ಎಚ್ಎಲ್ ಸಿ ಕಾಲುವೆಗೆ ಜಲಾಶಯದಿಂದ ನೀರು ಬಿಡುಗಡೆ ರೈತ ಸಂಘದ  ಕೃಷ್ಣಪ್ಪ ಅವರಿಂದ ಪೂಜೆ 

Ravi Talawar
ಎಚ್ಎಲ್ ಸಿ ಕಾಲುವೆಗೆ ಜಲಾಶಯದಿಂದ ನೀರು ಬಿಡುಗಡೆ ರೈತ ಸಂಘದ  ಕೃಷ್ಣಪ್ಪ ಅವರಿಂದ ಪೂಜೆ 
WhatsApp Group Join Now
Telegram Group Join Now
ತುಂಗಭದ್ರಾ ಮೇಲ್ದಂಡೆ ಬಲಕಾಲುವೆಗೆ ಜಲಾಶಯದಿಂದ ನೀರು ಬಿಡಲಾಗಿದ್ದು ನಗರದ ಭತ್ರಿ ಸಮೀಪದ ಕಾಲುವೆಯಲ್ಲಿ ಹರಿಯುವ ನೀರಿಗೆ  ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗನಕಲ್ ಕೃಷ್ಣಪ್ಪ ಪೂಜೆ ಸಲ್ಲಿಸಿದರು. ಜಲಾಶಯದಿಂದ ನದಿಗೆ ನೀರು ಹರಿ ಬಿಡಲಾಗುತ್ತಿದ್ದು ಇದರಿಂದ ಬಹಳಷ್ಟು ನೀರು ಪೋಲಾಗುತ್ತಿತ್ತು, ಅಧಿಕಾರಿಗಳು ನೀರನ್ನು ಕಾಲುವೆಗೆ ಬಿಟ್ಟು ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.  ಇದಕ್ಕಾಗಿ ಅಧಿಕಾರಿಗಳಿಗೆ ಎಚ್‌ಎಲ್‌ಸಿ ಕಾಲುವೆಯ ಅಚ್ಚುಕಟ್ಟಿನ ರೈತರು ಧನ್ಯವಾದಗಳು ತಿಳಿಸಿದ್ದಾರೆ ಎಂದು ಕೃಷ್ಣಪ್ಪ ತಿಳಿಸಿದರು.
 ಈ ಸಂದರ್ಭದಲ್ಲಿ ಕೊಳಗಲ್ ಎರಿಸ್ವಾಮಿ,  ಬೈಲೂರು ವೀರೇಶ್  ಮಾರಣ್ಣ ಸೇರಿದಂತೆ ಇತರರಿದ್ದರು.
WhatsApp Group Join Now
Telegram Group Join Now
Share This Article