ಬಳ್ಳಾರಿ:17. ನಗರದ ಕೌಲ್ ಬಜಾರ್ ಪ್ರದೇಶದ ಶ್ರೀ ವ್ಯಾಸರಾಜರ ಮಠದಲ್ಲಿ ಮಂಗಳವಾರ ಶ್ರೀ ಜಯತೀರ್ಥರ ಮಧ್ಯಾರಾಧನೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಿಗ್ಗೆ ವಿಶೇಷ ಪೂಜೆ, ಅಲಂಕಾರ, ಪಂಚಾಮೃತಾಭಿಷೇಕ, ಮಹಾನೈವೇದ್ಯ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ನೆರವೇರಿದವು. ನಂತರ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ವಿವಿಧ ಭಜನಾ ಮಂಡಳಿ ಸದಸ್ಯರಿಂದ ಸಾಮೂಹಿಕ ಭಜನೆ, ಮಕ್ಕಳಿಂದ ಕೋಲಾಟ ಗಮನಸೆಳೆಯಿತು. ಇದಕ್ಕೂ ಮುನ್ನ ಹೊಸಪೇಟೆಯ ಪಂ.ವಿಶ್ವನಾಥ್ ಪೂಜಾರ್ ಅವರಿಂದ ಶ್ರೀ ಜಯತೀರ್ಥರ ಕುರಿತು ವಿಶೇಷ ಉಪನ್ಯಾಸ ನಡೆಯಿತು. ಈ ಸಂದರ್ಭದಲ್ಲಿ ಮುಖಂಡರಾದ ಭೀಮರಾವ್ ಕುಲಕರ್ಣಿ, ಬಳ್ಳಾರಿ ಅಷ್ಟೋತ್ತರ ಮಂಡಳಿ ಅಧ್ಯಕ್ಷ ವೆಂಕೋಬರಾವ್ ಸೇರಿದಂತೆ ಶ್ರೀಮಠದ ಪ್ರಧಾನ ಅರ್ಚಕರು, ವ್ಯವಸ್ಥಾಪಕರು, ವಿವಿಧ ಮುಖಂಡರು, ಭಕ್ತರು ಭಾಗವಹಿಸಿದ್ದರು. ನಂತರ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.