪಂ ಅಧ್ಯಕ್ಷ ಶ್ರೀದೇವಿ ಲೈನದಾರ,ಉಪಾಧ್ಯಕ್ಷ ಶಿವನಗೌಡ ಪಾಟೀಲ.ಸಂಗಮ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ,ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ತಾ.ಪಂ ಮಾಜಿ ಅಧ್ಯಕ್ಷ ಸತ್ಯಪ್ಪ ನಾಯಿಕ,ಪಿಕಾರ್ಡ ಬ್ಯಾಂಕಿನ ಅಧ್ಯಕ್ಷ ದುರದುಂಡಿ ಪಾಟೀಲ,ಆಡಳಿತ ಮಂಡಳಿಯ ಉಪಾಧ್ಯಕ್ಷ ಸಂಗೀತಾ ಜನಮಟ್ಟಿ, ,ಮಹಾಂತೇಶ ಮಗೆಣ್ಣಿ, ರಾಜಗೌಡ ಪಾಟೀಲ, ಮಲ್ಲಪ್ಪ ಅರಳಿಮಟ್ಟಿ,ಬಾಜಿರಾವ ಕರೋಲಿ,ಮಾರುತಿ ಮಗೆಪ್ಪಗೋಳ,,ಮಹಾರುದ್ರ ಖರಾಡಿ,,ಸುವರ್ಣ ಪಾಟೀಲ, ಲಕ್ಮೀಬಾಯಿ ನಾವಲಗೇರ ,ಬಾಲಚಂದ್ರ ಹಡಾಡಿ, ಬ್ಯಾಂಕ ನಿರೀಕ್ಷಕ ಮಂಜುನಾಥ ಹಡಾಡಿ,, ಬಸವರಾಜ ಉತ್ತೂರಿ ಕಾರ್ಯದರ್ಶಿ ಮಲ್ಲಪ್ಪಾ ಜನಮಟ್ಟಿ,ಬೀಮರಾಯಿ ಚೌಗಲಾ,ಶಂಕರ ಮೆಗೆಣ್ಣಿ ಅಭಿಯಂತರ ಎ.ಬಿ ಪಟ್ಟಣಶೆಟ್ಟಿ, ಗುತ್ತಿಗೆದಾರ ಪರಪ್ಪ ಮಗದುಮ್ಮ. ಸಹಕಾರಿ ಅಭಿವೃದ್ಧಿ ಅಧಿಕಾರಿ ಎಸ.ಎ.ಪಾಟೀಲ ಸೇರಿದಂತೆ ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸಿದ ಹಿಂದಿನ ಆಡಳಿತ ಮಂಡಳಿಯ ಸದಸ್ಯರನ್ನು ಸತ್ಕರಿಸಲಾಯಿತು.
ಆಶೋಕ ಮಗೆಣ್ಣಿ ಸ್ವಾಗತಿಸಿದರು. ಡಾ. ಎಮ್.ಎಸ.ಖರಾಡಿ ನಿರೂಪಿಸಿದರು. ಕಾರ್ಯದರ್ಶಿ ಮಲ್ಲಪ್ಪ ಜನಮಟ್ಟಿ ವಂದಿಸಿದರು.
ಬಾಕ್ಸ್
ಹೆಚ್ಚು ಶಿಕ್ಷಣವಂತರಿಂದ ವಿಪರೀತ ಪರಿಣಾಮ, ವಾಲ್ಮೀಕ ನಿಗಮದ ಹಗರಣ, ವಿಜಯ ಮಲ್ಯಾ, ನಿರವ ಮೋದಿ ಉದಾಹರಣೆ ,ಆದರೆ ಕಡಿಮೆ ಕಲಿತ ರೈತರಿಂದಲ್ಲ
ರಮೇಶ ಕತ್ತಿ ಮಾಜಿ ಸಂಸದರು.
ಹುಕ್ಕೇರಿ ತಾಲೂಕಿನ ಯಾದಗೂಡ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಶತಮಾನೋತ್ಸವದಲ್ಲಿ ಶಾಸಕ ನಿಖಿಲ್ ಕತ್ತಿ, ಬಿಡಿಸಿಸಿ ಅಧ್ಯಕ್ಷ ರಮೇಶ ಕತ್ತಿ, ನಿಡಸೋಸಿ ಶ್ರೀಗಳು.ಪಾಲ್ಗೊಂಡಿದ್ದರು.