ಕುಸ್ತಿ ಆಟ ಆಧುನಿಕ ಕ್ರೀಡೆ ಮತ್ತು ರಾಜ ಮಹಾರಾಜರ ನೆಚ್ಚಿನ ಆಟ : ಮಹಾಂತೇಶ ದೊಡ್ಡಗೌಡರ

Ravi Talawar
ಕುಸ್ತಿ ಆಟ ಆಧುನಿಕ ಕ್ರೀಡೆ ಮತ್ತು ರಾಜ ಮಹಾರಾಜರ ನೆಚ್ಚಿನ ಆಟ : ಮಹಾಂತೇಶ ದೊಡ್ಡಗೌಡರ
WhatsApp Group Join Now
Telegram Group Join Now
ನೇಸರಗಿ. ಕುಸ್ತಿ ಒಂದು ಆಧುನಿಕ ಕ್ರೀಡೆಯಾಗಿದ್ದು ಇದನ್ನು ಉಳಿಸಿ ಬೆಳೆಸುವದು ಕರ್ತವ್ಯ ನಮ್ಮದಾಗಿದ್ದು,  ದೇಶದ ಎಲ್ಲ ಜಾತ್ರೆಗಳಲ್ಲಿ ಕುಸ್ತಿ ಪಂದ್ಯಾವಳಿ ಆಯೋಜಿಸುವದು ಭಾರತ ದೇಶದ ಪರಂಪರೆ ಅಗಿದ್ದು ಅದಕ್ಕಾಗಿ  ಆಧುನಿಕ ಮತ್ತು ರಾಜಮಹಾರಾಜರ ಅಚ್ಚುಮೆಚ್ಚಿನ ಆಟವಾಗಿತ್ತು. ಈ ಆಟಕ್ಕೆ ನಾವು ಪ್ರೋತ್ಸಾಹ ನೀಡುವದು ಬಹಳ ಮುಖ್ಯ   ಎಂದು  ಮಾಜಿ ಶಾಸಕರು ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಹೇಳಿದರು.
ಅವರು ಸಮೀಪದ ಹಣಬರಹಟ್ಟಿ ಗ್ರಾಮದಲ್ಲಿ ಶ್ರೀ ಗ್ರಾಮದೇವತೆಯರ ಸಂಭ್ರಮದ  ಜಾತ್ರಾ ಮಹೋತ್ಸವದ ಅಂಗವಾಗಿ ದೇವಿಯರ ದರ್ಶನ ಪಡೆದು, ಜಾತ್ರೆಯ ಅಂಗವಾಗಿ  ನಡೆದ ಬ್ರಹತ್ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಹಣಬರಹಟ್ಟಿ ಹಿರೇಮಠದ ಷ ಭ್ರ. ಬಸವಲಿಂಗ ಶಿವಾಚಾರ್ಯರು, ಹಾಗೂ ಗ್ರಾಮದ ಗುರುಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article