ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನದಿಂದ ವಿಶ್ವ ಪರಿಸರ ದಿನಾಚರಣೆ

Ravi Talawar
ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನದಿಂದ ವಿಶ್ವ ಪರಿಸರ ದಿನಾಚರಣೆ
WhatsApp Group Join Now
Telegram Group Join Now

ಬೆಳಗಾವಿ: ಸದಾಕಾಲ ಸಮಾಜಮುಖೀ ಯಾಗಿ ಕೆಲಸ ಮಾಡುವ, ಸಂಘ-ಸಂಸ್ಥೆಗಳು ಪ್ರತಿಭೆಗಳನ್ನು ಗುರುತಿಸುವ  ಕಾರ್ಯ ಜನರ ಮನಸ್ಸಿನಲ್ಲಿ ಸದಾ ಅಚ್ಚಳಿಯದೆ ಉಳಿಯುತ್ತವೆ. ಸಮಾಜ ಸೇವೆಯಿಂದ ಬಹಳಷ್ಟು ನೆಮ್ಮದಿ  ಕೂಡ ಸಿಗುತ್ತದೆ ಎಂದು ಪೂಜ್ಯ ಶ್ರೀ ಚಿತ್ ಪ್ರಕಾಶಾನಂದ ಸ್ವಾಮೀಜಿ ಹೇಳಿದರು.

ಇಲ್ಲಿನ ತಿಲಕವಾಡಿಯ ಶಾಂತಿನಗರದಲ್ಲಿರುವ ಆರ್ಷ ವಿದ್ಯಾ ಆಶ್ರಮದಲ್ಲಿ ಹಿಂಡದವಾಡಿಯ ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾದ ವಿಶ್ವ ಪರಿಸರ ದಿನಾಚರಣೆಯ ನಿಮಿತ್ತ ಹಲವು ಸಸಿ ನೆಡುವ ಕಾರ್ಯ ನೆರವೇರಿಸಿ ಅವರು  ಮಾತನಾಡಿದರು.

ಸಮಾಜಕ್ಕೆ ನಾವು ಏನಾದರೂ  ಕೊಡುಗೆ ನೀಡಬೇಕಿದೆ. ಅತಂಹ ಕಾರ್ಯವನ್ನು ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನದ ಹಲವು ವರ್ಷಗಳಿಂದ ಸದಾಕಾಲ ಸಮಾಜ ಸೇವೆಯಲ್ಲಿ ನಿರತರಾಗಿರುವ ಸಂಸತ ಎನ್ನುತ್ತ,   ಪರಿಸರ ಸಂರಕ್ಷಣೆ ನಮ್ಮ ಹೊಣೆಯಾಗಿದೆ.  ಅದಕ್ಕಾಗಿ ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು. ಶುದ್ಧ ನೀರು, ಗಾಳಿ ಸಿಗಬೇಕಾದರೆ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಬೇಕು. ಇಂದಿನಿಂದ ಮಂಡಳದ ಮಹಿಳೆಯರು ತಯಾರಿಸಿದ ಬಟ್ಟೆಯ ಚೀಲಗಳನ್ನು ಉಪಯೋಗಿಸಬೇಕು ಎಂದು ಹೇಳಿದರು

ಪ್ರದೀಪ ವಸುಪಾಲ ಬಾಗಿ ಮಾತನಾಡಿ, ಮಕ್ಕಳಲ್ಲಿ ಪರಿಸರ ಪ್ರೇಮ ಮತ್ತು ಪರಿಸರ ನಾಶದಿಂದಾಗುವ ದುಷ್ಟರಿಣಾಮಗಳ ಕುರಿತು ತಿಳಿಸುವ ಕೆಲಸ ಮಾಡಿದರೆ, ಮುಂದಿನ ದಿನಗಳಲ್ಲಿ  ಉತ್ತಮ ವಾತಾವರಣ ನಿರ್ಮಾಣವಾಗಲಿದೆ.  ಯಾವ ಗಿಡವನ್ನು ಹೇಗೆ ಹಚ್ಚಬೇಕು ಅದರಿಂದ ಮಾನವರಿಗೆ ಹಾಗೂ ಪ್ರಕೃತಿಗೂ ಕೂಡ ಹೇಗೆ ಅನುಕೂಲವಾಗುತ್ತದೆ ಎನ್ನುತ್ತ,  ತಮ್ಮ ತೋಟದಲ್ಲಿ ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ಸಾವಯವ ಗೊಬ್ಬರವನ್ನು ಬಳಸುತ್ತಿರುವುದಾಗಿ ತಿಳಿಸಿದರು.

ರಾಜೀವ್ ಕೃಷ್ಣ ಮೇತ್ರಿ ಕೌನ್ಸಿಲರ್ ನಾರ್ತ್ ವೇಲ್ಸ್ ಲಂಡನ್ ಮಾತನಾಡಿ, ವಿದೇಶದಲ್ಲಿ ಪ್ಲಾಸ್ಟಿಕ್ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಭಾರತ ಅತೀ ಹೆಚ್ಚು ಬಳಕೆಯಲ್ಲಿದೆ ಹೀಗಾಗಿ ನಾವು ದಿಟ್ಟ ನಿರ್ಧಾರ ಮಾಡಿ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ಮಂಡಳದ ಅಧ್ಯಕ್ಷ ಮಂಗಲ ರಾಜೇಂದ್ರ ಮಠದ ಸ್ವಾಗತಿಸಿ, ಅರ್ಷ ಆಶ್ರಮದ ಮಕ್ಕಳ ಶಿಕ್ಷಣ ಊಟ ವಸತಿ ಗಾಗಿ ತಗಲುವ ವೆಚ್ಚವನ್ನು ಭರಿಸುತ್ತಿರುವ ಮಂಡಳದ ಸಹೋದರಿಯರು ನೀಡುತ್ತಿರುವ ಸಹಾಯ ಸಹಕಾರಕ್ಕಾಗಿ ಧನ್ಯವಾದ ತಿಳಿಸಿದರು.

ಈ ವೇಳೆ ಆಶ್ರಮದ ಮಕ್ಕಳಿಗೆ ವೀಣಾ ಗಡತನ್ನವರ  ಪೆನ್ಸಿಲ್ ಹಾಗೂ ನೋಟ್‌ ಬುಕ್‌ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಶೋಭಾ ಕಾಡನ್ನವರ ಪ್ರಾರ್ಥಿಸಿದರು.  ಮಂಡಳದ ಕಾರ್ಯದರ್ಶಿ ರೇಣುಕಾ ಕಾಂಬಳೆ ಪ್ರಸ್ತಾವಿಕವಾಗಿ ಮಾತನಾಡಿದರು.  ಆಶಾ ನಿಲಜಗಿ ಅತಿಥಿ ಪರಿಚಯ ಮಾಡಿದರು.   ರತ್ನ  ಗುಡೇರ ನಿರೂಪಿಸಿದರು. ಭಾರತಿ ರತ್ನಪ್ಪಗೋಳ ವಂದಿಸಿದರು.

WhatsApp Group Join Now
Telegram Group Join Now
Share This Article