ಅಯ್ಯಪ್ಪ ಸ್ವಾಮಿಯ ಪಡಿಪೂಜೆ

Ravi Talawar
ಅಯ್ಯಪ್ಪ ಸ್ವಾಮಿಯ ಪಡಿಪೂಜೆ
WhatsApp Group Join Now
Telegram Group Join Now

ರಾಯಬಾಗ. ಹುಕ್ಕೇರಿ ಹಿರೇಮಠ ಶಾಖೆ ರಾಯಬಾಗದಲ್ಲಿ ಅಯ್ಯಪ್ಪ ಸ್ವಾಮಿಯ ಪಡಿಪೂಜೆ ಬುಧವಾರ ಸಾಯಂಕಾಲ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಅಯ್ಯಪ್ಪ ಸ್ವಾಮಿಯ ಪಡಿ ಪೂಜ ಕಾರ್ಯಕ್ರಮವನ್ನು ರಾಯಭಾಗದ ಗುರುಸ್ವಾಮಿಗಳಾದ ಸುರೇಶ ನಾಯಕ್ ಗುರುಸ್ವಾಮಿ ಪ್ರದೀಪ್ ಮಾಯಪ್ಪ ಗುರುಸ್ವಾಮಿ ಇವರ ನೇತೃತ್ವದಲ್ಲಿ ಭಜನೆ ಹಾಗೂ ಪಡಿ ಪೂಜ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಈ ಸಂದರ್ಭದಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ್ ಶಿವಾಚಾರಿಗಳು ಮಾತನಾಡಿ ಕಾರ್ತಿಕ ಮಾಸದಲ್ಲಿ ಅಯ್ಯಪ್ಪನ ವ್ರತವನ್ನು ಎಲ್ಲ ಸ್ವಾಮಿಗಳು ಮಾಡುತ್ತಾ ಬಂದು ನಿಮ್ಮ ಸಂಕಷ್ಟಗಳಿಗೆ ಹಾಗೂ ನಿಮ್ಮ ಹಿಂದೆ ಸದಾ ಯಾವತ್ತು ಅಯ್ಯಪ್ಪ ಸ್ವಾಮಿಯ ನಿಂತಿರುತ್ತಾನೆ ಹಾಗೂ ಎಲ್ಲರಿಗೂ ಒಳ್ಳೆಯ ದನ್ನು ಮಾಡಲಿ ಎಂದು ಅಯ್ಯಪ್ಪ ಸ್ವಾಮಿ ಹಾಗೂ ಗುರು ಶಾಂತಿಶ್ವರನಲ್ಲಿ ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದರು ಇದೇ ಸಂದರ್ಭದಲ್ಲಿ ಮಾಲಾಧಾರಿಗಳಾದ ಅರುಣ್ ಡಿ ಐಹೊಳೆ ಹಾಗೂ ವಿವೇಕ್ ಯಮಕನಮರಡಿ ಅವರು ಬಂದಂತಹ ಭಕ್ತಾದಿಗಳಿಗೆ ಮಹಾಪ್ರಸಾದವನ್ನು ಏರ್ಪಡಿಸಿದ್ದರು ಈ ಸಂದರ್ಭದಲ್ಲಿ ರಾಯಬಾಗದ ಶಾಸಕರಾದ ಡಿಎಂ ಐಹೊಳೆಅವರನ್ನು ಮಠದ ವತಿಯಿಂದ ಹಾಗೂ ಮಾಲಾಧಾರಿಗಳ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಬಿಬಿ ಪೂಜಾರಿ ಸರ್ ನೆರವೇರಿಸಿ ಕೊಟ್ಟರು.

WhatsApp Group Join Now
Telegram Group Join Now
Share This Article