ಒತ್ತಡಕ್ಕೆ ಒಳಗಾಗದೆ ಧೈರ್ಯದಿಂದ ಪರೀಕ್ಷೆ ಬರೆಯಿರಿ : ನವೀದ

MK HasiruKranti
ಒತ್ತಡಕ್ಕೆ ಒಳಗಾಗದೆ ಧೈರ್ಯದಿಂದ ಪರೀಕ್ಷೆ ಬರೆಯಿರಿ : ನವೀದ
WhatsApp Group Join Now
Telegram Group Join Now
ಕೊಪ್ಪಳ/ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಯಾವುದೇ ಒತ್ತಡಕ್ಕೆ ಒಳಗಾಗದೆ ಧೈರ್ಯದಿಂದ ಶಾಂತತೆಯಿಂದ ಪರೀಕ್ಷೆ ಬರೆಯಿರಿ ಎಂದು ಕಾನೂನು ಮಾಪನ ಶಾಸ್ತ್ರ ಇಲಾಖೆಯ ನಿರೀಕ್ಷಕ ಎಂ ಬದಿಯುದ್ದೀನ್ ಅಹಮದ್ ನವೀದ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು,
ಅವರು ಬುಧವಾರದಂದು ಬೆಳಿಗ್ಗೆ ಕೊಪ್ಪಳದಲ್ಲಿ ಆರಂಭಗೊಂಡಿರುವ ಎಸ್ ಎಸ್ ಎಲ್ ಸಿ ಪರೀಕ್ಷೆ ಕೇಂದ್ರದ ಹೊರಗಡೆ ನಿಂತುಕೊಂಡು ಪರೀಕ್ಷೆ ಬರೆಯಲು ಕೇಂದ್ರಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಗುಲಾಬಿ ಹೂವ ನೀಡಿ ಅವರನ್ನು ಸ್ವಾಗತಿಸಿ ಶುಭ ಕೋರಿ ಮಾತನಾಡಿದರು,
ಪ್ರಶ್ನೆಗಳಿಗೆ ಸಮಂಜಸವಾದ ರೀತಿಯಲ್ಲಿ ಉತ್ತರ ಬರೆದು ತಮ್ಮ ಮುಂದಿನ ಭವಿಷ್ಯ ಉಜ್ವಲವಾಗಿ ರೂಪಿಸಿಕೊಳ್ಳಲು ವಿದ್ಯಾರ್ಥಿಗಳು ಪರೀಕ್ಷೆ ಗಳನ್ನು ಬರಿಯಬೇಕು ಯಾವುದೇ ರೀತಿಯ ಗೊಂದಲ ಒತ್ತಡಕ್ಕೆ ಒಳಗಾಗಬೇಡಿ, ಧೈರ್ಯ ಮತ್ತು ಶಾಂತತೆಯಿಂದ ಇದ್ದುಕೊಂಡು ಉತ್ತಮ ರೀತಿಯಲ್ಲಿ ಪರೀಕ್ಷೆಗಳಿಗೆ ಉತ್ತರ ಬರೆದು ತಮ್ಮ ಮುಂದಿನ ಭವಿಷ್ಯ ಉಜ್ವಲ ಗೊಳಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳು  ಶ್ರಮಿಸಿ ಯಶಸ್ವಿಯಾಗಲಿ ಎಂದು ಅವರಿಗೆ ಧೈರ್ಯ ತುಂಬಿ ಅವರನ್ನು ಗುಲಾಬಿ ಹೂವ ನೀಡಿ ಆತ್ಮೀಯವಾಗಿ ಸ್ವಾಗತಿಸಿಕೊಂಡು ಅವರಿಗೆ ಶುಭ ಕೋರಿ ಪರೀಕ್ಷಾ ಕೇಂದ್ರಕ್ಕೆ ಕಳಿಸಿದರು,
ಈ ಸಂದರ್ಭದಲ್ಲಿ ಸಮಾಜದ ಯುವ ನಾಯಕ ಸಿರಾಜ್ ಲಾಟಿ ಸೇರಿದಂತೆ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಪಾಲಕರು ಪರೀಕ್ಷಾ ಕೇಂದ್ರದ ಹೊರಗಡೆ ಉಪಸ್ಥಿತರಿದ್ದು ಎಲ್ಲಾ ವಿದ್ಯಾರ್ಥಿಗಳಿಗೆ ಗುಲಾಬಿ ಹೂವ ನೀಡಿ ಶುಭ ಕೋರಿದರು,
WhatsApp Group Join Now
Telegram Group Join Now
Share This Article