ಮಹಿಳೆಯರು ಸಬಲೀಕರಣದ ಜೊತೆಗೆ ಸಂಸ್ಕಾರ ಸಂಪ್ರದಾಯವನ್ನು ಮರೆಯಬಾರದು : ಜಗದೀಶ ಪೂಜೇರಿ

A B
By A B
ಮಹಿಳೆಯರು ಸಬಲೀಕರಣದ ಜೊತೆಗೆ ಸಂಸ್ಕಾರ ಸಂಪ್ರದಾಯವನ್ನು ಮರೆಯಬಾರದು : ಜಗದೀಶ ಪೂಜೇರಿ
WhatsApp Group Join Now
Telegram Group Join Now

ಬೆಳಗಾವಿ: 21ನೇ ಶತಮಾನದ ಪ್ರಾರಂಭದಿಂದಲೇ ಮಹಿಳೆಯರ ಸಬಲೀಕರಣ ಉತ್ತುಂಗದಲ್ಲಿದೆ ಪ್ರತಿಯೊಂದು ಕ್ಷೇತ್ರದಲ್ಲಿ ಇವತ್ತು ಮಹಿಳೆಯರು ತಮ್ಮದೇ ಆದ ಗುರುತು ಮೂಡಿಸಿ ದೇಶದ ಆರ್ಥಿಕತೆಯಲ್ಲಿ ಕೂಡ ಸಮಪಾಲನ್ನು ನೀಡುತ್ತಿದ್ದಾರೆ. ಜ್ಞಾನ ವಿಜ್ಞಾನ ತಂತ್ರಜ್ಞಾನದ ಈ ಯುಗದಲ್ಲಿ ಮಹಿಳೆಯರು ಈ ಪವಿತ್ರ ಭರತ ಭೂಮಿಯ ಸಂಪ್ರದಾಯ ಹಾಗೂ ಸಂಸ್ಕಾರಗಳನ್ನು ಬೆಳೆಸಿ,  ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ಸಬಲೀಕರಣಗೊಳಿಸುತ್ತ ಮುಂದಿನ ಪೀಳಿಗೆಗೆ ಮಾರ್ಗದರ್ಶಿ ಆಗಬೇಕು ಎಂದು  ಬೆಳಗಾವಿ ಜಿಲ್ಲೆ ಮಾಜಿ ಸೈನಿಕರ ಸಂಘಟನೆಗಳ ಮಹಾಒಕ್ಕೂಟ ಜಿಲ್ಲಾಧ್ಯಕ್ಷ ಜಗದೀಶ ಪೂಜೇರಿ ಅವರು  ಹೇಳಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲೆ ಮಾಜಿ ಸೈನಿಕರ ಸಂಘಟನೆಗಳ ಮಹಾಒಕ್ಕೂಟ ಹಾಗೂ ಮಹಾಒಕ್ಕೂಟದ ಮಹಿಳಾ ಘಟಕದ  ವತಿಯಿಂದ ಆಯೋಜಿಸಲಾದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು,

ಭಾರತೀಯ ಸಂಸ್ಕೃತಿ, ಸಂಸ್ಕಾರಕ್ಕೆ ವಿಶೇಷ ಸ್ಥಾನ ಇದೆ. ಇದನ್ನು ಬೆಳೆಸುವುದು ಜವಾಬ್ದಾರಿ ಮಹಿಳೆಯರ ಮೇಲಿದೆ.  ಕುಟುಂಬದಲ್ಲಿ ಮಕ್ಕಳನ್ನು ಸಂಸ್ಕಾರ ಕೊಟ್ಟು ಬೆಳೆಸುವಲ್ಲಿ ತಾಯಿಯ ಪಾತ್ರ ಮಹತ್ವದ್ದಾಗಿರುತ್ತದೆ. ಒಂದು ಮಗುವಿಗೆ ಸಂಸ್ಕಾರ ಕೊಟ್ಟರೆ ಇಡೀ ಸಮಾಜ ಸಂಸ್ಕಾರ ಪಡೆಯುತ್ತದೆ. ಅಂತಹ ಸಂಸ್ಕಾರ, ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ದೊಡ್ಡದಿದೆ ಎಂದು ಹೇಳಿದರು.

ದಿವ್ಯ ಸಾನಿಧ್ಯ ವಹಿಸಿ ಪರಮಪೂಜ್ಯ ಶಶಿಕಾಂತ್ ಗುರೂಜಿ ಅವರು ಮಾತನಾಡಿ,   ದೀಪ ಬೆಳಗುತಿದೆ ಉರಿಯುತ್ತಿಲ್ಲ ಮನಸ್ಸುಗಳು ಉರಿಯುತ್ತಿವೆ ಬೆಳಗುತ್ತಿಲ್ಲ ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮ ಮೂಲವನ್ನು ಮರೆಯಬಾರದು. ನಮ್ಮ ಯುವಜನತೆ ಪಶ್ಚಿಮಾತ್ಯ ಆಚರಣೆಗಳನ್ನು ಅಳವಡಿಸಿಕೊಂಡು ನಮ್ಮ ಆಚಾರ ವಿಚಾರ ಪರಂಪರೆಗಳನ್ನು ಮರೆಯುತ್ತಿದ್ದಾರೆ ಹೀಗಾಗಬಾರದು ಎಂದರು.

ಮಾಜಿ ಶಾಸಕರಾದ ಸಂಜಯ್ ಪಾಟೀಲ್  ಅವರು ಮಾತನಾಡಿ,  ಮಹಿಳೆಯರನ್ನು ಗೌರವಿಸುವ ದೇಶ, ಮಣ್ಣು ನಮ್ಮದು.. ಇಂತಹ ಪುಣ್ಯಭೂಮಿಯಲ್ಲಿ ಮಹಿಳೆಯರಿಗೆ ಯಾವಾಗಲೂ ಅತ್ಯುನ್ನತ ಸ್ಥಾನ ಇರುತ್ತದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಯೋಜನಾ ನಿರ್ದೇಶಕರಾದ ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿಯ   ಸುರೇಖಾ ಪಾಟೀಲ್ ಇವರು ಮಾತನಾಡಿ,  ಮಹಿಳೆಯರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಯಾವ ರೀತಿ ಮಹಿಳೆಯರು ಎಚ್ಚೆತ್ತುಕೊಳ್ಳಬೇಕು ಹಾಗೂ ಯಾವ ರೀತಿ ನಮ್ಮ ಸಮಾಜದ ಪರಿವರ್ತನೆಯಲ್ಲಿ ಮಹಿಳೆಯರು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಮಾಜಿ ಶಾಸಕ ಸಂಜಯ್ ಪಾಟೀಲ್ ಇವರು ಸರ್ವಧರ್ಮ ವಧು ವರರ ವೇದಿಕೆಯ ನಾಮಫಲ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರಾದ ರೂಪ ಪಾಟೀಲ್   , ಮಹಿಳಾ ಘಟಕದ ಅಧ್ಯಕ್ಷ ಸುನಿತಾ ಪಟ್ಟಣಶೆಟ್ಟಿ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ರಮೇಶ ಚೌಗಲಾ, ಅನಿತಾ ಮಿರ್ಜಿ ಪ್ರೇಮ್ ಚೌಗಲಾ, ರಮೇಶ ಬಸ್ತವಾಡೆ, ಗಣಪತಿ ದೇಸಾಯಿ, ಹಾಗೂ ಮಹಾಒಕ್ಕೂಟದ ಮಿತ್ರ ಸಂಘಟನೆಗಳ ಎಲ್ಲಾ ಅಧ್ಯಕ್ಷರು ಭಾಗವಹಿಸಿದ್ದರು.   ಸುಧಾ ಚೌಗಲಾ  ಸ್ವಾಗತಿಸಿದರು.  ಪ್ರತಿಭಾ ಬಂಡಿ ಪ್ರಾರ್ಥನಾ ಗೀತೆ ಹಾಡಿದರು.  ಸಂತೋಷ ಕಲಾ ಕುಂಬಾರ  ನಿರೂಪಿಸಿದರು ಸುರೇಖಾ ಚೌಗಲಾ ವಂದಿಸಿದರು.

WhatsApp Group Join Now
Telegram Group Join Now
Share This Article