ಧಾರವಾಡ:ಕಾರ್ಮಿಕರ ಆರೋಗ್ಯ ತಪಾಸಣೆಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಇಂದು ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಆಯೋಜಿಸಲಾಗಿತ್ತು.
ಯುನೈಟೆಡ್ ಸೆಕ್ಯುರಿಟಿ ಪೋರ್ಸ್ ಹಾಗೂ ಜಿಆರ್ ಪಿ ಎಸ್ ಸೆಕ್ಯುರಿಟಿ ,ಫೆಸಿಲಿಟಿ ಮ್ಯಾನೇಜ್ಮೆಂಟ್ ಸರ್ವಿಸಿಸ್ ವತಿಯಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಯಿತು.
,ಹುಬ್ಬಳ್ಳಿಯ
ವಿವೇಕಾನಂದ ಜನರಲ್ ಹಾಸ್ಪಿಟಲ್ ಇವರ ಸಹಯೋಗದೊಂದಿಗೆ ಶಿಬಿರವನ್ನು ಎರಡು ದಿನಗಳ ಕಾಲ ಆಯೋಜನೆ ಮಾಡಲಾಗಿದೆ., ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಎಲ್ಲಾ ಕಾರ್ಮಿಕರ ಆರೋಗ್ಯ ಹಿತದೃಷ್ಟಿಯಿಂದ ಆಯೋಜಿಸಲಾಗಿದ್ದು,
ಹೃದಯ ರೋಗ, ನರ ರೋಗ, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಇಎನ್ ಟಿ ತಪಾಸಣೆ ಮಾಡಲಾಯಿತು. ಈ ಶಿಬಿರದಲ್ಲಿ ದಿನಕ್ಕೆ ಒಂದು ಸಾವಿರ ಕಾರ್ಮಿಕರ ತಪಾಸಣೆ ಮಾಡಲು ಸನ್ನದ್ದಾರಗಿದ್ದೆವೆ ಎಂದು ಯುನೈಟೆಡ್ ಸೆಕ್ಯೂರಿಟಿ ಪೂರ್ಸ್ ಮಾಲಿಕರಾದ ಸಂತೋಷ ಇಂಚಲ್ ಅವರು ಹೇಳಿದರು.