ಧಾರವಾಡ : ಶಿವಳ್ಳಿ ಗ್ರಾಮ ಪಂಚಾಯತ ಒಕ್ಕೂಟದ ಮಹಿಳೆಯರ ಸ್ವ ಉದ್ಯೋಗವಾದ ಹೆಮ್ಮೆಯ ಬ್ರ್ಯಾಂಡ್ “ಅಕ್ಕ” ಸಿಹಿ ತಿನಿಸುಗಳನ್ನು ಕಾರ್ಮಿಕ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಸಿಹಿ ತಿನಿಸುವ ಮೂಲಕ ಮಹಿಳೆಯರಿಗೆ ಪ್ರಶಂಸೆ ನೀಡಿ, ಬೆಂಬಲಿಸಿದರು.
ಧಾರವಾಡ ರುಡಸೆಟನ ಗ್ರಾಮೀಣ ಅಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ಸಹಯೋಗದೊಂದಿಗೆ ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರ ಆರು ದಿನಗಳ ಕಾಲ ಧಾರವಾಡ ಪೇಡಾ, ದೂದ್ ಪೇಡಾ, ಕುಂದಾ ಹಾಗೂ ಇತರೆ ಸಿಹಿ ತಿನಿಸುಗಳ ತರಬೇತಿ ನೀಡಲಾಗಿತ್ತು.
ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್ ಪಾಟೀಲ್, ಜಿ.ಪಂ. ಉಪಕಾರ್ಯದರ್ಶಿ ಬಿ.ಎಸ್.ಮೂಗನೂರುಮಠ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕಿ ರೇಖಾ ಡೋಳ್ಳಿನ್, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.