ಕುಸ್ತಿ ಕಲೆ ಗ್ರಾಮೀಣ ಸಂಸ್ಕೃತಿಯ ಹೆಮ್ಮೆ : ಬಿರಾದಾರ

Pratibha Boi
ಕುಸ್ತಿ ಕಲೆ ಗ್ರಾಮೀಣ ಸಂಸ್ಕೃತಿಯ ಹೆಮ್ಮೆ : ಬಿರಾದಾರ
WhatsApp Group Join Now
Telegram Group Join Now
ಮುದ್ದೇಬಿಹಾಳ :   ಪಟ್ಟಣದಲ್ಲಿ ಲಕ್ಷ್ಮೀ ವೆಂಕಟೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಳೆಯ ತಹಶೀಲ್ದಾರ ಕಚೇರಿ ಹತ್ತಿರದ ಸೈನಿಕ ಮೈದಾನದಲ್ಲಿ ಭರ್ಜರಿಯಾಗಿ ಕುಸ್ತಿ ಪದ್ಯಾವಳಿ ನಡೆಯಿತು. ಈ ಪೈಪೋಟಿಗೆ ಸ್ಥಳೀಯ ಮತ್ತು ಹೊರಗಿನಿಂದ ಬಂದ ಅನೇಕ ಕುಸ್ತಿಪಟುಗಳು ಭಾಗವಹಿಸಿ ಕ್ರೀಡಾಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿದರು.
ಕಾರ್ಯಕ್ರಮಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಮರಾಜ್ ಬಿರಾದಾರ ಚಾಲನೆ ನೀಡಿದ ಅವರು  ಮಾತನಾಡಿ, ಕುಸ್ತಿ ಕಲೆ ಗ್ರಾಮೀಣ ಸಂಸ್ಕೃತಿಯ ಹೆಮ್ಮೆ. ಇದು ಕೇವಲ ದೈಹಿಕ ಶಕ್ತಿ ಪ್ರದರ್ಶನವಲ್ಲ, ಶಿಸ್ತು ಮತ್ತು ಸಹನಶೀಲತೆಯ ಸಂಕೇತ ಎಂದರು.
ಪೈಪೋಟಿಯ ಪ್ರಮುಖ ಆಕರ್ಷಣೆಯಾಗಿದ್ದ ಬೀರಪ್ಪ ಬನಸೋಡೆ ಮತ್ತು ಸಂಜು ಬಜಂತ್ರಿ ಇವರಿಬ್ಬರ ನಡುವಿನ ಪಂದ್ಯ ಸುಮಾರು 45 ನಿಮಿಷಗಳ ಕಾಲ ಕಠಿಣವಾಗಿ ನಡೆಯಿತು. ಇಬ್ಬರೂ ಶ್ರೇಷ್ಠ ಕೌಶಲ್ಯ ಪ್ರದರ್ಶಿಸಿದ ಕಾರಣದಿಂದ ನಿರ್ಣಾಯಕರ ಸಮಿತಿ ಪಂದ್ಯವನ್ನು ಸಮನಾಗಿ ಘೋಷಿಸಿತು.
ಈ ಸಂದರ್ಭದಲ್ಲಿ ಪ್ರಥಮ ಬಹುಮಾನವಾಗಿದ್ದ 50,000 ಮೊತ್ತವನ್ನು ಇಬ್ಬರು ಕುಸ್ತಿಪಟುಗಳಿಗೆ ತಲಾ 25,000 ರೂ. ನೀಡಲಾಯಿತು ಎಂದು ತಾಲೂಕು ಬೋವಿ ವಡ್ಡರ್ ಸಮಾಜದ ಅಧ್ಯಕ್ಷ ರವಿ ಹಡಲಗೇರಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಉಪಾಧ್ಯಕ್ಷ ಶೇಖರ ಢವಳಗಿ, ಪುರಸಭೆ ಸದಸ್ಯ ಹಣಮಂತ ಭೋವಿ, ಮುಖಂಡರಾದ ಪರಶು ನಾಲತವಾಡ, ಹಣಮಂತ ಹಡಲಗೇರಿ, ಶೇಟ್ಟಪ ಭೋವಿ, ಪಂಡಿತ ಇರಕಲ್ಲ, ಲಕ್ಷ್ಮಣ ವಡ್ಡರ, ಸುನೀಲ ಹಡಲಗೇರಿ, ದುರಗಪ್ಪ ಮಹಾಲಿಂಗಪೂರ, ಹಣಮಂತ ಭೀ ಬೆಳಗಲ್ಲ, ಹಣಮಂತ ಮಹಾಲಿಂಗಪೂರ, ವಕೀಲ ರವಿ ನಾಲತವಾಡ, ಹಾಗೂ ಆನಂದ ಹಡಲಗೇರಿ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article